ಬೈಟುಕಾಫಿ

ಕೊಳೆಯುವಿಕೆಯೇ ಅಸ್ತಿತ್ವವೆ?

Published On :

ನಿಮ್ಮ ಎಲ್ಲಾ ಪ್ರಯತಗಳೂ ಹೆಚ್ಚಿನ ಪ್ರಯತದೆಡೆಗೆ ಕೊಂಡೊಯ್ಯುತ್ತವೆ.
ಯಾವುದನು ಕಟ್ಟಿದ್ದೇವೆಯೋ ಅದನು ಕಾಪಾಡಿಕೊಳ್ಳಲೇಬೇಕು.
ಏನೆಲ್ಲ ಗಳಿಸಿದ್ದೇವೆಯೋ ಅದನು ರಕ್ಷಿಸಿಕೊಳ್ಳಲೇಬೇಕು.
ಕಳೆದು ಹೋಗುವುದೇನಾದರೂ ಇದ್ದರೆ ಅದು ಶಾಶ್ವತವಾದುದ್ದಲ್ಲ.
ಶಾಶ್ವತವಲ್ಲವಾದದ್ದು ಯಾರದ್ದೂ ಅಲ್ಲ, ನಿಮ್ಮದಂತೂ ಖಂಡಿತ ಅಲ್ಲ.
ನಿಮ್ಮದಲ್ಲವಾದುದರಿಂದ ನಿಮಗೆ ಏನು ಉಪಯೋಗ?
ಶಾಶ್ವತವಲ್ಲವಾದುದಕ್ಕೆ ಇನೆಷ್ಟು ಸಮಯ ಅಂಟಿಕೊಂಡಿರುತ್ತೀರಿ?
- ಶ್ರೀ ನಿಸರ್ಗದತ್ತ ಮಹಾರಾಜ
ಭದ್ರತೆ ಎಂದರೆ ನಾವು ಗಳಿಸಿದ ಆಸ್ತಿಗೆ ಅಂಟಿಕೊಂಡಿರುವುದು ಅಥವಾ ಅವಲಂಬಿಸಿರುವುದು. ನಮ್ಮ ಭದ್ರತೆಗೋಸ್ಕರ ನಾವು ಕಷ್ಟಪಟ್ಟು ದುಡಿಯುತ್ತಿದ್ದೇವೆ ಎಂದಾದರೆ ನಮಗೆ ಅರಿವು ಇಲ್ಲದಂತೆಯೇ ನಿಧಾನವಾಗಿ ನಾವು ನಮ್ಮ ಜೀವನವನು ಶಾಶ್ವತವಾಗಿಸಲು ಪ್ರಯತಿಸುತ್ತಿದ್ದೇವೆ ಎಂದಾಯಿತು. ಇದು ಸದಾ ಕ್ಷಣದಿಂದ ಕ್ಷಣಕ್ಕೆ ಬದಲಾಗುವ ಅಶಾಶ್ವತವಾದ ಪ್ರಕೃತಿ ನಿಯಮದ ವಿರುದ್ಧ. ದುರಂತವೆಂದರೆ, ಹಣವಾಗಲೀ, ಆಸ್ತಿಯಾಗಲೀ ಜೀವನದಲ್ಲಿ ತಾತ್ಕಾಲಿಕ. ಆಗಾಗ ಬದಲಾಗುತ್ತಾ ಇರುವಂತಹದ್ದು.
ಜೀವನವೆಂಬುದು ವಿಶಾಲವಾಗಿ ಹರಿಯುವ ನದಿಯಂತೆ. ಆದರೆ ಮನುಷ್ಯ ಅದರ ಪಕ್ಕದಲ್ಲಿ ಒಂದು ಚಿಕ್ಕ ಕೊಳವನು ನಿರ್ಮಿಸಿಕೊಂಡು ಅದರಲ್ಲಿಯೇ ಕೊಳೆತು, ನಾರಿ ಜೀವನ ಮುಗಿಸುತ್ತಾನೆ. ಈ ಕೊಳೆಯುವಿಕೆಯನೇ ತನ ಅಸ್ತಿತ್ವ ಎಂದುಕೊಳ್ಳುತ್ತಾನೆ. ಬ್ರಹ್ಮಾಂಡದ ಜೀವನ ಚಕ್ರದಲ್ಲಿ ಒಬ್ಬ ಮನುಷ್ಯನ ಜೀವನವೆಂದರೆ, ಮಧ್ಯಂತರದಲ್ಲಿ ಆಗುವ ಒಂದು ಕ್ಷಣ ಮಾತ್ರ. ಅದನರಿಯದೇ ತನ ಬೇಕು-ಬೇಡಗಳನಷ್ಟೇ ನೋಡಿಕೊಂಡು, ತಾನು ಸುಖವಾಗಿರಬಹುದೆಂದು ಯೋಚಿಸುತ್ತಾ ಕೊಳದಲ್ಲಿರಲು ಪ್ರಯತಿಸುತ್ತಿರುವಾಗ ಪಕ್ಕದಲ್ಲಿ ನದಿಯಂತೆ ಹರಿದುಹೋಗುವ ವಿಶಾಲವಾದ ಜೀವನದ ಅನುಭವದಿಂದ ವಂಚಿತನಾಗುತ್ತಾನೆ. ತನ ಕೊಳದಲ್ಲಿ ತಾನು ಸುಖವಾಗಿದ್ದೇನೆಂದು ತಿಳಿದು ಬದುಕಿದರೆ, ಪಕ್ಕದ ನದಿಯಲ್ಲಿ ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಆಗುವ ಬದಲಾವಣೆಯನು ಗಮನಿಸುವುದು ಹೇಗೆ? ಆಗ ವ್ಯಕ್ತಿ ತನಗೆ ತಿಳಿಯದಂತೆಯೇ ತಾನು ತಿಳಿದಿರುವ ವಿಷಯಕ್ಕೆ ಮಾತ್ರ ಅಂಟಿಕೊಳ್ಳುತ್ತಾನೆ. ಈ ರೀತಿ ಯಾವುದೇ ಒಂದು ವಿಷಯಕ್ಕೆ ಅಂಟಿಕೊಂಡರೆ, ಅದನು ಕಳೆದುಕೊಳ್ಳುವ ಭಯ ಅಥವಾ ಅದು ಬದಲಾದರೆ ಮುಂದೇನು ಎಂಬ ಚಿಂತೆ ಅವನಲ್ಲಿ ಆವರಿಸಲು ಆರಂಭವಾಗುತ್ತದೆ. ಆಗ ಅದರ ಭದ್ರತೆಗಾಗಿ ಏನೆಲ್ಲ ಮಾಡಬಹುದೋ ಅದರ ಕುರಿತಾಗಿ ಯೋಚಿಸಿ, ಸಂಪೂರ್ಣ ಶಕ್ತಿಯನು ಅದಕ್ಕಾಗಿ ವ್ಯಯಿಸುತ್ತಾನೆ. ಒಮ್ಮೆ ತನ ರಕ್ಷಣೆಯ ವಿಚಾರ ತಲೆಯಲ್ಲಿ ಸುಳಿಯಲಾರಂಭಿಸಿದರೆ, ಇನ್ಯಾವುದೇ ಆಗುಹೋಗುಗಳಿಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ತನ ರಕ್ಷಣೆಯ ಬಗ್ಗೆಯೇ ಯೋಚಿಸುತ್ತಾ, ಅದಕ್ಕೆಂದೇ ಶ್ರಮ ಪಡುವುದು ಕ್ರಮೇಣ ಯಾಂತ್ರಿಕವಾಗುತ್ತದೆ.
(ಮುಂದುವರಿಯುವುದು)


-ಕಿರಣ್ ಉಪಾಧ್ಯಾಯ
 keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.