ಬೈಟುಕಾಫಿ

ಗುರು- ಲಘು

ಗುರುಗಳೊಬ್ಬರು ಅರಣ್ಯದಲ್ಲಿ ಆಶ್ರಮ ಕಟ್ಟಿಕೊಂಡು ಶಿಷ್ಯರಿಗೆ ಪಾಠ ಹೇಳುವುದರಲ್ಲಿ ನಿರತರಾಗಿದ್ದಾರೆ. ಅವರ ಬಳಿ ಇರುವ ಶಿಷ್ಯರಾದರೋ...

ಗುರು- ಲಘು
Published On :

ಗುರುಗಳೊಬ್ಬರು ಅರಣ್ಯದಲ್ಲಿ ಆಶ್ರಮ ಕಟ್ಟಿಕೊಂಡು ಶಿಷ್ಯರಿಗೆ ಪಾಠ ಹೇಳುವುದರಲ್ಲಿ ನಿರತರಾಗಿದ್ದಾರೆ. ಅವರ ಬಳಿ ಇರುವ ಶಿಷ್ಯರಾದರೋ ಹತ್ತಾರು ವರ್ಷಗಳಿಂದ ಅವರ ಬಳಿ ಇದ್ದುಕೊಂಡು, ನಿಷ್ಠುರ ಬ್ರಹ್ಮಚರ್ಯವನ್ನು ಪಾಲಿಸುತ್ತ, ಅಧ್ಯಯನದಲ್ಲಿ ಮಾತ್ರ ಮನಸ್ಸನ್ನು ನೆಟ್ಟವರು. ಇಂಥ ಗುರುಗಳ ಬಳಿಗೆ ಒಮ್ಮೆ ಆ ರಾಜ್ಯದ ರಾಜ ಆಗಮಿಸುತ್ತಾನೆ. ಆತನೊಂದಿಗೆ ಆತನ ಅಂತಃಪುರದ ರಾಣಿಯರು, ರಾಜರಾಣಿಯರ ಪುತ್ರಿಯರಾದ ಸುಕುಮಾರ ಷೋಡಶಿಯರು, ಅವರ ಹಿಂದೆ ಮುಂದೆ ಸುಳಿಯುವ ಸಖಿಯರು ಬಂದಿದ್ದಾರೆ. ಅವರನ್ನು ನೋಡಿದ್ದೇ, ಶಿಷ್ಯರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದ ಬ್ರಹ್ಮಚರ್ಯವೆಲ್ಲ ಹಾರಿಹೋಗಿದೆ. ರಾಜಕುಮಾರಿಯರ ಹಿಂದೆಮುಂದೆ ಸುಳಿಯುತ್ತ ಜೊಲ್ಲು ಸುರಿಸಲು ಆರಂಭಿಸಿದ್ದಾರೆ. ಅದನ್ನು ನೋಡಿ ಗುರುಗಳ ತಲೆ ಬಿಸಿಯಾಗಿದೆ. ಅವರು ಉದ್ಗರಿಸುತ್ತಾರೆ:

ಗರಿಮಾಣಮರ್ಪಯಿತ್ವಾ ಲಘಿಮಾನಂ ಕುಚತಟಾತ್ಕುರಂಗದೃಶಾಮ್
ಸ್ವೀಕುರ್ವತೇ ನಮಸ್ತೇ ಯೂನಾಂ ಧೈರ್ಯಾಯ ನಿರ್ವಿವೇಕಾಯ


'ಎಲಾ ತರುಣರೇ! ನಿಮ್ಮ ವಿವೇಕವಿಲ್ಲದ ವರ್ತನೆ, ಭಂಡ ಧೈರ್ಯಕ್ಕೆ ದೊಡ್ಡ ನಮಸ್ಕಾರ! ಜಿಂಕೆ ಕಣ್ಣುಗಳ ತರುಣಿಯರನ್ನು ಕಂಡ ಕೂಡಲೇ ಅವರ ಕುಚಗಳಿಗೆ ನಿಮ್ಮ ಗುರುತ್ವವನ್ನೆಲ್ಲ ಸಲ್ಲಿಸಿ ಲಘುತ್ವವನ್ನು ಪಡೆದೇಬಿಟ್ಟಿರಲ್ಲ!'
ಇದರ ಸ್ವಾರಸ್ಯ ಇಲ್ಲಿದೆ: ಇದುವರೆಗೆ ಬಾಲೆಯರಾಗಿದ್ದ ತರುಣಿಯರ ಎದೆಗಳು ಈಗ ತಾನೆ ಚಿಗುರಿ ವಿಕಾಸಗೊಂಡು ಭಾರವಾಗುತ್ತಿವೆ. ಕಾಮದ ಕೈಗೆ ಬುದ್ಧಿ ಕೊಟ್ಟ ಈ ಬ್ರಹ್ಮಚಾರಿ ವಟುಗಳು ಇಷ್ಟು ವರ್ಷಗಳ ಅಧ್ಯಯನ, ನಿಷ್ಠೆಗಳಿಂದ ಪಡೆದ ವ್ಯಕ್ತಿತ್ವದ ತೂಕವನ್ನು ಆ

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.