ಬ್ಯಾಕ್ಟೀರಿಯಾ ಕೊಲ್ಲುವ ಬೆರ್ರಿ ಹಣ್ಣುಗಳು

ಶಿಶುವಿಗೆ ಅನಾರೋಗ್ಯ ಕಾಡಿದರೆ ಮನೆಮಂದಿಗೆಲ್ಲ ಚಿಂತೆ. ಅದರಲ್ಲೂ ತಾಯಿಯ ಕಳವಳವಂತೂ ಹೇಳತೀರದು. ಶೀತ, ಕಫ ಇವೆಲ್ಲ ಶಿಶುವಿಗೆ ಸಾಮಾನ್ಯವಾಗಿ ಬರುವ ತೊಂದರೆಗಳು. ಹಾಗೆಯೇ ಅತಿಸಾರ ಕೂಡ. ಗಮನಿಸಬೇಕಾದ ಅಂಶವೆಂದರೆ ತಾಯಿಯ ಆಹಾರ ಮಗುವಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎದೆ ಹಾಲು ಕುಡಿಸುತ್ತಿರುವ ತಾಯಂದಿರು ಎಷ್ಟು ಹುಷಾರಾಗಿದ್ದರೂ ಸಾಲದು. ಕೆಲವು ಸೋಂಕು, ಬ್ಯಾಕ್ಟೀರಿಯಾಗಳು ಎದೆ ಹಾಲಿನ ಮೂಲಕವೂ ಮಗುವಿನ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಮಗು ಮೇಲಿಂದಮೇಲೆ ಅತಿಸಾರಕ್ಕೆ ತುತ್ತಾಗುತ್ತಿದೆ ಎಂದಾದರೆ ತಾಯಿಯೂ ಹಾಲು ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ಹಾಲು ಮಕ್ಕಳೂ ಸೇರಿದಂತೆ ಬಹಳಷ್ಟು ಜನರಿಗೆ ಅಲರ್ಜಿ. ಅದು ಕಾಣಿಸಿಕೊಳ್ಳುವುದು ಭೇದಿಯ ರೂಪದಲ್ಲಿ. ಹಾಲಿನಲ್ಲಿ ಕ್ಯಾಲ್ಶಿಯಂ ಅಧಿಕವಾಗಿರುತ್ತದೆ, ಹೀಗಾಗಿ ಬಾಣಂತಿಯ ಮೂಳೆಗಳು ಗಟ್ಟಿಯಾಗಲು ಹಾಲೇ ಅತ್ಯುತ್ತಮ ಪರಿಹಾರ ಎನ್ನುವುದು ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿರುವ ಭಾವನೆ. ಇದೇ ಕಾರಣದಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಬಾಣಂತಿಯರಿಗೆ ಹಾಲು ಕುಡಿಯಲು ಸಲಹೆ ಮಾಡುತ್ತಾರೆ. ತಾಯಿ ಕುಡಿಯುವ ಆಕಳು ಅಥವಾ ಎಮ್ಮೆ ಹಾಲು ಒಮ್ಮೊಮ್ಮೆ ಮಗುವಿಗೆ ಅಲರ್ಜಿ ಉಂಟುಮಾಡುವ ಸಾಧ್ಯತೆ ಅಧಿಕ. ಆದ್ದರಿಂದ ಮಗು ಆಗಾಗ ಅತಿಸಾರಕ್ಕೆ ತುತ್ತಾಗುತ್ತಿದ್ದರೆ ತಾಯಿ ಒಂದು ವಾರ ಹಾಲು ಕುಡಿಯುವುದನ್ನು ನಿಲ್ಲಿಸಬೇಕು. ಆ ಅವಧಿಯಲ್ಲಿ ಮಗುವಿಗೆ ಅತಿಸಾರ ಕಾಣಿಸಿಕೊಳ್ಳದಿದ್ದರೆ ಹಾಲಿನಿಂದಲೇ ಅಲರ್ಜಿ ಆಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು ಮತ್ತು ಬಾಣಂತಿ ಹಾಲು, ಮೊಸರು, ತುಪ್ಪ ಇತ್ಯಾದಿ ಹಾಲಿನ ಉತ್ಪನ್ನಗಳನ್ನು ವರ್ಜಿಸುವುದು ಒಳ್ಳೆಯದು. ಕ್ಯಾಲ್ಶಿಯಂಗಾಗಿ ಪೂರಕ ಆಹಾರ ಸೇವನೆ ಅಥವಾ ವೈದ್ಯರ ಸಲಹೆ ಮೇರೆಗೆ ಟಾನಿಕ್ ಮೊದಲಾದವನ್ನು ತೆಗೆದುಕೊಳ್ಳಬಹುದು. ಹಾಲನ್ನು ಬಿಡಲು ಸಾಧ್ಯವೇ ಇಲ್ಲ ಎನ್ನುವವರಿಗೆ ಪರ್ಯಾಯ ಮಾರ್ಗವೂ ಇದೆ. ಅದೆಂದರೆ ಹಾಲಿನ ಪೌಷ್ಟಿಕಾಂಶಗಳನ್ನು ತಟಸ್ಥಗೊಳಿಸುವ ಪದಾರ್ಥಗಳನ್ನು ಮಗುವಿಗೆ ಕೊಡುವುದು. ಅಂತಹ ಹಲವು ದ್ರಾವಣಗಳು ಔಷಧ ಅಂಗಡಿಗಳಲ್ಲಿ ಸಿಗುತ್ತವೆ. ಆದರೆ ವೈದ್ಯರ ಸಲಹೆ ಇಲ್ಲದೆ ಏನನ್ನೂ ಕೊಡಬಾರದು.
ಮಕ್ಕಳಿರಲಿ, ದೊಡ್ಡವರೇ ಇರಲಿ. ಅತಿಸಾರಕ್ಕೆ ಇನ್ನೊಂದು ಸುಲಭ ಮದ್ದು ಎಂದರೆ ಬೆರ್ರಿ ಹಣ್ಣುಗಳು. ಬ್ಲ್ಯಾಕ್ ಬೆರ್ರಿ ಅಥವಾ ಬ್ಲೂಬೆರ್ರಿ ಎರಡೂ ಒಳ್ಳೆಯದೇ. ಬ್ಲೂಬೆರ್ರಿ ಹೆಚ್ಚು ಪರಿಣಾಮಕಾರಿ. ವಿಶೇಷತಃ ಮಕ್ಕಳಿಗೆ ಬೆರ್ರಿ ಸೂಪ್ ಕೊಟ್ಟರೆ ಅತಿಸಾರ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಬೆರ್ರಿ ಹಣ್ಣುಗಳಲ್ಲಿ ಇ ಕೋಲಿ ಸೇರಿದಂತೆ ಅತಿಸಾರ ಹರಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ರಾಸಾಯನಿಕಗಳು ಇವುಗಳಲ್ಲಿ ಇವೆ. ಬೆರ್ರಿಹಣ್ಣುಗಳ ಸಾರದಿಂದ ಸಿದ್ಧಪಡಿಸಿದ ಔಷಧಗಳು ಪಾಶ್ಟಾತ್ಯ ರಾಷ್ಚ್ರಗಳಲ್ಲಿ ಜನಪ್ರಿಯವಾಗಿವೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


