ಗಂಡನೆಂಬುದೇ ಕೊರತೆ

ಪ್ರೇಮ ಪ್ರಣಯದ ವಿಚಾರದಲ್ಲಿ ಮನಸ್ಸು ಏನನ್ನು ಅಪೇಕ್ಷಿಸುತ್ತದೆ ಎಂದು ಊಹಿಸುವುದೇ ಕಷ್ಟ. ಗಂಡು- ಹೆಣ್ಣಿನ ನಡುವಿನ ಕಾಮಕ್ಕೆ ವಿವಾಹದ ಕಟ್ಟನ್ನು ಹಿಂದಿನವರು ಹಾಕಿದರು. ಕಾಮಕ್ಕೆ ಚೌಕಟ್ಟನ್ನು ಹಾಕಿದ ಈ ಘಟನೆ, ಮಾನವ ಚರಿತ್ರೆಯಲ್ಲಿ ಮಹತ್ವದ್ದು. ಅದು ಭದ್ರತೆಯನ್ನೇನೋ ತಂದಿತು. ಕಸಿವಿಸಿಯನ್ನು ತರಬಾರದು ಎಂದರೆ ಆಗುತ್ತದೆಯೆ?
ಆಕಾರೇಣ ಶಶೀ ಗಿರಾ ಪರಭೃತಃ ಪಾರಾವತಶ್ಚುಂಬನೇ
ಹಂಸಶ್ಚಕ್ರಮಣೇ ಸಮಂ ದಯಿತಯಾ ರತ್ಯಾಂ ವಿಮರ್ದೇ ಗಜಃ
ಇತ್ಥಂ ಭರ್ತರಿ ಮೇ ಸಮಸ್ತಯುವತಿಶ್ಲಾಘ್ಯೈರ್ಗುಣೈಃ ಕಿಂಚನ
ನ್ಯೂನಂ ನಾಸ್ತಿ ಪರಂ ವಿವಾಹಿತ ಇತಿ ಸ್ಯಾನ್ನೈಕದೋಷೋ ಯದಿ
ಅವರಿಬ್ಬರೂ ಸುರಸುಂದರ- ಸುಂದರಿಯರು, ಸಕಲಸದ್ಗುಣಸಂಪನ್ನರು, ಪ್ರೀತಿಸಿ ಮದುವೆಯಾದರು. ಕೆಲವು ವರ್ಷಗಳೇ ಕಳೆದವು. ಆಗ ಈ ಅನುರೂಪ ಯುವಯುಗಳದ ಸಂಸಾರ ಹೇಗಿದೆಯೆಂದು ನೋಡಲು ವಧುವಿನ ಬಾಲ್ಯದ ಗೆಳತಿ ಆಕೆಯ ಮನೆಗೆ ಬಂದಳು. ಕೇಳಿದಳು- ಹೇಗಿದೆ ಕಣೇ, ನಿನ್ನ ಅಂತಃಪುರದ ಬದುಕು?
ವಧು ಉತ್ತರಿಸಿದಳು: ಹೇಗಿದೆ ಅಂತ ಹೇಳಲಿ! ನನ್ನ ಗಂಡನ ಆಕಾರ ಚಂದ್ರನಂತೆ ಮನೋಹರ. ಮಾತಾಡುವಾಗ ಕೋಗಿಲೆಯ ಇಂಪಿನ ಸವಿ. ಚುಂಬಿಸುವುದಕ್ಕೆ ತೊಡಗಿದರೆ ಪಾರಿವಾಳದಂತೆ ಸೊಗಸು. ಹಂಸಪಕ್ಷಿಗಳಂತೆ ಯಾವಾಗಲೂ ಜತೆಗಿರುತ್ತಾನೆ. ರತಿಕ್ರೀಡೆಗೆ ತೊಡಗಿದರೆ ಅವನು ಆನೆಯಂತೆ ದೃಢ, ಸುದೀರ್ಘಭೋಗಸಮರ್ಥ! ಹೀಗೆ ಎಲ್ಲ ತರುಣಿಯರು ತಮ್ಮ ಗಂಡನಲ್ಲಿ ಏನೆಲ್ಲ ಇರಬೇಕೆಂದು ಬಯಸುತ್ತಾರೋ ಅದೆಲ್ಲವೂ ಆತನಲ್ಲಿ ಇವೆ. ಒಂದೇ ಒಂದು ಕೊರತೆ- ಆತ ನನ್ನ ಗಂಡ ಎಂಬುದೇ!
ಇದು ಆ ಹೆಣ್ಣುಮಗಳ ಮಾತಾಯಿತು. ಗಂಡಸರ ಮನದಿಚ್ಛೆಯನ್ನು ಯಾರಾದರೂ ದಾಖಲಿಸಿದರೆ!?
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


