ದರಿದ್ರ ದೇವೋಭವ!
ಸ್ವಾಮಿ ವಿವೇಕಾನಂದರು ತಿರುವನಂತಪುರಂನಲ್ಲಿ ಪ್ರೊ. ಕೆ. ಸುಂದರರಾಮ ಅಯ್ಯರ್ ಅವರ ಅತಿಥಿಯಾಗಿದ್ದಾಗ ಸ್ವಾಮೀಜಿ ಪ್ರಭಾವಕ್ಕೊಳಗಾಗಿ ಅವರನ್ನು ಇತರರಿಗೂ ಪರಿಚಯಿಸಲು ಕ್ಲಬ್ಗೆ ಕರೆದೊಯ್ದರು. ಅಲ್ಲಿ ಸುಪ್ರಸಿದ್ಧ ಪ್ರಾಚಾರ್ಯರು, ಗಣ್ಯರು, ದಿವಾನರು ಸೇರಿದ್ದರು. ಇವರೆಲ್ಲ ಸ್ವಾಮೀಜಿಯೊಡನೆ ಮಾತನಾಡುತ್ತಿರುವಾಗ ಅಲ್ಲೊಂದು ಕೂತೂಹಲಕರ ಘಟನೆ ನಡೆಯಿತು.
ಗಣ್ಯರೊಬ್ಬರು ಮನೆಗೆ ಹೊರಟರು. ಹೊರಡುವ ಮುನ್ನ ದಿವಾನರಿಗೆ ಕೈಮುಗಿದು ನಮಸ್ಕರಿಸಿದರು. ದಿವಾನರು ತಮ್ಮ ಎಡಗೈಯನ್ನು ಸ್ವಲ್ಪಮಾತ್ರ ಮೇಲೆತ್ತಿ ಪ್ರತಿನಮಸ್ಕರಿಸಿದರು. ಸ್ವಾಮೀಜಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ವಿಷಯವೇನೆಂದು ಅವರಿಗೆ ಕ್ಷಣಮಾತ್ರದಲ್ಲಿ ಅರಿವಾಯಿತು.
ಸ್ವಲ್ಪ ಸಮಯದ ಬಳಿಕ ಅಲ್ಲಿಂದ ಹೊರಟ ದಿವಾನರು ಸ್ವಾಮೀಜಿಗೆ ಕೈಮುಗಿದರು. ಆಗ ಸ್ವಾಮೀಜಿ 'ನಾರಾಯಣ!' ಎಂದಷ್ಟೇ ಹೇಳಿ ಸುಮ್ಮನಾದರು. ದಿವಾನರಿಗೆ ಅಸಮಾಧಾನವಾಯಿತು. ಸ್ವಾಮೀಜಿ ಪ್ರತಿನಮಸ್ಕರಿಸುತ್ತಾರೆಂದು ಅವರು ನಿರೀಕ್ಷಿಸಿದ್ದರು. ಅದೂ ತಮ್ಮಂತಹ ಹಿರಿಯ, ಗೌರವಾನ್ವಿತ ವ್ಯಕ್ತಿಗೆ ಈ ಅಪರಿಚಿತ ಯುವಸನ್ಯಾಸಿ ಹೀಗೆ ಪ್ರತಿವಂದಿಸಿದ್ದು ಅವಮಾನಕರ ಎಂದು ಭಾವಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸ್ವಾಮೀಜಿ 'ಅಲ್ಲ, ನೀವು ಮಾತ್ರ ಆ ಗಣ್ಯರಿಗೆ ನಿಮ್ಮ ಸಂಪ್ರದಾಯದಂತೆ ಪ್ರತಿವಂದಿಸಬಹುದು! ನಾನು ಹಿಂದೂ ಸನ್ಯಾಸಿಗಳ ಸಂಪ್ರದಾಯದಂತೆ 'ನಾರಾಯಣ' ಎಂದರೆ ಅದಕ್ಕೇಕೆ ಮುನಿಸಿಕೊಳ್ಳುತ್ತೀರಿ' ಎಂದರು. ಇದು ಅವರನ್ನು ಮುಟ್ಟಿತು.ದಿವಾನರು ಮರುದಿನ ತಮ್ಮ ವರ್ತನೆಗಾಗಿ ಕ್ಷಮೆ ಯಾಚಿಸಿದರು.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

