ಬೈಟುಕಾಫಿ

ವೋಟಿಂಗ್ ಸ್ಟಾರ್

ವೋಟಿಂಗ್ ಸ್ಟಾರ್
Published On :

ಚುನಾವಣೆ ಹಾಗೂ ರಾಜಕೀಯದ ಬಗೆಗೆ ನನಗೊಂದು ಹೇವರಿಕೆ ಇದೆ. ಇರೋವ್ರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿ ಕಳಿಸಬೇಕಾದ ಅನಿವಾರ್ಯತೆ ನಮಗೇಕೆ? 'ಮತದಾನ ನಮ್ಮ ಹಕ್ಕು, ಅದನ್ನ ವ್ಯರ್ಥ ಮಾಡಿಕೊಳ್ಳಬಾರದು' ಎಂಬ ಕಾರಣಕ್ಕೆ ಮತಿಗೆಟ್ಟವರನ್ನು, ನೀತಿಗೆಟ್ಟವರನ್ನು  ಆಯ್ಕೆ ಮಾಡಬೇಕೆ? 'ನಮ್ಮ ಮತವನ್ನು ನಿಮಗ್ಯಾರಿಗೂ ಕೊಡೋದಿಲ್ಲ'  ಎಂಬಂಥ ಆಯ್ಕೆ ಬಟನ್ ಕೂಡ ಈ ಬಾರಿ ಮತಯಂತ್ರದಲ್ಲಿ ಅಳವಡಿಸಿದ್ದಾರೆ ಎಂಬ  ಮಾಹಿತಿ ಓದಿ ನಿಜಕ್ಕೂ ಸಮಾಧಾನವೆನಿಸಿತು. ಈ ಬಾರಿ ಪ್ರತಿಯೊಬ್ಬರೂ ತಮ್ಮ ಮತವನ್ನು ಕೊಟ್ಟಂತೆಯೂ ಕೊಡದಂತೆಯೂ ಆಗೋ ಹಾಗೆ ಈ ಆಪ್ಷನ್ ಬಳಸಲಿ ಎಂದು ಆಸೆಪಡುತ್ತೇನೆ. ಆಗಲೇ ಭ್ರಷ್ಟ ರಾಜಕಾರಣಿಗಳಿಗೆ ಕೊಂಚಮಟ್ಟಿನ ಭಯ ಹುಟ್ಟುವುದು. ತಮ್ಮನ್ನು ಆಯ್ಕೆ ಮಾಡುವುದು ಈಗ ಪ್ರಜೆಗಳಿಗೆ ಅನಿವಾರ್ಯವಲ್ಲ ಎಂಬ ಅರಿವು ಮೂಡುವುದು. ವಿದ್ಯಾವಂತ ಯುವಕರು ದೇಶವನ್ನು ಪ್ರತಿನಿಧಿಸಬೇಕು. ಹಾಗೆ ಬರುವವರು ಇಂಜಿನಿಯರಿಂಗ್ ಮೆಡಿಕಲ್ ಥರವೇ ರಾಜಕಾರಣವನ್ನೂ ಕೂಲಂಕುಂಶವಾಗಿ, ಶಾಸ್ತ್ರೀಯವಾಗಿ ಕಲಿತು ಬರಬೇಕು. ಆಗಲೇ ದೇಶ ಉದ್ಧಾರವಾಗೋದು. ರಾಜಕಾರಣಕ್ಕೂ ಬೇರೆಲ್ಲ ಉದ್ಯೋಗಕ್ಕಿರೋ ಹಾಗೆ ನಿವೃತ್ತಿ ವಯಸ್ಸು ನಿಗದಿಪಡಿಸಬೇಕು. ಒಟ್ಟಾರೆ ಈ ಸಮಯದಲ್ಲಿ ಹೇಳೋದಿಷ್ಟೇ..'ನಾವು ಇಷ್ಟ ಪಟ್ಟು ವೋಟ್ ಹಾಕೋ ಪರಿಸ್ಥಿತಿ ಬರಬೇಕು. ಕಷ್ಟಪಟ್ಟು ಅನಿವಾರ್ಯ ಎಂಬಂತೆ ವೋಟ್ ಹಾಕುವ ಹಾಗಾಗಬಾರದು.    
-ಜಯಲಕ್ಷ್ಮಿ ಪಾಟೀಲ್,
ಕಿರುತೆರೆ ನಟಿ, ರಂಗಭೂಮಿ ಕಲಾವಿದೆ ಹಾಗೂ ಬರಹಗಾರ್ತಿ (ಮುಕ್ತ ಮುಕ್ತ ಧಾರಾವಾಹಿ ಖ್ಯಾತಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.