ವೋಟಿಂಗ್ ಸ್ಟಾರ್

ಎಲೆಕ್ಷನ್ ಸಮಯದಲ್ಲಿ ಎಲ್ಲರೂ ಉತ್ಸಾಹದಿಂದ ಸರಿ ತಪ್ಪುಗಳ ಬಗ್ಗೆ ಮಾತಾಡುತ್ತಾರೆ. ಆದರೆ ವೋಟ್ ಎಂಬ ಮೂಲಭೂತ ಅಧಿಕಾರದ ಬಗ್ಗೆ ಅರಿವೇ ಇರುವುದಿಲ್ಲ. ಭಾರತದ ಭವಿಷ್ಯದ ಬಗ್ಗೆ ಕಾಳಜಿ ಇರುವ ಎಲ್ಲಾ ನಾಗರೀಕರೂ, ರಾಜಕಾರಣ, ರಾಜಕಾರಣಿಗಳ ಬಗ್ಗೆ ಮಾತನಾಡುವ ಅಧಿಕಾರವನ್ನು ಉಳಿಸಿಕೊಳ್ಳಲು ವೋಟ್ ಮಾಡಬೇಕು. ಹಾಗೂ ವೋಟ್ ಮಾಡದಿದ್ದರೆ, 'ಭಾರತದ ಬಗೆಗಿನ ಕಾಳಜಿ ಬರೀ ಬೂಟಾಟಿಕೆಯದ್ದು' ಎನ್ನುವ ಅರಿವು ಎಲ್ಲರಲ್ಲೂ ಮೂಡಲಿ ಎಂದು ಆಶಿಸುತ್ತೇನೆ. ವೋಟ್ ಏಕೆ ಮಾಡಬೇಕು ಅದಕ್ಕೂ ನಮಗೂ ಏನು ಸಂಬಂಧ..? ಮಾಡೋದ್ರಿಂದ ನಮಗೆ ಏನು ಉಪಯೋಗ? ಅಂತ ಕೇಳೋರು ಬಹುಪಾಲು ನಮ್ಮ ವಿದ್ಯಾವಂತ ಬಳಗದವರು. ಆದರೆ ಹಕ್ಕು ಬೇಕಾದಾಗ ಅದಕ್ಕೆ ದೇಶ ಕೇಳುವ ಏಕೈಕ ಬಾಧ್ಯತೆಯೆಂದರೆ
ವೋಟ್ ಮಾಡುವುದು. ಇದನ್ನು ಮಾಡದೆ ಹಕ್ಕಿನ ಬಗ್ಗೆ ವಾದಿಸುವುದರ ಹಾಗೂ ವಾದಿಸುವರನ್ನು ಕಂಡರೆ ನನಗಾಗುವುದಿಲ್ಲ.
-ಪಿ.ಡಿ.ಸತೀಶ್‌ಚಂದ್ರ, ರಂಗಕರ್ಮಿ, ಕಿರುತೆರೆ ನಟ, ನಿರ್ದೇಶಕ (ಪಾಂಡುರಂಗ ವಿಠಲ ಧಾರಾವಾಹಿ ಖ್ಯಾತಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


