ಚಿತ್ರಲೋಕಸಭಾ

ಚಿತ್ರ: ಇಂಡಿಯನ್ (1996)
ಭಾಷೆ: ತಮಿಳು
ತಾರಾಗಣ: ಕಮಲ್ ಹಾಸನ್, ಊರ್ಮಿಳಾ, ಮನೀಷಾ ಕೊಯಿರಾಲಾ
ಕಾದಲನ್ ಚಿತ್ರದಿಂದ ಹೊಸ ಕ್ರೇಜ್ ಸೃಷ್ಟಿಸಿದ್ದ ನಿರ್ದೇಶಕ ಶಂಕರ್ ಅವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಚಿತ್ರ ಇಂಡಿಯನ್. ಕಮಲ್ ಹಾಸನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರ, ಭ್ರಷ್ಟತೆ, ಲಂಚಗುಳಿತನದ ವಿರುದ್ಧ ಮಾಜಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ತಿರುಗಿಬೀಳುವ ಕಥೆಯನ್ನು ಈ ಚಿತ್ರ ಹೊಂದಿದೆ. ಈತನ ಹಿಂಸಾತ್ಮಕ ಹಾದಿ, ತನ್ನ ಸ್ವಂತ ಮಗನೂ ಸರ್ಕಾರಿ ಅಧಿಕಾರಿಯಾಗಿ ಲಂಚ ತೆಗೆದುಕೊಂಡಿದ್ದು ಗಮನಕ್ಕೆ ಬಂದಾಗ ಆತನನ್ನೂ ಬಲಿ ತೆಗೆದುಕೊಳ್ಳುವವರೆಗೂ ಸಾಗಿ ನಿಲ್ಲುತ್ತದೆ. ಇಂಥ ಮನಮುಟ್ಟುವ ಕಥೆಯನ್ನು ನಾಜೂಕಾಗಿ, ಉತ್ತಮ ಚಿತ್ರಕಥೆಯುಳ್ಳ ಮಸಾಲೆ ಚಿತ್ರವಾಗಿಸಿದ್ದ ಶಂಕರ್, ದಿನಬೆಳಗಾಗುವುದರೊಳಗೆ ಸ್ಟಾರ್ ನಿರ್ದೇಶಕರಾಗಿದ್ದು ಹಳೆಯ ಕಥೆ. ಇನ್ನು, ಕಮಲ ಹಾಸನ್ ಅವರ ಅಭಿನಯದ ಬಗ್ಗೆ ಬೇರೆ ಹೇಳಬೇಕಿಲ್ಲ. ಚಿತ್ರ ನೋಡಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಉಳಿಯುವುದು ಶಂಕರ್ ಹಾಗೂ ಕಮಲಹಾಸನ್ ಮಾತ್ರ.
ಇನ್ನು, ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ಎ.ಆರ್. ರೆಹಮಾನ್ ಅವರ ಮ್ಯೂಸಿಕ್ ಮ್ಯಾಜಿಕ್. ಚಿತ್ರದ ಪ್ರತಿಯೊಂದು ಹಾಡುಗಳೂ ಪ್ರೇಕ್ಷಕರನ್ನು ಮುದಗೊಳಿಸುವಲ್ಲಿ ಯಶಸ್ವಿಯಾಗಿದ್ದವು. ಕಣ್ಣಿಗೆ ಹಬ್ಬವೆನಿಸುವ ಕೊರಿಯೋಗ್ರಫಿ ಹಾಡುಗಳ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದವು. ಚಿತ್ರಕ್ಕೆ ಇದೂ ಒಂದು ಪ್ಲಸ್ ಪಾಯಿಂಟ್. ಒಟ್ಟಿನಲ್ಲಿ, ತಮಿಳುನಾಡು ಮಾತ್ರವಲ್ಲ, ಇದು ಡಬ್ಬಿಂಗ್ ಆದ ತೆಲುಗು, ಹಿಂದಿಗಳಲ್ಲೂ ಈ ಚಿತ್ರ ಜನಪ್ರಿಯತೆಗಳಿಸಿತಲ್ಲದೇ, ವಿದೇಶಗಳಲ್ಲೂ ಇದು ಸದ್ದು ಮಾಡಿತು.
ಚೇತನ್ ಓ.ಆರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


