ಬೈಟುಕಾಫಿ

ವೀಣಾವಾದನ

Published On :

ಶ್ರೀ ರಾಮೋತ್ಸವದ ಅಂಗವಾಗಿ ಎನ್.ಆರ್. ಕಾಲೊನಿ ಶ್ರೀರಾಮ ಮಂದಿರವು ಡಾ. ಸುಮಾ ಸುಧೀಂದ್ರ ಅವರ ವೀಣಾವಾದನವನ್ನು ಏರ್ಪಡಿಸಿದೆ. ಏಪ್ರಿಲ್ 15ರಂದು ಶ್ರೀರಾಮ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಮಾ ಸುಧೀಂದ್ರ ಅವರಿಗೆ ಸಾಥ್ ನೀಡುವವರು- ವಯೋಲಿನ್‌ನಲ್ಲಿ ಎನ್.ಎನ್. ಗಣೇಶ್‌ಕುಮಾರ್, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮಾ, ಘಟಂನಲ್ಲಿ ಎಸ್.ಎನ್. ನಾರಾಯಣಮೂರ್ತಿ.
ದಿನಾಂಕ: 15.04.2014, ಸಮಯ: ಸಂಜೆ 6.30, ಸ್ಥಳ: ಶ್ರೀರಾಮ ಮಂದಿರ, ಮೊದಲನೇ ಮುಖ್ಯರಸ್ತೆ, ಎನ್.ಆರ್. ಕಾಲೋನಿ, ಬಸವನಗುಡಿ, ಬೆಂಗಳೂರು-560004.

ವ್ಯಂಗ್ಯಚಿತ್ರ ಪ್ರದರ್ಶನ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಚ್ಸ್ ಅವರು ಹಿರಿಯ ವ್ಯಂಗ್ಯಚಿತ್ರಕಾರ ರಂಜನ್ ಸೋಮಯ್ಯ ಅವರ ರಾಜಕೀಯದ ಈಗಿನ ಚುನಾವಣೆಯನ್ನು ವಿಮರ್ಶಿಸುವ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ಪ್ರಾರಂಭಿಸಿದ್ದಾರೆ. ಈ ಪ್ರದರ್ಶನ ಏಪ್ರಿಲ್ 12 ರಿಂದ ಪ್ರಾರಂಭವಾಗಿದ್ದು ಏಪ್ರಿಲ್ 26ರವರೆಗೂ ಪ್ರದರ್ಶಿಸಲ್ಪಡುತ್ತದೆ. ಅಲಯನ್ ಫ್ರಾಂಸಿಸ್ಕೋದ ಚಿರಂಜೀವಿ ಸಿಂಗ್ ಅವರು ಮತ್ತು ಹಿರಿಯ ಕಲಾವಿದ ಬಾಲನ್ ನಂಬಿಯಾರ್ ಅವರು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ. ಭಾನುವಾರಗಳನ್ನು ಬಿಟ್ಟು ಮಿಕ್ಕದಿನಗಳಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ. ಸ್ಥಳ- ಇಂಡಿಯನ್ ಕಾರ್ಟೂನ್ ಗ್ಯಾಲರಿ, ಮಿಡ್ಫೋಡರ್ ಗಾರ್ಡನ್, ಬಿಗ್ ಕಿಡ್ಸ್‌ಕೆಂಪ್ ಹತ್ತಿರ, ಟ್ರಿನಿಟಿ ಸರ್ಕಲ್, ಎಂ.ಜಿ.ರಸ್ತೆ, ಬೆಂಗಳೂರು.ಟಿ

-ವೀಣಾವಾದನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.