ಬೈಟುಕಾಫಿ

ಹಣ್ಣು, ತರಕಾರಿ ನಿತ್ಯ ತಿನ್ನದಿದ್ದರೆ ಏನಾಗುತ್ತದೆ?

ಹಣ್ಣು, ತರಕಾರಿ ನಿತ್ಯ ತಿನ್ನದಿದ್ದರೆ ಏನಾಗುತ್ತದೆ?
Published On :

ಅಷ್ಟಕ್ಕೂ ಉದರ ಕ್ಯಾನ್ಸರ್ ತಡೆಯುವ ಶಕ್ತಿ ಹಣ್ಣು, ತರಕಾರಿಗಳಲ್ಲಿ ಏನಿದೆ? ಬಹುಶಃ ಮಿಟಮಿನ್ 'ಸಿ' ಎನ್ನುವುದು ತಜ್ಞರ ಅಭಿಪ್ರಾಯ. ಕಾರ್ಸಿನೊಜೆನ್ ಎಷ್ಟೇ ಬಲಶಾಲಿಯಾಗಿದ್ದರೂ ಅದನ್ನು ತಟಸ್ಥಗೊಳಿಸುವ ಸಾಮರ್ಥ್ಯ ವಿಟಮಿನ್ 'ಸಿ'ಗೆ ಇದೆ. ಜತೆಗೆ, ಹಣ್ಣು ಹಾಗೂ ತರಕಾರಿಗಳಲ್ಲಿ ಕ್ಯಾರೊಟೆನಾಯ್ಡ್‌ಗಳು, ಗಂಧಕದ ಅಂಶ ಹೇರಳವಾಗಿ ಇರುತ್ತವೆ. ಇವು ಕೂಡ ಆ್ಯಂಟಿಕ್ಯಾನ್ಸರ್ ಗುಣ ಹೊಂದಿವೆ. ತರಕಾರಿಗಳನ್ನು ಸಾಧ್ಯವಾದಷ್ಟು ಹಸಿಯಾಗಿಯೇ ಸೇವಿಸುವುದು ಒಳ್ಳೆಯದು. ಸಿಪ್ಪೆ ಸಹಿತ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಇನ್ನೂ ಒಳ್ಳೆಯದು. ಬೇಯಿಸಿದಾಗ ಅವುಗಳಲ್ಲಿನ ಕೆಲವು ಪೌಷ್ಟಿಕಾಂಶಗಳು ಸತ್ವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಸಿರು ಸಿಪ್ಪೆಗಳಲ್ಲಿ ಇರುವ ಸಾಮರ್ಥ್ಯದ ಬಗ್ಗೆ ಮತ್ತೊಮ್ಮೆ ಹೇಳಬೇಕಾಗಿಲ್ಲ ಎಂದುಕೊಳ್ಳುತ್ತೇನೆ. ಸಾಧ್ಯವಾದರೆ ನಿತ್ಯವೂ ಒಂದು ಊಟದ ಜತೆಗಾದರೂ ಹಣ್ಣು ಅಥವಾ ತರಕಾರಿ ಸಲಾಡ್ ಸೇವನೆ ಆರೋಗ್ಯದ ದೃಷ್ಟಿಯಿಂದ ಅ್ಯುತ್ಕೃಷ್ಟವಾದುದು.
ಜಪಾನ್‌ನಲ್ಲಿ 1965ರಲ್ಲಿ 70,000 ಜನರ ಆಹಾರ ಪದ್ಧತಿ ಕುರಿತು ಸಮೀಕ್ಷೆ ನಡೆಸಿ ಅಂಕಿ-ಅಂಶ, ಮಾಹಿತಿಗಳನ್ನು ಕಾಪಿಡಲಾಯಿತು. ಬರೋಬ್ಬರಿ 18 ವರ್ಷ ತರುವಾಯದಲ್ಲಿ ಅವರ ಆರೋಗ್ಯ ಸ್ಥಿತಿಗತಿ ಕಿರಿತು ಸಮೀಕ್ಷೆ ನಡೆಸಲಾಯಿತು. 70 ಸಾವಿರ ಜನರಲ್ಲಿ 111 ಮಂದಿಗೆ ಉದರ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರ ಆಹಾರ ಪದ್ಧತಿ ಕುರಿತು ವಿಶ್ಲೇಷಣೆ ನಡೆಸಿದಾಗ ಹಣ್ಣು, ತರಕಾರಿಗಳಿಗೆ ಅವರು ಕಟ್ಟಕಡೆಯ ಆ್ಯತೆ ನೀಡಿದ್ದರು ಎನ್ನುವುದು ಗೊತ್ತಾಯಿತು. ಉಳಿದ 69889 ಜನರಲ್ಲಿ ಹೆಚ್ಚಿನವರು ಎಲ್ಲ ವಿಧದ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಅಥವಾ ಮೇಲಿಂದ ಮೇಲೆ ಸೇವಿಸುವ ಹವ್ಯಾಸಉಳ್ಳವರಾಗಿದ್ದರು.
'ನೀವು ನಿತ್ಯ ಹಣ್ಣು, ತರಕಾರಿ ಸೇವಿಸುವ ಅಭ್ಯಾಸ ಹೊಂದಿರದಿದ್ದರೆ ಉದರ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ದುಪ್ಪಟ್ಟು ಹೆಚ್ಚು' ಎನ್ನುತ್ತವೆ ಜಪಾನ್, ಇಂಗ್ಲೆಂಡ್ ಮ್ತು ಪೋಲೆಂಡ್‌ಗಳಲ್ಲಿ ನಡೆದಿರುವ ಸಂಶೋಧನೆಗಳು.
ಉದರ ಕ್ಯಾನ್ಸರ್ ತೀವ್ರ ಸ್ವರೂಪ ತಾಳಿದಾಗ ಮಲದಲ್ಲಿ ರಕ್ತ ಹೋಗಬಹುದು. ಆಗಾಗ ವಾಂತಿ (ರಕ್ತ ವಾಂತಿ ಸಹ) ಆಗಬಹುದು. ಹೊಟ್ಟೆಯಲ್ಲಿ ನೋವು ಅಥವಾ ಹೊಟ್ಟೆಯಲ್ಲಿ ಏನೋ ಓಡಾಡಿದಂತಹ ಅನುಭವ ತೀವ್ರವಾಗಿ ಆಗಬಹುದು. ನಿಶ್ಯಕ್ತಿ, ಅನೀಮಿಯಾ, ದಿಢೀರ್ ದೇಹತೂಕ ನಷ್ಟ ಇತ್ಯಾದಿಗಳು ಸಂಭವಿಸಬಹುದು.ಟಿ

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.