ದಶಶಿರನ ಪಾಡು
ದಾನವಕುಲಸಾರ್ವಭೌಮ, ಲಂಕೇಶ್ವರ, ಜಿತೇಂದ್ರಿಯ, ದಶಶಿರ ರಾವಣನ ಬಗ್ಗೆ ನಿಮಗೆ ಗೊತ್ತು. ಈತ ಈಶ್ವರನ...

ದಾನವಕುಲಸಾರ್ವಭೌಮ, ಲಂಕೇಶ್ವರ, ಜಿತೇಂದ್ರಿಯ, ದಶಶಿರ ರಾವಣನ ಬಗ್ಗೆ ನಿಮಗೆ ಗೊತ್ತು. ಈತ ಈಶ್ವರನನ್ನು ಕುರಿತು ತಪಸ್ಸು ಮಾಡುತ್ತಿದ್ದಾಗ, ಆತ ಪ್ರತ್ಯಕ್ಷವಾಗುವುದಿಲ್ಲೆಂದಾಗ ತನ್ನ ಒಂದೊಂದೇ ತಲೆಗಳನ್ನು ಚಿವುಟಿ ತೆಗೆದು ಅಗ್ನಿಗೆ ನೀಡಿದವನು. ಕೈಲಾಸವನ್ನೇ ಎತ್ತುವ ಧಾರ್ಡ್ಯತೆ ತೋರಿದವನು. ಹತ್ತು ಮುಖಗಳಲ್ಲಿ ವೇದಗಳನ್ನೂ ಉಪನಿಷತ್ತುಗಳನ್ನೂ ಬಾಯ್ದೆರೆಯಾಗಿ ನುಡಿಯಬಲ್ಲವನು. ಅಂಥವನು, ಸೀತೆಯನ್ನು ನೋಡಿ ಹೇಗಾದ ಗೊತ್ತೆ?
ವ್ಯತ್ಯಸ್ತಂ ಲಪತಿ ಕ್ಷಣಂ ಕ್ಷಣಮಹೋ ಮೌನಂ ಸಮಾಲಂಬತೇ
ಸರ್ವಸ್ಮಿನ್ವಿದಧಾತಿ ಕಿಂ ಚ ವಿಷಯೇ ದೃಷ್ಟಿಂ ನಿರಾಲಂಬನಾಮ್
ಶ್ವಾಸಂ ದೀರ್ಘಮುರೀಕರೋತಿ ನ ಮನಾಗಂಗೇಷು ಧತ್ತೇ ಧೃತಿಂ
ವೈದೇಹೀವಿರಹವ್ಯಥಾವಿಕಲಿತೋ ಹಾ ಹಂತ ಲಂಕೇಶ್ವರಃ
ರಾವಣ ಸೀತೆಯನ್ನು ತಂದು ಅಶೋಕವನದಲ್ಲಿಟ್ಟರೂ ಆಕೆ ಒಲಿದಿಲ್ಲ. ಆಕೆಯನ್ನು ನೆನೆನೆನೆಯುತ್ತ ವಿರಹಾಗ್ನಿಯಿಂದ ಬೆಂದು ವ್ಯಾಕುಲಚಿತ್ತನಾಗಿ ಏನೇನೋ ಅಸಂಬದ್ಧ ಗಳುಹುತ್ತಾನೆ. ಮರುಕ್ಷಣ ಮಾತನಾಡದೆ ಶೂನ್ಯದತ್ತ ನೋಡುತ್ತಾನೆ. ಏನನ್ನೂ ಕೇಳಿದರೂ ಆತನ ಕಣ್ಣುಗಳಲ್ಲಿ ಸೊನ್ನೆಯೇ ಉತ್ತರವಾಗಿದೆ. ಆತನ ದೀರ್ಘವಾದ ನಿಟ್ಟುಸಿರುಗಳು ಅರಮನೆಯ ಕಂಬಗಳನ್ನು ಬಿಸಿಯಾಗುವಂತೆ ಮಾಡಿದೆ. ಅಂಗಾಂಗಗಳಲ್ಲಿ ಶಕ್ತಿಯು ಉಡುಗಿಹೋಗಿ ಸಿಂಹಾಸನದಲ್ಲಿ ಕುಸಿದಂತಿದ್ದಾನೆ. ಹತ್ತು ತಲೆಗಳನ್ನು ಹತ್ತು ಕಡೆಗೆ ಚೆಲ್ಲಿದ್ದಾನೆ.
ಆತನಿಗೆ ಹತ್ತು ತಲೆಯಿತ್ತು ನಿಜ, ಆದರೆ ಒಂದರಲ್ಲಿ ಕೂಡ ವಿವೇಕ ಇರಲಿಲ್ಲ ಅನಿಸುತ್ತದೆ. ಇನ್ನು ಏಕಶಿರರಾದ ನಮ್ಮ ಪಾಡೇನು!
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


