ಜಸ್ಟ್ ಪಾಸ್ ವರ್ಡ್

ನಿಮ್ಮ ಇಮೇಲ್ ಅಡ್ರೆಸ್ ಹೇಳಿ ಅಂದ್ರೆ ಇಮೇಲ್ ಜತೆಗೆ ಪಾಸ್ವರ್ಡ್ ಕಳುಹಿಸುವವರೂ ಇದ್ದಾರೆ! ಅದು ಅತಿರೇಕ ಅಂದುಕೊಳ್ಳೋಣ. ಆದರೆ ಈಗ ಪ್ರತಿಯೊಂದಕ್ಕೂ ಪಾಸ್ವರ್ಡ್ ಬೇಕು. ಇಂಟರ್ನೆಟ್ ಬ್ಯಾಂಕಿಂಗ್, ಇಮೇಲ್, ಫೇಸ್ಬುಕ್ ಹೀಗೆ ಪ್ರತಿಯೊಂದನ್ನು ಬಳಸಲೂ ಪಾಸ್ವರ್ಡ್ ಬೇಕು. ಈಗ ಆ್ಯಪಲ್ ಮೊಬೈಲ್, ಟ್ಯಾಬ್ಲೆಟ್, ಆನ್ಲೈನ್ ಶಾಪಿಂಗ್, ವಿಂಡೋಸ್ ಕಂಪ್ಯೂಟರ್ ಬಳಸಲೂ ಪಾಸ್ವರ್ಡ್ಗಳು ಅಗತ್ಯ.
ಆದರೆ ಬಹಳ ಜನರ ಸಮಸ್ಯೆಯೆಂದರೆ ಪಾಸ್ವರ್ಡ್ ನೆನಪಿಟ್ಟುಕೊಳ್ಳುವುದು ಕಷ್ಟ. ಅದಕ್ಕೆ ಎಲ್ಲದಕ್ಕೂ ಒಂದೇ ಪಾಸ್ವರ್ಡ್ ಕೊಟ್ಟುಕೊಳ್ಳುವವರೂ ಇದ್ದಾರೆ. ಇನ್ನು ಕೆಲವರು ನೆನಪಿಲ್ಲ ಎಂಬ ಕಾರಣಕ್ಕೆ ಸುಲಭದ ಪಾಸ್ವರ್ಡ್ ಕೊಟ್ಟುಕೊಂಡು, ನಂತರ ನನ್ನ ಅಕೌಂಟ್ ಹ್ಯಾಕ್ ಆಯಿತು ಎಂದು ಗೋಳಿಟ್ಟುಕೊಳ್ಳುತ್ತಾರೆ.
ಸಂಸ್ಥೆಯೊಂದು ಇಂಥ ಅತ್ಯಂತ ಕೆಟ್ಟ ಅಥವಾ ಸುಲಭದ ಪಾಸ್ವರ್ಡ್ಗಳನ್ನು ಪತ್ತೆಮಾಡಿದೆ. 25 ಅತ್ಯಂತ ಕೆಟ್ಟ ಅಥವಾ ಸುಲಭದ ಪಾಸ್ವರ್ಡ್ಗಳನ್ನು ಸಂಸ್ಥೆ ಪಟ್ಟಿ ಮಾಡಿದೆ.
1. ಅದರಲ್ಲಿ ಮೊದಲ ಸ್ಥಾನ '123456'ಗೆ! ಇದನ್ನು ವಿಶ್ವದಾದ್ಯಂತ ಜನ ಅತ್ಯಂತ ಸುಲಭದ ಪಾಸ್ವರ್ಡ್ ಆಗಿ ಬಳಸುತ್ತಿದ್ದಾರೆ.
2. ಪಾಸ್ವರ್ಡ್ ಆಗಿ 'ಪಾಸ್ವರ್ಡ್' ಎಂಬುದನ್ನೇ ಸಾಕಷ್ಟು ಜನ ಬಳಸುತ್ತಾರೆ ಎಂಬುದು ಇನ್ನೊಂದು ವಿಶೇಷ. ಈ ಬಳಕೆ ಎಷ್ಟರಮಟ್ಟಿಗೆ ಇದೆಯೆಂದರೆ ಇದಕ್ಕೆ 2ನೇ ಸ್ಥಾನ ದೊರೆತಿದೆ.
3. ಅಚ್ಚರಿಯೆಂದರೆ 3ನೇ ಸ್ಥಾನ '12345678'ಗೆ ಲಭಿಸಿದೆ. ಮೊದಲ ಸ್ಥಾನ ಪಡೆದ ಪಾಸ್ವರ್ಡ್ಗೆ ಹೋಲಿಸಿದರೆ ಇದರಲ್ಲಿ ಎರಡಂಕಿ ಹೆಚ್ಚಿದೆ.
4. 'ಕ್ವಾರ್ಟಿ' ಎಂಬ ಶಬ್ದವನ್ನು ಸಾಕಷ್ಟು ಜನ ಬಳಸುತ್ತಾರಂತೆ ಎಂಬುದು ಆಶ್ಚರ್ಯವೇ ಸರಿ.
5. ಇವರು ಸ್ವಲ್ಪ ಬುದ್ಧಿವಂತರು. ಅಂಕಿ ಜತೆ ಆಂಗ್ಲ ಅಕ್ಷರಗಳನ್ನೂ ಸೇರಿಸುತ್ತಾರೆ. ಅದಕ್ಕಾಗಿಯೇ ಇವರು 'ಎಬಿಸಿ123' ಎಂಬುದನ್ನು ಪಾಸ್ವರ್ಡ್ ಆಗಿ ಬಳಸುತ್ತಾರೆ.
6. '123456789' 6ನೇ ಸ್ಥಾನದಲ್ಲಿರುವ ಅತ್ಯಂತ ಕೆಟ್ಟ ಅಥವಾ ಸುಲಭ ಪಾಸ್ವರ್ಡ್.
7) ಕೆಲವರು ಮಹಾಬುದ್ಧಿವಂತರಿರುತ್ತಾರೆ. ಅವರು ತಮ್ಮ ಪಾಸ್ವರ್ಡನ್ನು '111111' ಅಂತ ಇರಿಸಿಕೊಂಡಿದ್ದಾರಂತೆ!
8) '1234567' ಕೂಡ ಪಾಸ್ವರ್ಡ್ ಆಗಿದೆ. ಒಂದೆರಡು ಅಂಕಿ ವ್ಯತ್ಯಾಸ ಅಷ್ಟೇ.
9) ಪ್ರೀತಿಸಿದವರಿಗೆ ಹೇಳುವ ಶಬ್ದವಾದ 'ಐಲವ್ಯು' ಕೆಲವರ ಪಾಲಿಗೆ ಪಾಸ್ವರ್ಡ್ ಆಗಿಬಿಟ್ಟಿದೆ.
10) 'ಅಡೊಬ್123' ಎಂಬುದನ್ನೂ ಸಾಕಷ್ಟು ಜನ ಪಾಸ್ವರ್ಡ್ ಆಗಿ ಬಳಸಿದ್ದಾರೆ. ಸಮೀಕ್ಷೆ ನಡೆಸಿದ ಕಂಪನಿ 'ಅಡೋಬ್' ಕಂಪನಿಯ ವೆಬ್ಸೈಟ್ಗಳಲ್ಲಿ ಬಳಸಲಾದ ಪಾಸ್ವರ್ಡ್ಗಳನ್ನೇ ಬಳಸಿದ್ದರಿಂದ ಈ ಪಾಸ್ವರ್ಡ್ ಲಭ್ಯವಾಗಿರಬಹುದು.
11) '123123'.
12) ಸಾಕಷ್ಟು ಮಂದಿ 'ಅಡ್ಮಿನ್' ಎಂಬುದನ್ನೇ ಪಾಸ್ವರ್ಡ್ ಆಗಿ ಬಳಸಿ ಬುದ್ದಿವಂತಿಕೆ ಮೆರೆದಿದ್ದಾರೆ.
13) '1234567890'
14) 'ಲೆಟ್ಮಿಇನ್' ಎಂಬುದು ಕಾಲವರ ಪಾಲಿಗೆ ಪಾಸ್ವರ್ಡ್.
15) 'ಫೋಟೊಶಾಪ್' ಎಂಬುದನ್ನೂ ಸಾಕಷ್ಟು ಮಂದಿ ಪಾಸ್ವರ್ಡ್ ಆಗಿ ಬಳಸುತ್ತಾರಂತೆ.
16) '1234'
17) 'ಮಂಕಿ' ಎಂಬುದನ್ನೂ ಜನ ಪಾಸ್ವರ್ಡ್ ಆಗಿ ಬಳಸುತ್ತಾರಂತೆ! ಆದರೆ ಈ ಪಾಸ್ವರ್ಡ್ ಕೊಟ್ಟೋನು ನಿಜವಾಗ್ಲೂ ಕೋಡಂಗಿ!
18) 'ಶ್ಯಾಡೊ' (ನೆರಳು)
19) ಕೆಲವರಪಾಲಿಗೆ ನೆರಳು ಪಾಸ್ವರ್ಡ್ ಆದರೆ ಇನ್ನು ಕೆಲವರ ಪಾಲಿಗೆ 'ಸನ್ಶೈನ್' ಪಾಸ್ವರ್ಡ್ ಆಗಿದೆಯಂತೆ. ಲೋಕೋ ಭಿನ್ನ ರುಚಿಃ ಅನ್ನೋದು ಇದ್ಕೇ ಇರ್ಬೇಕು.
20) '12345'
21) 'ಪಾಸ್ವರ್ಡ್1'
22) 'ಪ್ರಿನ್ಸೆಸ್'ಢ
23) 'ಟ್ರಸ್ಟ್01'
24) ಸ್ವಂತ ಹೆಸರು ಅಥವಾ ಪತ್ನಿಯ ಹೆಸರು.
25) ಇವರು ಮಹಾ ಬುದ್ಧಿವಂತರು. ಅದಕ್ಕಾಗಿ ಅವರು '000000' ಪಾಸ್ವರ್ಡ್ ಆಗಿ ಬಳಸಿದ್ದಾರೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


