ಬೈಟುಕಾಫಿ

ಭ್ರಮೆಯನ್ನು ಕಿತ್ತೊಗೆದು ರೌದ್ರಸತ್ಯವನ್ನು ಅರಿಯಿರಿ

Published On :

ಅಮರನಾಥ ಯಾತ್ರೆಯ ನಂತರ ಶಿವಮಯವಾಗಿದ್ದ ಸ್ವಾಮೀಜಿಯ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆಯುಂಟಾಯಿತು. ಈಗ ಅವರ ಭಕ್ತಿ ಜಗನ್ಮಾತೆಯ ಮೇಲೆ ಕೇಂದ್ರೀಕೃತವಾಯಿತು. ಅವರೀಗ ಬೇರೆ ಅಲೋಚನೆಯನ್ನೇ ಮಾಡಲು ಅಸಮರ್ಥರಾದರು. ಏಕಾಂತದಲ್ಲಿ ಧ್ಯಾನಮಗ್ನರಾದರು. ಅವರ ಅಂತಃಕರಣವನ್ನು ತಾಯಿಕಾಳಿಯ ಭಾವ ಸಂಪೂರ್ಣವಾಗಿ ತುಂಬಿತು. ಹೀಗಿರುವಾಗ ಒಂದು ಸಂಜೆ ದೇವಿಯ ದಿವ್ಯದರ್ಶನವನ್ನು ಅನುಭವಿಸುತ್ತಿದ್ದ ಸಾಮೀಜಿಯು 'ತಾಯಿ ಕಾಳಿ' ಎಂಬ ದಿವ್ಯಕವನವನ್ನು ರಚಿಸಿದರು.
'ನಾವು ಭಯಗ್ರಸ್ತ ಮನಸ್ಕರಾದ್ದರಿಂದ ಸದಾ ಸುಂದರವಾದ ಹೂಗಳನ್ನು, ಹಿತಕರವಾದ ರೂಪಗಳನ್ನು ಮಾತ್ರವೇ ನೋಡುತ್ತಾ, ಜಗತ್ತೆಲ್ಲ ಶುಭಕರವಾಗಿದೆ, ಮಂಗಳಕರವಾಗಿದೆ ಎಂದು ಭ್ರಮಿಸುತ್ತೇವೆ. ಆದರೆ ನಿಜಕ್ಕೂ ಇಲ್ಲಿ ಶುಭವೆಷ್ಟೋ, ಅಷ್ಟೇ ಅಶುಭವೂ ಇದೆ. ಮಂಗಳವೆಷ್ಟೋ, ಅಮಂಗಳವೂ ಅಷ್ಟೇ ಇದೆ. ಸೌಂದರ್ಯವೆಷ್ಟಿದೆಯೋ, ರೌದ್ರವೂ ಅಷ್ಟೇ ಇದೆ. ತೂಗುವ ತೊಟ್ಟಿಲುಗಳೆಷ್ಟಿವೆಯೋ, ಮಸಣದ ಗೋರಿಗಳೂ ಅಷ್ಟೇ ಇವೆ. ಭಗವಂತನು ರಾಮನಾಗಿ ನಮ್ಮನ್ನು ಕಾಪಾಡುವುದು ಎಷ್ಟು ನಿಜವೋ ಯಮನಾಗಿ ಕೊಂಡೊಯ್ಯುವುದೂ ಅಷ್ಟೇ ನಿಜ ಎಂಬ ಕರಾಳ ಸತ್ಯವನ್ನು ಕಂಡುಕೊಳ್ಳಲು ನಾವು ಕಷ್ಟ ಪಡುತ್ತೇವೆ. ನಮ್ಮ ಭ್ರಮೆಯನ್ನು ಕಿತ್ತೊಗೆದು ಸತ್ಯಸ್ವರೂಪಿಯಾದ ಭಗವಂತನ ರೌದ್ರರೂಪದ ಸತ್ಯತೆಯನ್ನು ಗುರುತಿಸಿ ಆರಾಧಿಸಬೇಕು. ಭಯವೆಂದಿಗೂ ಇರಬಾರದು. ತಾಯಿಯ ನಿಜವಾದ ಭಕ್ತರು ಸಿಂಹದಂತೆ ನಿರ್ಭೀತರು, ದೃಢಚಿತ್ತರು' ಎಂದು ಸ್ವಾಮೀಜಿ ತಾಯಿಯ ಸರ್ವಶಕ್ತಿ ಸ್ವರೂಪವನ್ನು ವಾಸ್ತವಿಕ ದೃಷ್ಟಿಕೋನದಲ್ಲಿ ವರ್ಣಿಸಿದರು.ಟಿ

ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.