ದಾಸವಾಳ
ಮಹಿಳಾ ಸೌಂದರ್ಯಕ್ಕೆ ಜೀವಾಳ!
ಕೆಂಪು, ಬಿಳಿ, ಪಿಂಕ್ ಮುಂತಾದ ಬಣ್ಣ ಬಣ್ಣಗಳಿಂದ ಮನೆಯ ಅಂಗಳವನ್ನು ಅಲಂಕೃತಗೊಳಿಸುವ ದಾಸವಾಳದ ಹೂಗಳು ಎಲ್ಲರನ್ನು ಆಕರ್ಷಿಸುತ್ತವೆ. ಆರರಿಂದ ಏಳು ಆಡಿ ಎತ್ತರ ಬೆಳೆಯುವ ದಾಸವಾಳ ಗಿಡಗಳು ಹಲವು ತಳಿಗಳಿಂದ ಕೂಡಿವೆ.
'ಹೈಬಿಸ್ಕಸ್' ಎಂಬ ವೈಜ್ಞಾನಿಕ ಹೆಸ ರಿಂದ ಕರೆಯ ಲಾಗುವ ದಾಸವಾಳ ಹೂ ಹವಾಯಿ ದೇಶದ ರಾಷ್ಟ್ರಪುಷ್ಪ. ಈ ಹೂಗಳು ಬಣ್ಣಗಳಿಂದ ಕಂಗೊಳಿಸುವುದರ ಜೊತೆಗೆ ಆರೋಗ್ಯಕ್ಕೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಿವೆ. ಮಹಿಳೆಯರ ಬ್ಯೂಟಿ ಸಾಮಗ್ರಿಗಳ ತಯಾರಿಕೆಯಲ್ಲಿ ಈ ಹೂವನ್ನು ಬಳಕೆ ಮಾಡಲಾಗುತ್ತದೆ. ದಾಸವಾಳದಲ್ಲಿ 'ಸಿ' ವಿಟಮಿನ್ ಜೊತೆಗೆ ಖನಿಜಾಂಶಗಳು ಹೇರಳವಾಗಿವೆ. ದಾಸವಾಳದಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದಾದ ಕೆಲವು ಸಲಹೆಗಳು ಇಲ್ಲಿವೆ.
ದಾಸವಾಳದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಬಿಳಿ ಮತ್ತು ಕೆಂಪು ದಾಸವಾಳದ ದಳಗಳಿಂದ ಜ್ಯೂಸ್ ತಯಾರಿಸಿ ಕುಡಿದರೆ ಹೊಟ್ಟೆನೋವು ಶಮನವಾಗುತ್ತದೆ ಮತ್ತು ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.
ಮುಂಜಾನೆ ಎದ್ದ ಕೂಡಲೇ ದಾಸವಾಳದ ಸೇವನೆಯಿಂದ ಕಣ್ಣುರಿ ತಪ್ಪಿಸಬಹುದು.
ಆಯಾಸ ಮತ್ತು ಒತ್ತಡದಿಂದ ಬಳಲುವ ಮಹಿಳೆಯರು ದಾಸವಾಳದ ಹೂಗಳನ್ನು ಕಲ್ಲುಸಕ್ಕರೆಯೊಂದಿಗೆ ಬೆರೆಸಿ ಸೇವಿಸಿದರೆ ಒತ್ತಡ ಮುಕ್ತರಾಗಬಹುದು.
ಕಿಡ್ನಿ ಸಮಸ್ಯೆ ಇರುವವರು ದಾಸವಾಳದ ಚಹಾ ತಯಾರಿಸಿ ಕುಡಿಯುವುದು ಒಳ್ಳೆಯದು.
ಮಹಿಳೆಯರು ದಾಸವಾಳದ ಎಲೆ ಹಾಗೂ ಹೂಗಳಿಂದ ಪೇಸ್ಟ್ ತಯಾರಿಸಿ, ನೀರು ಸೇರಿಸಿ ಶಾಂಪೂ ರೀತಿಯಲ್ಲಿ ಬಳಕೆ ಮಾಡಬಹುದು. ಇದರಿಂದ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ.
ಸ್ತ್ರೀಯರ ಮುಟ್ಟಿನ ಅಧಿಕಸ್ರಾವಕ್ಕೆ ದಾಸವಾಳದ ಸೇವನೆ ಉತ್ತಮವಾದುದು. ಟಿ
- ದಂಡಿನಶಿವರ ಮಂಜುನಾಥ್, ಬೆಂಗಳೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

