ಬದಲಾಗಲಿ ಪಾಲಕರು
'ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು'. ಪ್ರತಿ ಮಕ್ಕಳ ಯಶಸ್ಸಿನಲ್ಲಿ ಕೇವಲ ಶಿಕ್ಷಕರ ಪಾತ್ರವಲ್ಲದೆ ಪಾಲಕರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಪರೀಕ್ಷೆ ಎಂದ ತಕ್ಷಣ ಪ್ರತಿ ವಿದ್ಯಾರ್ಥಿಗಳಿಗೆ ಭಯ ಸಹಜವಾದದ್ದು. ಆ ಸಮಯದಲ್ಲಿ ಪಾಲಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಹಾಗಂತ ಅವರಿಗೆ ಒತ್ತಡ ಹೇರಬಾರದು. ಮೊದಲು ಮಕ್ಕಳಿಗೆ ಪರೀಕ್ಷೆ ಎಂದರೇನು, ಅದರ ಪರಿಣಾಮವೇನು ಎಂಬುದರ ಬಗ್ಗೆ ಮನವರಿಕೆ ಮಾಡಬೇಕು. ಪರೀಕ್ಷೆಯೇ ಅಂತಿಮವಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಪಾಲಕರು ಮಕ್ಕಳ ಭವಿಷ್ಯಕ್ಕಿಂತ ತಮ್ಮ ಅಂತಸ್ತಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು. ನಿಶ್ಕಲ್ಮಶ ಮನಸ್ಸಿನ ಮುಗ್ಧ ಮನಸ್ಸುಗಳು ಚಂಚಲಗೊಂಡು ಅಪಾಯ ಸಂಭವಿಸುವ ಪ್ರಸಂಗಗಳು ಎದುರಾಗುತ್ತವೆ.
= ದ್ಯಾಮಕ್ಕ. ಹೆಚ್. ಪಾಟೀಲ, ತೊರವಿ
ಸ್ನೇಹಿತರಾಗಬೇಕಾದ ಪೋಷಕರು
'ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು' ಎಂಬ ಮಾತು ಮುಂದಿನ ದಿನಗಳಲ್ಲಿ ಕಾಣೆಯಾಗಬಹುದು. ಕಾರಣ ಮಕ್ಕಳ ಮಾನಸಿಕ ಸ್ಥಿತಿ. ಇದಕ್ಕೆ ಪೋಷಕರೇ ಕಾರಣ ಎಂದರೆ ತಪ್ಪಾಗಲಾರದು. ಪೋಷಕರು ಎರಡು ರೀತಿಯಲ್ಲಿ ಕಾರಣರಾಗುತ್ತಾರೆ. ಮೊದಲನೆಯದಾಗಿ ಮಕ್ಕಳ ಬಗ್ಗೆ ಪರೀಕ್ಷೆಯ ಸಮಯದಲ್ಲಿ ಗಮನ ಹರಿಸದೇ ಇರುವುದು. ಈ ಪ್ರಕಾರದ ವ್ಯವಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಎರಡನೆಯದಾಗಿ ಪೋಷಕರು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ನೀಡುವ ಒತ್ತಡ. ಇದು ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ಪ್ರಕಾರದ ಮನಸ್ಥಿತಿಗಳು ಬದಲಾಗಬೇಕು. ಅಂದರೆ ಪೋಷಕರು ಓದಿನಲ್ಲಿ ಮಕ್ಕಳಿಗೆ ಒತ್ತಾಯಿಸಬಾರದು. ಹಾಗಂತ ಅವರಷ್ಟಕ್ಕೆ ಅವರನ್ನು ಬಿಟ್ಟು ಅವರಿಗೆ ಅತಿಯಾದ ಸ್ವಾತಂತ್ರ್ಯವನ್ನೂ ಕೊಡಬಾರದು. ಎರಡೂ ಒಳ್ಳೆಯದಲ್ಲ. ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸಲು ಅನುವು ಮಾಡಿಕೊಡಬೇಕು. ಹಾಗಾಗಿ ಪೋಷಕರೆಲ್ಲರೂ ಸ್ನೇಹಿತರಾಗುವುದು ಸೂಕ್ತ.
= ವಾಗೇಶ್. ಟಿ. ಎಂ, ಸಂತೇಬೆನ್ನೂರು
ಸೂಕ್ತ ಮಾರ್ಗದರ್ಶನ ನೀಡಲಿ
ಪರೀಕ್ಷೆ ಬಂತೆಂದರೆ ಮಕ್ಕಳಿಗೆ ಬಹಳ ಭಯವಿರುತ್ತದೆ. ಮೊದಲಿನಿಂದಲೂ ಚೆನ್ನಾಗಿ ಓದಿದರೂ ಪರೀಕ್ಷೆಯ ಸಮಯದಲ್ಲಿ ಮರೆಯುವುದೇ ಹೆಚ್ಚು. ಪೋಷಕರು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರಲ್ಲ ನಮ್ಮ ಜವಾಬ್ದಾರಿ ಏನಿದೆ ಎಂದು ಕುಳಿತುಕೊಳ್ಳುವ ಹಾಗಿಲ್ಲ. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಾ ಅವರಿಗೆ ಅಭ್ಯಾಸದಲ್ಲಿ ಆಸಕ್ತಿ ಉಂಟು ಮಾಡುವಂತೆ ಮಾಡಬೇಕು. ಪೋಷಕರು ಮನೆಯಲ್ಲಿ ಟಿ.ವಿ, ಕಂಪ್ಯೂಟರ್, ಹರಟೆಯಲ್ಲಿ ಸಮಯವನ್ನು ಹಾಳು ಮಾಡುವ ಬದಲು ಅವರು ಸಹ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುತ್ತಾ ಮಕ್ಕಳಿಗೆ ಪಠ್ಯದಲ್ಲಿ ಆಸಕ್ತಿ ಮೂಡಿಸುತ್ತಾ ಅವರಿಗೆ ಯಾವ ವಿಷಯವನ್ನು ಎಷ್ಟು ಕಲಿಯಬೇಕು, ಹೇಗೆ ಅಭ್ಯಾಸ ಮಾಡಿದರೆ ವಿಷಯವು ನೆನಪಿನಲ್ಲಿರುತ್ತದೆ ಎಂದು ಮನವರಿಕೆ ಮಾಡಿಕೊಡಬೇಕು.
= ಎಂ.ಲಕ್ಷ್ಮಿ ಚಕ್ರವರ್ತಿ, ಕುರುಗೋಡು, ಬಳ್ಳಾರಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪರೀಕ್ಷೆ ಸಮಯದಲ್ಲಿ ಪಾಲಕರ ಪಾತ್ರ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

