ಬೈಟುಕಾಫಿ

ಬೊಂಬು ಯಾವ ಜಾತಿ?

Published On :

ಬೊಂಬು ಮರದ ಜಾತಿಗೆ ಸೇರಿದ್ದೋ ಅಥವಾ ಹುಲ್ಲಿನ ಜಾತಿಗೆ ಸೇರಿದ್ದೋ ಎಂಬುದು ಅನೇಕರಲ್ಲಿ ಗೊಂದಲವನ್ನುಂಟುಮಾಡಿದೆ. ಬೊಂಬು ಗಿಡಮರಗಳ ಜಾತಿಗೆ ಸೇರಿದ್ದೆಂದು ಹೆಚ್ಚಿನವರು ಭಾವಿಸಿದ್ದಾರೆ. ನಿಜವಾಗಿ ಅದು ಒಂದು ಬಗೆಯ ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಇದೊಂದು ಸ್ವಾರಸ್ಯಪೂರ್ಣ ವನಸ್ಪತಿ. ಇದನ್ನು ಸೀದಾ ಬೆಳೆಯಲು ಬಿಟ್ಟರೆ 120 ಅಡಿ ಎತ್ತರದವರೆಗೂ ಬೆಳೆಯುತ್ತದೆ. ಬೊಂಬಿನ ಮುಖ್ಯ ಕಾಂಡ ನೆಲದೊಳಗೆ ಇರುತ್ತದೆ. ಇದರಿಂದ ಹೊರಗಿರುವ ಭಾಗಕ್ಕೆ ಶಾಖೆಗಳು ಮೂಡುತ್ತವೆ.
ಬೊಂಬಿನಲ್ಲಿ ಅನೇಕ ಬಗೆಗಳಿವೆ. ಇದುವರೆಗೆ 500 ಬಗೆಯ ಬೊಂಬುಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಎಲ್ಲ ಬಗೆಯ ಬೊಂಬುಗಳೂ ನಯವಾಗಿರುತ್ತವೆ ಮತ್ತು ಒಟ್ಟಿಗೆ ಕೂಡಿಕೊಂಡಿರುತ್ತವೆ. ಇದರಿಂದ ಇದು ತುಂಬಾ ಗಟ್ಟಿಯಾಗಿ ಬೆಳೆಯುತ್ತದೆ. ಬೊಂಬು ಶೀಘ್ರಗತಿಯಲ್ಲಿ ಬೆಳೆಯುವ ಸಸ್ಯ.
ಬೊಂಬಿನಿಂದ ನಮಗೆ ತುಂಬಾ ಪ್ರಯೋಜನಗಳಿವೆ. ಮನೆಯ ಗೋಡೆಗಳ ಮತ್ತು ಜೋಪಡಿಗಳ ನಿರ್ಮಾಣದಲ್ಲಿ ಬೊಂಬನ್ನು ಬಳಸಲಾಗುವುದು. ಇದರಿಂದ ಕಾಗದವನ್ನು, ಚಾಪೆ ಮತ್ತು ಬುಟ್ಟಿಗಳನ್ನು ತಯಾರಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಜನ ಎಳೆಯ ಬೊಂಬನ್ನು(ಕಳಲೆ), ಇನ್ನು ಕೆಲವು ದೇಶಗಳಲ್ಲಿ ಹಸಿರು ಬೊಂಬನ್ನು ತರಕಾರಿಯಂತೆ ಬಳಸುತ್ತಾರೆ. ಪೊಲೀಸ್ ಲಾಠಿಗಳನ್ನು ತಯಾರಿಸುವುದೂ ಬೊಂಬಿನಿಂದಲೇ.
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.