ಟಾಪ್20ಯಲ್ಲಿ ಸಾರಥಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿ.ಸಿರುವ 'ಸಾರಥಿ' ಸೂಪರ್‌ಹಿಟ್ ಚಿತ್ರಗಳ ಪಟ್ಟಿ ಸೇರಿದ್ದು ಹಳೆಯ ಸುದ್ದಿ ಇರಬಹುದು. ಆದರೆ ಸಾರಥಿ ಚಿತ್ರದ 'ಪ್ರೀತಿ ಕಾಣಲ್ವಾ..' ಎಂಬ ಹಾಡು ದೇಶದ ಟಾಪ್ ಟ್ವೆಂಟಿ ಹಾಡುಗಳ ಲಿಸ್ಟಲ್ಲಿ ಸೇರಿರುವುದು ಹೊಸ ಸುದ್ದಿ. ಹೌದು. 2013ರಲ್ಲಿ ಭಾರ್ತಿ ಏರ್‌ಟೆಲ್ ನಡೆಸಿದ ಮೊಬಿಟ್ಯೂಡ್ ಸಮೀಕ್ಷೆಯಲ್ಲಿ ಈ ಹಾಡು ಬರಿಯ ಕನ್ನಡ ಹಾಡುಗಳ ಪೈಕಿಯಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿನ ಎಲ್ಲ ಹಾಡುಗಳ ಪೈಕಿ ಅತಿ ಹೆಚ್ಚು ಜನ ಹಲೋಟ್ಯೂನ್ ಮಾಡಿಕೊಂಡ ಹಾಡಾಗಿದೆ. ಅಚ್ಚರಿಯೆಂದರೆ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಶಿವಣ್ಣ-ಜಗ್ಗೇಶ್ ಅಭಿನಯದ ಜೋಡಿ ಚಿತ್ರದ 'ಓ ಪ್ರೀತಿಯೇ...' ಎಂಬ ಹಾಡು ಈ ಟಾಪ್ ಇಪ್ಪತ್ತರ ಲಿಸ್ಟಿನಲ್ಲಿ ಕಾಣಿಸಿಕೊಂಡಿದೆ. ಧ್ರುವ ಸರ್ಜಾ ಅಭಿನಯದ ಸುಪರ್ ಹಿಟ್ ಚಿತ್ರ ಅದ್ಧೂರಿಯ ಎರಡು ಮೆಲೋಡಿ ಹಾಡುಗಳು ಕೂಡ ಈ ಎರಡು ಹಾಡುಗಳ ನಂತರದ ಸ್ಥಾನದಲ್ಲಿದ್ದು, ಕನ್ನಡಿಗರಿಗೆ ಕನ್ನಡ ಕಾಲರ್ ಟ್ಯೂನ್‌ಗಳ ಮೇಲಿರುವ ಕ್ರೇಜನ್ನು ಸೂಚಿಸಿದೆ. 'ಮುಸ್ಸಂಜೆ ವೇಳೇಲಿ...' ಹಾಗೂ 'ಪ್ರಪೋಸ್ ಮಾಡೋ ಜಾಗ ಮರೆಯೋಲ್ಲ...' ಹಾಡುಗಳು ಅದ್ಧೂರಿ ಚಿತ್ರದಲ್ಲಿ ದೊಡ್ಡ ಸದ್ದೇನೂ ಮಾಡಿರಲಿಲ್ಲ. ಬೇರೆ ಜನಪ್ರಿಯ ಹಾಡುಗಳ ಮಧ್ಯೆ ಈ ಎರಡು ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಲೋಟ್ಯೂನಾಗಿರುವುದು ಸೋಜಿಗವೆನಿಸಿದರೂ, ಮೆಲೋಡಿಗೆ ಎಂದಿಗೂ ಬೇಡಿಕೆಯಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಭಾರ್ತಿಏರ್ ಟೆಲ್ ಸಮೀಕ್ಷೆಯ ಪ್ರಕಾರ ಹಲೋ ಟ್ಯೂನ್ ಬಳಕೆದಾರರಲ್ಲಿ ದಕ್ಷಿಣ ಭಾರತದ್ದೇ ಮೇಲುಗೈ. ಇದ್ದು ಶೇಕಡಾ ಮೂವತ್ತೊಂಬತ್ತರಷ್ಟು ಮಂದಿ ಇಲ್ಲಿ ಹಲೋಟ್ಯೂನ್ ಬಳಸುತ್ತಿದ್ದಾರಂತೆ. ಫೇಸ್ ಬುಕ್‌ನಲ್ಲಿ ಕೂಡ ಏರ್ ಟೆಲ್ ತನ್ನ ಪುಟವನ್ನು ತೆರೆದಿದ್ದು ಹಲೋಟ್ಯೂನ್ ಬಳಕೆಗೆ ಹಾಗೂ ಆಯ್ಕೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


