ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

ಮಹಿಳಾ ಪ್ರಯಾಣಿಕರಿಗೆಂದೇ ಪ್ರತ್ಯೇಕವಾಗಿ ಮೀಸಲಿರಿಸಿರುವ ಸೀಟಿನಲ್ಲಿ ಯಾವುದೇ ವ್ಯಕ್ತಿಗಳು ಕುಳಿತುಕೊಳ್ಳುವಂತಿಲ್ಲ. ಇದು ಮೋಟಾರು ವಾಹನ ನಿಯಮ 94ರ ಉಲ್ಲಂಘನೆಯಾದಂತೆ. ಅದಕ್ಕಾಗಿ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡಕ್ಕೆ ಅನುಗುಣವಾಗಿ ರು. 100 ದಂಡ ಕಟ್ಟಬೇಕಾಗುತ್ತದೆ.
ನಿಷೇಧಿತ ಪ್ರದೇಶದಲ್ಲಿ ಅಥವಾ ನಿಲುಗಡೆಯಲ್ಲದ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸಿದಲ್ಲಿ ಮೋಟಾರು ವಾಹನ ಕಾಯ್ದೆಯ ಕಲಂ 191ರ ಉಲ್ಲಂಘನೆ ಮಾಡಿದಂತೆ. ಅಂತಹವರಿಗೆ ರು. 100 ದಂಡ ವಿಧಿಸಲಾಗುತ್ತದೆ.
ಸಂಚಾರಿ ಸಂಕೇತವನ್ನು ದಾಟಿ ಹೋಗುವುದು, ಪ್ರವೇಶವಿಲ್ಲದ ರಸ್ತೆಯಲ್ಲಿ ಪ್ರವೇಶಿಸುವುದು, ನಿಷೇಧಿತ ಪ್ರದೇಶದಲ್ಲಿ ಹಾರ್ನ್ ಮಾಡುವುದು ಸಹ ಕಲಂ 191ರ ಉಲ್ಲಂಘನೆಗೆ ಕಾರಣವಾಗುತ್ತದೆ. ಅಂತಹವರಿಗೆ ತಲಾ (ಪ್ರತಿಯೊಂದು ತಪ್ಪಿಗೆ) ರು. 100 ದಂಡ ಹಾಕಲಾಗುತ್ತದೆ.
ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಿಯಮಿಸಲಾದ ಗುಣಮಟ್ಟಗಳನ್ನು ಉಲ್ಲಂಘಿಸಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಮೋಟಾರು ವಾಹನವನ್ನು ನಡೆಸುವುದು, ನಡೆಸುವಂತೆ ಮಾಡುವುದು ಅಥವಾ ನಡೆಸಲು ಅನುಮತಿ ನೀಡುವುದು (ದ್ವಿಚಕ್ರ ಅಥವಾ ತ್ರಿಚಕ್ರ ವಾಹನಕ್ಕೆ, ನಾಲ್ಕು ಚಕ್ರದ ವಾಹನಗಳಿಗೆ, ಪ್ರಯಾಣಿಕರಿಗೆ ಅಥವಾ ಭಾರಿ ವಾಹನಕ್ಕೆ) ಮಾಡಿದಲ್ಲಿ ಅಂತಹವರಿಗೆ ಕಲಂ 194ರ ಅಡಿಯಲ್ಲಿ ಕ್ರಮವಾಗಿ ರು. 300, ರು. 600 ಹಾಗೂ ರು. 800 ದಂಡ ವಿಧಿಸಲಾಗುತ್ತದೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


