ಗೃಹೀಭಕ್ತನ ಮನೆಯಲ್ಲಿ ಗುರುವಿನ ಪ್ರತಿಷ್ಠಾಪನೆ
ಶ್ರೀರಾಮಕೃಷ್ಣರ ಗೃಹೀಭಕ್ತರಲ್ಲಿ ನವಗೋಪಾಲ ಘೋಷ್ ಒಬ್ಬರು. ಇವರು ಹೌರಾದ ರಾಮಕೃಷ್ಣಪುರದಲ್ಲಿ ಹೊಸಮನೆ ಕಟ್ಟಿಸಿದರು. ಆ ಮನೆಯ ಪೂಜಾಕೋಣೆಯಲ್ಲಿ ಶ್ರೀರಾಮಕೃಷ್ಣರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ರಮದಲ್ಲಿ ವಿವೇಕಾನಂದರು ಭಾಗವಹಿಸಬೇಕೆಂದು ವಿನಂತಿಸಿಕೊಂಡರು. ಅದಕ್ಕೆ ಸಮ್ಮತಿಸಿದ ಸ್ವಾಮೀಜಿ ಎಲ್ಲ ಸಾಧು ಶಿಷ್ಯರೊಂದಿಗೆ ಹೊರಟರು.
ಸ್ವಾಮೀಜಿ ಸಂಕೀರ್ತನೆಯ ತಂಡದೊಂದಿಗೆ ನವಗೋಪಾಲರ ಮನೆ ತಲುಪಿದರು. ಚಂದ್ರಕಾಂತ ಶಿಲೆ ಹಾಸಿದ ಪೂಜಾಕೋಣೆಯನ್ನು ಅಂದವಾಗಿ ಅಲಂಕರಿಸಲಾಗಿತ್ತು. ಪೀಠದ ಮೇಲೆ ಶ್ರೀರಾಮಕೃಷ್ಣರ ಸುಂದರ ವಿಗ್ರಹ ವಿರಾಜಿಸುತ್ತಿತ್ತು. ಮನೆಯ ಯಜಮಾನಿ, 'ಸ್ವಾಮೀಜಿ, ನಾವು ಬಡವರು, ಭಗವಂತನನ್ನು ಯೋಗ್ಯರೀತಿಯಲ್ಲಿ ಪೂಜಿಸುವ ಸಾಮರ್ಥ್ಯ ನಮಗಿಲ್ಲ. ದಯವಿಟ್ಟು ನಮ್ಮ ಮೇಲೆ ಕೃಪೆತೋರಿ ಆಶೀರ್ವದಿಸಬೇಕು' ಎಂದಳು. ಅದಕ್ಕೆ ಸ್ವಾಮೀಜಿ, 'ಅಮ್ಮಾ, ಶ್ರೀರಾಮಕೃಷ್ಣರ ಹದಿನಾಲ್ಕು ತಲೆಮಾರಿನವರೂ ಇಂತಹ ಚಂದ್ರಕಾಂತ ಶಿಲೆ ಹಾಸಿರುವ ಕೋಣೆಯಲ್ಲಿ ವಾಸ ಮಾಡಲಿಲ್ಲ. ಸಣ್ಣ ಹಳ್ಳಿಯ ಬಡ ಜೋಪಡಿಯಲ್ಲಿ ಜನಿಸಿದ ಅವರು ಯಾವಾಗಲೂ ಸಾದಾ ಜೀವನ ನಡೆಸಿದವರು. ಅವರು ಇಂಥ ಭಕ್ತಿಪೂರ್ಣ ಪೂಜೆ ಪುನಸ್ಕಾರಗಳಿರುವ ಈ ಸ್ಥಳದಲ್ಲಿ ನೆಲೆಸಿರದಿದ್ದರೆ ಬೇರೆ ಇನ್ನೆಲ್ಲಿ ತಾನೇ ಇರಬಲ್ಲರೋ ನಾ ಕಾಣೆ!' ಎಂದರು.
ನಂತರ ಸ್ವಾಮೀಜಿ ಭಕ್ತಿಭಾವಲೀನರಾಗಿ ಶ್ರೀರಾಮಕೃಷ್ಣರನ್ನು ವಿಗ್ರಹದಲ್ಲಿ ಆವಾಹನೆ ಮಾಡಿ ಪೂಜೆಗೈದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

