ಭಾರತ ಬಾಡದ ದೇಶ!
ಭಾರತ ಪ್ರಾಚಿನ ಕಾಲದಿಂದಲೂ ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದನ್ನು ಅನೇಕ ಸಾಕ್ಷ್ಯಾಧಾರಗಳು ಸಾರುತ್ತವೆ. ಭಾರತವನ್ನು ಸಂದರ್ಶಿಸಿದ ..
ಭಾರತ ಪ್ರಾಚಿನ ಕಾಲದಿಂದಲೂ ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದನ್ನು ಅನೇಕ ಸಾಕ್ಷ್ಯಾಧಾರಗಳು ಸಾರುತ್ತವೆ. ಭಾರತವನ್ನು ಸಂದರ್ಶಿಸಿದ ಯಾತ್ರಿಕರೆಲ್ಲ ಹೇಳುವುದು, ಭಾರತದ ಸಮೃದ್ಧ ಜೀವನವನ್ನು. ಈ ಶ್ರೀಮಂತ ಬದುಕು ಹಣದ ಆಧಾರದಿಂದ ನಿರ್ಮಿತವಾದುದಾಗಿರಲಿಲ್ಲ. ಜನರು ಧರ್ಮದ ತಳಹದಿಯ ಮೇಲೆ ನಿರ್ಮಿಸಿಕೊಂಡ ಬದುಕು ಸುಖ, ಶಾಂತಿ, ಸಮೃದ್ಧಿ, ಸುಭಿಕ್ಷೆಗಳಿಂದ ಕೂಡಿದುದಾಗಿತ್ತು. ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಕಾರಣ ಅದು ಕೆಲವರಲ್ಲಿ ಶೇಖರವಾಗಿ ಹಲವರನ್ನು ಬಡತನಕ್ಕೆ ತಳ್ಳುವ ಪರಿಸ್ಥಿತಿ ಆಗ ಇರಲಿಲ್ಲ. ಆಧುನಿಕ ಜಗತ್ತಿನಲ್ಲಿ ಪ್ರಚುರಪಡಿಸಲಾಗುತ್ತಿರುವ ಉದಾರವಾದ, ಸಹಕಾರವಾದ, ಮುಕ್ತವಾದಗಳೆಲ್ಲ ನೈಜ ವಾಗಿ ಆಚರಣೆಯಲ್ಲಿದ್ದ ಕಾಲ ಅದಾ ಗಿತ್ತು. ಈ ಅರ್ಥದಲ್ಲಿ ಭಾರತ ಶ್ರೀಮಂತ ರಾಷ್ಟ್ರ ಎಂಬ ಖ್ಯಾತಿ ಗಳಿಸಿತ್ತು.
ಕಾಲ ಬದಲಾದಂತೆ ಭಾರತೀಯನ ಬದುಕು ಅಧ್ಯಾತ್ಮಿಕ ತಳಹದಿಯಿಂದ ಲೌಕಿಕ ತಳಹದಿಗೆ ವರ್ಗವಾಯಿತು. ಹಣ, ಅಧಿಕಾರ, ಅಂತಸ್ತುಗಳ ಬೆನ್ನತ್ತಿ ತ್ಯಾಗ-ಸೇವೆಗಳಿಂದ ಕೂಡಿದ ಶಾಂತಿ, ನೆಮ್ಮದಿ, ಆನಂದಗಳಿಂದ ದೂರಸರಿದ.
ಆದ್ದರಿಂದ ವಿವೇಕಾನಂದರು ಆಧುನಿಕ ಭಾರತವನ್ನು ಧರ್ಮದ ತಳಹದಿಯ ಮೇಲೆ ಕಟ್ಟಬಯಸಿದರು. 'ಭಾರತವು ಬಡರಾಷ್ಟ್ರವಾಗಿರಬಹುದು ಆದರೆ ಹಿಂದೂ ಧರ್ಮದಲ್ಲಿ ತ್ಯಾಗವೇ ಧರ್ಮದ ಮೊದಲ ಮೆಟ್ಟಿಲು. ಇಲ್ಲಿ ಬಡತನವೊಂದು ಪಾಪವಲ್ಲ, ಅಲ್ಲದೆ ಭಾರತದಲ್ಲಿ ಇತರ ರಾಷ್ಟ್ರಗಳಂತೆ ಬಡತನದೊಂದಿಗೆ ದುಷ್ಟತನ ಸೇರಿಕೊಂಡಿಲ್ಲ ಎಂಬುದನ್ನು ಮನಗಾಣಬೇಕು. ಇಲ್ಲಿಯ ಸಮಸ್ಯೆಗಳನ್ನು ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿ ಧರ್ಮ ಮತ್ತು ವಿಜ್ಞಾನದ ಸಮನ್ವಯ ವಿಧಾನಗಳ ನೆರವಿನಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಂತಾಗಬೇಕು' ಎಂದು ಪಾಶ್ಚಾತ್ಯರೆದುರು ಹೇಳುತ್ತಿದ್ದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

