ಯಾರೇ ನಿನ್ನವನು?

ಇನ್ನೂ ಪ್ರಿಯಕರನನ್ನು ಹೊಂದಿಲ್ಲದ, ಆದರೆ 'ನನಗೂ ಒಬ್ಬ ಗೆಳೆಯ ಬೇಕು' ಎಂದು ಹಂಬಲಿಸುತ್ತಿರುವ ತರುಣಿಯರು ಯಾವ ಕ್ಷಣಕ್ಕೂ ಸಿಡಿಯಬಲ್ಲ ಬಾಂಬುಗಳಂತಿರುತ್ತಾರೆ. ಅದರಲ್ಲೂ, ತನಗೆ ಅನುಕೂಲಕರನಾದ ಸೊಗಸುಗಾರ ತರುಣನನ್ನು ಇದೀಗ ತಾನೆ ಕಂಡಿರುವ ಪ್ರಣಯಕಾತರ ತರುಣಿಯ ವರ್ತನೆ ನೋಡುವಂತಿರುತ್ತದೆ.
ಅಲಸವಲಿತೈಃ ಪ್ರೇಮಾರ್ದ್ರಾದ್ರೈರ್ಮುಹುರ್ಮುಕುಲೀಕೃತೈಃ
ಕ್ಷಣಮಭಿಮುಖೈರ್ಲಜ್ಜಾಲೋಲೈರ್ನಿಮೇಷಪರಾಙ್ಮುಖೈಃ
ಹೃದಯನಿಹಿತಂ ಭಾವಾಕೂತಂ ವಮದ್ಭಿರಿವೇಕ್ಷಣೈಃ
ಕಥಯ ಸುಕೃತೀ ಕೋಯಂ ಮುಗ್ಧೇ ತ್ವಯಾದ್ಯ ವಿಲೋಕ್ಯತೇ
ಮೊದಲ ಬಾರಿಗೆ ಸ್ಮರಶರಕ್ಕೆ ತುತ್ತಾದ ಗೆಳತಿಯನ್ನು ಸಖಿ ಛೇಡಿಸುತ್ತಿದ್ದಾಳೆ: ಮುಗ್ಧೆ, ನಿನ್ನ ಕಂಗಳು ಪ್ರೇಮದಿಂದ ಒದ್ದೆಯಾಗಿವೆ. ಆಲಸ್ಯದ ಯಾತನೆಯಿಂದ ಎಂಬಂತೆ ಮತ್ತೆ ಮತ್ತೆ ಮುಚ್ಚಿ ತೆರೆಯುತ್ತಿವೆ. ನಾಚಿಕೆಯಿಂದ ಮುಖ ತಿರುಗಿಸುತ್ತಿ. ಮತ್ತೆ ಮುಖ ಮೇಲೆತ್ತಿ ಕಡೆಗಣ್ಣೋಟವನ್ನು ಬೀರುತ್ತೀ. ಇಂಥ ಲಜ್ಜಾನ್ವಿತ ಚಂಚಲಕಟಾಕ್ಷಗಳ ಮೂಲಕ ನಿನ್ನಲ್ಲಿ ಪ್ರೇಮೋದಯವಾಗಿದೆಯೆಂಬ ಸಂಗತಿಯನ್ನು ಜಗಜ್ಜಾಹೀರು ಮಾಡುತ್ತಿದ್ದೀಯಲ್ಲ! ನನಗೆ ಹೇಳಮ್ಮ, ನಿನ್ನ ಇಂಥ ನೋಟವೆಂಬ ಪುಣ್ಯಕ್ಕೆ ಪಾತ್ರನಾದ ಆ ಸುಕೃತಿ ಯಾರೇ?
ತರುಣಿಯ ನೋಟ, ಲಜ್ಜೆ, ಹಾವಭಾವಗಳಿಂದಲೇ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದೆಂಬುದು ಸರ್ವವಿದಿತ. ಅನೇಕ ಸಲ ಪ್ರಣಯ ಸನ್ನಿವೇಶಗಳಲ್ಲಿ ಛೇಡನೆಯ ಪಾತ್ರವೂ ಮಹತ್ವದ್ದು. ನಮ್ಮ ಮನಸ್ಸನ್ನು ಕೂಡಲೆ ಅರ್ಥ ಮಾಡಿಕೊಳ್ಳಬಲ್ಲ ಗೆಳೆಯ ಗೆಳತಿಯರಿದ್ದರೆ ಛೇಡನೆಯೂ ಹಿತವಾದ ಸಂಗತಿಯೇ!
= ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


