ಬೈಟುಕಾಫಿ

ಗೌರಿ ಪ್ರತಿಬಿಂಬ

ಗೌರಿ ಪ್ರತಿಬಿಂಬ
Published On :

ಕವಿಗಳು ದೇವತೆಗಳನ್ನೂ ಬಿಡುವುದಿಲ್ಲ. ಕೃಷ್ಣನಾದರೂ, ಶಿವನಾದರೂ ಅವರ ದೃಷ್ಟಿಯಲ್ಲಿ ಒಂದೇ. ಹಾಗಂತ ಅವರ ಮೇಲೆ ಇವರಿಗೆ ಭಕ್ತಿಭಾವವಿಲ್ಲವೆಂದಲ್ಲ. ಇವರು ನುತಿಸುವುದೂ ಭಕ್ತಿಯಿಂದಲೇ. ಆದರೆ ಕೆಲವೊಮ್ಮೆ ಕವಿತ್ವವು ಭಕ್ತಿಯನ್ನೂ ಮೀರಿಸಿಬಿಡುತ್ತದೆ. ಅಂಥ ಕವಿಯ ಶ್ಲೋಕದಲ್ಲಿ ಶಿವ ಕಾಣಿಸಿಕೊಂಡದ್ದು ಹೀಗೆ.
ಪ್ರತಿಬಿಂಬಿತ ಗೌರೀಮುಖವಿಲೋಕನೋತ್ಕಂಪಶಿಥಿಲಕರಗಲಿತಾಮ್
ಸ್ವೇದಭರಪೂರ್ಯಮಾಣಃ ಶಂಭೋ ಸಲಿಲಾಂಜಲಿರ್ಜಯತಿ
ಕೈಲಾಸದಲ್ಲಿ ಒಂದು ಬೆಳಗು. ಈಶ್ವರ- ಪಾರ್ವತಿಯರು ಆಗತಾನೆ ಮದುವೆಯಾಗಿದ್ದಾರೆ. ಈಶ್ವರನು ನಸುಕಿನಲ್ಲಿ ಎದ್ದು ಸಂಧ್ಯಾವಂದನೆಗೆ ತೊಡಗಿದ್ದಾನೆ. ಮುಂಜಾನೆ ಎದ್ದು ತನ್ನನ್ನು ಬಿಟ್ಟು ಹೋಗುತ್ತಿದ್ದಾನಲ್ಲ ಎಂದು ನವವಧು ಗೌರಿಗೆ ಕುತೂಹಲ. ಅವಳೂ ಅವನನ್ನು ಹಿಂಬಾಲಿಸಿದ್ದಾಳೆ. ಶಿವನು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲೆಂದು ನದಿಯ ನೀರನ್ನು ಬೊಗಸೆಯಲ್ಲಿ ತುಂಬಿಕೊಂಡ. ಆಗ ಪಾರ್ವತಿ ಹಿಂದಿನಿಂದ ಬಂದು ನಿಂತುಕೊಂಡಳು. ಒಡ್ಡಿದ ಶಿವನ ಬೊಗಸೆಯ ನೀರಿನಲ್ಲಿ ಆಕೆಯ ಪ್ರಫುಲ್ಲ ಮುಖಾರವಿಂದದ ದರ್ಶನವಾಯ್ತು. ಆಕೆಯನ್ನು ನೋಡಿ, ಸೂರ್ಯನಲ್ಲಿ ನೆಟ್ಟಿರಬೇಕಾಗಿದ್ದ ಶಿವನ ಮನಸ್ಸು ವಿಚಲಿತವಾಯ್ತು, ಚಂಚಲವಾಯ್ತು, ಕೈ ಬೆವರಿತು. ಕೈ ನಡುಗಿತು. ತುಂಬಿದ್ದ ಅರ್ಘ್ಯಜಲ ತುಳುಕಾಡಿ ಚೆಲ್ಲಿತು! ಇಂಥ ಶಿವಾರ್ಘ್ಯಜಲ ನಮ್ಮನ್ನು ಕಾಪಾಡಲಿ.
ನವವಿವಾಹಿತರ ಸುಖಸಂಕಟ ದೇವತೆಗಳಿಗೂ ತಪ್ಪಿದ್ದಲ್ಲ. ಕೈಲಾಸದಲ್ಲಿದ್ದ ಶಿವ- ಶಿವೆಯರಿಗೇ ಈ ಪಾಡು. ಇನ್ನು ಹನಿಮೂನ್‌ಗಾಗಿ ಕೈಲಾಸದ ಸಮೀಪದ ಹಿಮತಾಣಗಳಿಗೆ ತೆರಳುವ ನವಜೋಡಿಗಳ ಪಾಡೇನು?


= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.