ಟಗರು ಪೂಜೆ

ಶಿವ ಹಾಗೂ ಶಿವನ ಪ್ರತಿರೂಪದಲ್ಲಿರುವ ದೇವಸ್ಥಾನದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸುವುದು ಸಾಮಾನ್ಯ. ಆದರೆ, ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಟಗರಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಅದಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ.
ಇದೇ ಗ್ರಾಮದಲ್ಲಿ ಹುಟ್ಟಿದ್ದ ಟಗರೊಂದನ್ನು ಗದುಗಿನ ಬಾಬು ಬಾಂಡಗೆ ಎನ್ನುವವರು ಚಿಕ್ಕದಿರುವಾಗಲೇ ಖರೀದಿಸಿ, ಚೆನ್ನಾಗಿ ಬೆಳೆಸಿದ್ದರು. ರಾಮ ಎಂಬ ಹೆಸರಿನ ಇದನ್ನು ಟಗರು ಕಾದಾಟಕ್ಕೆ ಬಿಡುತ್ತಿದ್ದರು. ರಾಜ್ಯದ ಯಾವುದೇ ಭಾಗದಲ್ಲಿ ಟಗರು ಕಾಳಗ ನಡೆದರೂ ಅದನ್ನು ಕೊಂಡೊಯ್ಯುತ್ತಿದ್ದರು. ಅದೂ ಕೂಡಾ ಹೋದಲ್ಲೆಲ್ಲ ಜಯಶಾಲಿಯಾಗಿಯೇ ಬರುತ್ತಿತ್ತು. ಕೊನೆಗೊಮ್ಮೆ ಈತ ತಾನು ಹುಟ್ಟಿದ ಊರಾದ ಅಡವಿಸೋಮಾಪುರದಲ್ಲಿಯೇ ಟಗರು ಕಾಳಗದಲ್ಲಿ ಪಾಲ್ಗೊಂಡು ಅದರಲ್ಲೇ ನಿಧನ ಹೊಂದಿದ.
ಟಗರು ಕಾಳಗದಲ್ಲಿ ಹೆಸರು ಮಾಡಿದ ತಮ್ಮ ಗ್ರಾಮದ ಹೆಮ್ಮೆಯ ಪುತ್ರನಿಗೆ ಗ್ರಾಮಸ್ಥರು ಬೀರಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿಯೇ ಅಂತ್ಯಸಂಸ್ಕಾರ ಮಾಡಿದರು, ಬಳಿಕ ನಿತ್ಯವೂ ಅದಕ್ಕೆ ಪೂಜೆ ಸಲ್ಲಲಿ ಎಂದು ದೇವರ ಎದುರು ಮೂರ್ತಿ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿದರು.
ಟಗರಿನ ಮೂರ್ತಿಗೆ ಗ್ರಾಮಸ್ಥರು ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ವಾರದಲ್ಲಿ ಒಂದು ದಿನ ಹಾಲಿನ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಶಿವನ ಮುಂದಿರುವ ನಂದಿ ಮೂರ್ತಿಗೆ ಸಿಗುವ ಎಲ್ಲ ಸೇವೆಗಳೂ ನಡೆಯುತ್ತವೆ. ಯುವಕರು ಇದನ್ನು ಪೂಜಿಸಿದರೆ ಧೈರ್ಯ ಮತ್ತು ಆತ್ಮವಿಶ್ವಾಸ ಬರುತ್ತದೆ ಎನ್ನುವ ನಂಬಿಕೆ.
= ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


