ನೇತ್ರದಾನ

ನೇತ್ರದಾನವೆಂದರೆ ಜನರು ಕಣ್ಣುಗಳನ್ನು ಠೇವಣಿ ಇಡುವುದು. ಅಂದರೆ ಮರಣದ ನಂತರ ತಮ್ಮ ಕಣ್ಣುಗಳನ್ನು ದೃಷ್ಟಿಯ ಅಗತ್ಯವಿರುವವರಿಗೆ ದಾನ ಮಾಡಲು ಠೇವಣಿ ಇಡುವುದು.
ಈ ರೀತಿ ದಾನ ಮಾಡಿದ ಕಣ್ಣುಗಳನ್ನು ಕಾರ್ನಿಯ ಕಸಿ ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನಿಯದ ಅಂಧತ್ವವಿರುವ ವ್ಯಕ್ತಿಗೆ ಜೋಡಿಸಿ ದೃಷ್ಟಿಯನ್ನು ನೀಡುತ್ತಾರೆ.
ಯಾರು ಬೇಕಾದರೂ ನೇತ್ರದಾನ ಮಾಡಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಕಣ್ಣಿನ ದೃಷ್ಟಿ ಮಂದವಾಗಿದ್ದವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದವರೂ ನೇತ್ರದಾನ ಮಾಡಬಹುದು.
ಒಬ್ಬ ವ್ಯಕ್ತಿ ನೇತ್ರದಾನ ಮಾಡಿದರೆ ಇಬ್ಬರು ವ್ಯಕ್ತಿಗಳಿಗೆದೃಷ್ಟಿ ನೀಡಿದಂತಾಗುತ್ತದೆ. ಮಾತ್ರವಲ್ಲ ಆ ಇಬ್ಬರಿಗೆ ಸ್ವಾವಲಂಬಿ, ಸಂತೃಪ್ತ ಬದುಕನ್ನು ನೀಡಿದ ಧನ್ಯತೆ ನಿಮ್ಮದಾಗುತ್ತದೆ.
2011ರ ವರದಿಯಂತೆ ದೇಶದಲ್ಲಿ 5.2 ಕೋಟಿ ಜನರಿಗೆ ದೃಷ್ಟಿ ಮಾಂದ್ಯತೆ ಇದ್ದರೆ, 2.7 ಲಕ್ಷ ಮಕ್ಕಳು ಅಂಧರಾಗಿದ್ದಾರೆ. ಪ್ರತಿ ವರ್ಷ ಶೇ.90 ರಷ್ಟು ಕಾರ್ನಿಯಾ ಚಿಕೆತ್ಸೆಗಳು ಯಶಸ್ವಿಯಾಗುತ್ತವೆ.
ಭಾರತದಲ್ಲಿರುವ ಒಟ್ಟು ಅಂಧರ ಸಂಖ್ಯೆಯಲ್ಲಿ 30 ಲಕ್ಷ ಜನರಿಗೆ ಕಾರ್ನಿಯಾದ ಅಂಧತ್ವವಿದೆ. ದಾನಿಗಳಿಂದ ಅವರು ಮತ್ತೆ ದೃಷ್ಟಿ ಪಡೆಯಲು ಸಾಧ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


