ಇನ್ಸುಲಿನ್ ಉತ್ಪಾದನೆಗೆ ಉತ್ತೇಜಕ ಆಹಾರ

ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ತೆಗೆದು ಮುಂದೊಂದು ದಿನ ಬೇಕಾದಾಗ ಅದನ್ನು ಎನರ್ಜಿಯಾಗಿ ಬಳಸಲು ಸ್ಟೋರ್ ಮಾಡುವ ಕೆಲಸ ಇನ್ಸುಲಿನ್‌ನದು. ಮಾಂಸಖಂಡಗಳಿಗೆ, ಫ್ಯಾಟ್ ಟಿಶ್ಯೂಗಳಿಗೆ ರಕ್ತದಿಂದ ಗ್ಲೂಕೋಸ್ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇನ್ಸುಲಿನ್ ಪ್ಯಾಂಕ್ರಿಯಾಸ್‌ನಲ್ಲಿ ಸೃಷ್ಟಿಯಾಗುವ ಒಂದು ಹಾರ್ಮೋನ್. ಇನ್ಸುಲಿನ್ ಇಲ್ಲದಿದ್ದ ಪಕ್ಷದಲ್ಲಿ ಹೈ ಬಿಪಿಯಿಂದ ಬಳಲಿ, ಸಿಹಿ ಎಂದರೆ ಅಲರ್ಜಿ ಎಂದು ಅನಿವಾರ್ಯವಾಗಿ ಹೇರಿಕೊಳ್ಳಬೇಕಾದ ಪಾಡಾಗಿಬಿಡುತ್ತದೆ. ಟೈಪ್ 1 ಡಯಾಬಿಟೀಸ್ ಇರುವವರ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯಾಗುವುದಿಲ್ಲ. ಹಾಗಾಗಿ ವೈದ್ಯರು ಅವರಿಗೆ ಇನ್ಸುಲಿನ್ ಅನ್ನು ಹೊರಗಿನಿಂದ ನೀಡುತ್ತಾರೆ. ಹಾಗಂತ ರಕ್ತದ ಸಕ್ಕರೆಯಂಶ ಕಡಿಮೆಗೊಳಿಸಲು ದೇಹ ಯಾವಾಗ ನಿರಂತರವಾಗಿ ಇನ್ಸುಲಿನ್ ಉತ್ಪಾದಿಸಲು ತೊಡಗುತ್ತದೋ ಆಗ ಸಹಜವಾಗಿ ಅದಕ್ಕೆ ಪ್ರತಿರೋಧ ವ್ಯವಸ್ಥೆಯೂ ಹುಟ್ಟಿಕೊಳ್ಳುತ್ತದೆ. ಇದು ಟೈಪ್ 2 ಡಯಾಬಿಟೀಸ್‌ಗೆ ಕಾರಣವಾಗುತ್ತದೆ.
ಯಾವ ಆಹಾರವನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿ ಎಷ್ಟು ಸಕ್ಕರೆಯಂಶ ಜಾಸ್ತಿಯಾಗುತ್ತದೆಂದು ನೋಡುವುದಕ್ಕೆ ಗ್ಲಿಸಮಿಕ್ ಇಂಡೆಕ್ಸ್ ಸ್ಕೇಲ್ ಬಳಸುತ್ತೇವೆ. ಅಂದರೆ ಆ ಆಹಾರದಲ್ಲಿ ಗ್ಲಿಸಮಿಕ್ ಅಂಶ ಎಷ್ಟಿದೆ ಎಂದು ಅಳತೆ ಮಾಡಿ, ಅದನ್ನು ಅದರಲ್ಲಿರುವ ಕಾರ್ಬೋಹೈಡ್ರೇಟ್ ಅಳತೆಯೊಂದಿಗೆ ಗುಣಿಸಿದರೆ ಸಿಗುವ ಮೊತ್ತದಲ್ಲಿ ಆ ಆಹಾರ ಎಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ ಎಂಬ ಲೆಕ್ಕ ಸಿಗುತ್ತದೆ. ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಕಡಿಮೆ ಇನ್ಸುಲಿನ್ ಉತ್ಪಾದನೆಗೆ ಉತ್ತೇಜನ ನೀಡಿದರೆ, ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಹೊಂದಿರುವ ಆಹಾರ ಹೆಚ್ಚು ಇನ್ಸುಲಿನ್ ಉತ್ಪಾದನೆಗೆ ಉತ್ತೇಜನ ನೀಡುತ್ತದೆ.
ಫ್ರೆಂಚ್ ಫ್ರೈಸ್, ಬೇಯಿಸಿದ ಆಲೂಗಡ್ಡೆ, ಪಾಸ್ತಾ, ಚಾಕೋಲೇಟ್‌ಗಳು, ಸಕ್ಕರೆಪಾಕದಂತೆ ಸಿಹಿಯಾಗಿರುವ ಜ್ಯೂಸ್‌ಗಳು, ತಿಂಡಿಗಾಗಿ ಉಪಯೋಗಿಸುವ ಸಿರೀಲ್ಸ್, ಕಲ್ಲಂಗಡಿ, ಅನ್ನ, ಚೀಸ್ ಇತ್ಯಾದಿಗಳು ಅತಿ ಹೆಚ್ಚು ಅಂದರೆ ಹೆಚ್ಚಿನ ಗ್ಲಿಸಮಿಕ್ ಇಂಡೆಕ್ಸ್ ವ್ಯಾಲ್ಯೂ ಹೊಂದಿವೆ. ಇನ್ನು ಮಧ್ಯಮ ಮಟ್ಟದ ಗ್ಲಿಸಮಿಕ್ ವ್ಯಾಲ್ಯೂ ಹೊಂದಿರುವ ಆಹಾರಗಳೆಂದರೆ ಕುಚಲಕ್ಕಿ, ಅಕ್ಕಿಯ ಕೇಕ್, ಸಕ್ಕರೆ ಹಾಕದ ಹಣ್ಣಿನ ಜ್ಯೂಸ್‌ಗಳು, ಓಟ್ಸ್, ಬ್ರೆಡ್, ಜೇನುತುಪ್ಪ ಇತ್ಯಾದಿ.
ಕ್ಯಾರೆಟ್, ಬೀನ್ಸ್ ಸೇರಿದಂತೆ ಹಲವು ತರಕಾರಿಗಳು, ಅಣಬೆ, ಮಾವು, ಸ್ಟ್ರಾಬೆರ್ರಿ, ಪೀಚ್‌ನಂತಾ ಹಣ್ಣುಗಳು ಇತ್ಯಾದಿ ಅತಿ ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ವ್ಯಾಲ್ಯೂ ಹೊಂದಿದೆ.
ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ವ್ಯಾಲ್ಯೂ ಹೊಂದಿದ ಆಹಾರಗಳ ಸೇವನೆ ಮನುಷ್ಯನನ್ನು ಕಾಯಿಲೆಗಳಿಂದ ದೂರವಿಡುತ್ತದೆ ಎನ್ನುತ್ತವೆ ಸಂಶೋಧನೆಗಳು. ಅಂದರೆ ಎಲ್ಲೀವರೆಗೆ ಇನ್ಸುಲಿನ್ ಹಿತಮಿತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೋ ಅಲ್ಲೀವರೆಗೆ ಎಲ್ಲವೂ ಚೆನ್ನಾಗಿರುತ್ತದೆ. ಅತಿಯಾದರೆ ಅಮೃತವೂ ವಿಷವಂತೆ. ಟಿ
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


