ಮಹನೀಯರು ಕಮ್ಮಿ ನಿದ್ರಿಸುತ್ತಾರೆ, ಹೌದಾ?

ಸೋಮಾರಿತನ ಎಂದು ಪ್ರತ್ಯೇಕವಾಗಿ ಯಾವುದೂ ಇಲ್ಲ. ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಇಷ್ಟವಿರುವ ಕೆಲಸ ಮಾಡಿ ತರುವಾತ ಬಾಧೆ ಪಡುವುದನ್ನೇ ಸೋಮಾರಿತನ ಎನ್ನುತ್ತಾರೆ. ತಾಯ್ತಂದೆಯೊಂದಿಗೆ ಸಹಾ ಇಲ್ಲಿ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ : ಓದು ಬೋರ್ ಹೊಡೆದು ವಿದ್ಯಾಥರ್ಿ ಟಿ.ವಿ. ಆನ್ ಮಾಡುವುದಿಲ್ಲ. ರೂಮಿನಲ್ಲಿರುವ ಟಿ.ವಿ. ಓದನ್ನು ಬೇಗನೆ ಬೋರ್ ಹೊಡೆಸುವ ಹಾಗೆ ಮಾಡುತ್ತದೆ.
ಸೋಮಾರಿತನವಿರುವವರು ತಲೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿಕೊಂಡು ಕುಳಿತು ತಮ್ಮ ಚಯರ್ೆಗಳನ್ನು ಸಮಥರ್ಿಸಿಕೊಳ್ಳುತ್ತಾರೆ... ನನ್ನ ಕೆಲಸ ಪ್ರಾರಂಭಿಸಲು ಒಳ್ಳೆಯ ಮುಹೂರ್ತ(ದಿನ)ಕ್ಕಾಗಿ ನಿರೀಕ್ಷಿಸುತ್ತಿದ್ದೇನೆ... ಈ ದಿನ ಬೇಗನೆ ಮಲಗಿಕೊಂಡರೆ ನಾಳೆ ಬೆಳಗ್ಗೆ ಮತ್ತಷ್ಟು ಉಲ್ಲಾಸದಿಂದ ಕೆಲಸವನ್ನು ಪ್ರಾರಂಭಿಸಬಲ್ಲೆ.. ವಾತಾವರಣ ಬಹಳವೇ ಆಹ್ಲಾದಕರವಾಗಿದೆ. ನಾಳೆಯಿಂದ ಆರಂಭಿಸುತ್ತೇನೆ... ನಾನು ಯಾವುದಾದರೂ ಕೆಲಸ ಶುರು ಮಾಡಿದರೆ ಅದು ಪರ್ಫೆಕ್ಟ್ ಆಗಿ ಪೂತರ್ಿಯಾಗಬೇಕೆಂದು ಆಶಿಸುತ್ತೇನೆ.
ನಿಮಗೆ ದಿನದಿನಕ್ಕೆ ಸೋಮಾರಿತನ ಹೆಚ್ಚುತ್ತಿದೆಯಾ? ತಿಂಗಳಿಗೆ ಅರ್ಧ ಕೆ.ಜಿ. ಭಾರ ಹೆಚ್ಚುತ್ತಿರುವಂತೆ ಭಾಸವಾಗುತ್ತಿದೆಯಾ? ತಿನ್ನುವುದನ್ನು ಕಡಿಮೆ ಮಾಡಲಾಗುತ್ತಿಲ್ಲವೇ? ವ್ಯಾಯಾಮ ಮಾಡಲು ಕೈಲಾಗುತ್ತಿಲ್ಲವಾ? ಈ ಸಲ ರೇಲ್ವೆ ಸ್ಟೇಷನ್ನಿಗಾಗಲೀ, ಎಕ್ಜಿಬಿಷನ್ಗಾಗಲೀ ಇಲ್ಲಾ ಮಾಕರ್ೆಟ್ಗಾಗಲೀ ಹೋದಾಗ, ನಿಮ್ಮ ಸುತ್ತಲೂ ಇರುವ ಜನರು ಬಹಳ ದಪ್ಪಗೆ ಇರುವವರನ್ನು, ಮೂವತ್ತು ವರ್ಷಗಳಿಗೇ ಎರಡರಷ್ಟು ಭಾರವನ್ನು ಹೊತ್ತುಕೊಂಡಿರುವ ಸ್ಥೂಲಕಾಯರನ್ನು ನೋಡಿರಿ. ಅವರನ್ನು ಗಮನಿಸುತ್ತಲೇ ಇರಿ. ಆಟೋ ಹತ್ತಲು, ಸಿಟಿಬಸ್ನಲ್ಲಿ ಪ್ರಯಾಣಿಸಲು ಅವರೆಷ್ಟು ಕಷ್ಟ ಪಡುತ್ತಾರೋ ಗಮನಿಸಿ. ಕೆಲವು ದಿನಗಳಿಗೆ ನಿಮ್ಮ ಪರಿಸ್ಥಿತಿ ಕೂಡಾ ಹಾಗೇ ಇರುವುದೆಂಬ ಸತ್ಯವನ್ನು ಊಹಿಸಿಕೊಳ್ಳಿ. ಹೆಜ್ಜೆ ಎತ್ತಿ ಮುಂದಕ್ಕಿಡಲು ಎಷ್ಟು ಕಷ್ಟಪಡುವಿರೋ ನೆನೆಯಿರಿ. ಹತ್ತುದಿನಗಳು ಹೀಗೆ ನಡೆಯುವ ವೇಳೆಗೆ ನಿಮ್ಮ ದೇಹವೆಂದರೆ ನಿಮಗೆ ಭಯ ಹುಟ್ಟುತ್ತದೆ. ಹೆಚ್ಚು ತಿನ್ನಬೇಕೆಂದರೆ ಅಸಹ್ಯವಾಗುತ್ತದೆ. ಎಕ್ಸರ್ಸೈಜ್ ಮಾಡದಿದ್ದರೆ ಗಿಲ್ಟೀ ಫೀಲಿಂಗ್ ಏರ್ಪಡುತ್ತದೆ. ನಿಮ್ಮಲ್ಲಿಯೇ ಕ್ರಮೇಣ ಒಂದು ಬದಲಾವಣೆ ಉಂಟಾಗುವುದನ್ನು ನೀವು ಗಮನಿಸುತ್ತೀರಿ.
ಅತಿವೃಷ್ಟಿ ಹಾಸಿಗೆ - ಅನಾವೃಷ್ಟಿ ನಿದ್ರೆ
ಬ್ರೌನ್ಬ್ಯಾಟ್ ಎನ್ನುವ ಬಾವಲಿ ದಿನಕ್ಕೆ 20 ಗಂಟೆಗಳ ಕಾಲ ನಿದ್ರೆ ಮಾಡುತ್ತದೆ. ಕೆಲವು ಹೆಬ್ಬಾವುಗಳು ದಿನದಲ್ಲಿ 18 ಗಂಟೆಗಳು ಮಲಗಿರುತ್ತವೆ. ನಮ್ಮಲ್ಲಿ ಕೂಡಾ ಕೆಲವರು ಸೋಮಾರಿತನವನ್ನು ಹೆಬ್ಬಾವಿನಂತೆ ಆಲಿಂಗಿಸಿಕೊಂಡು ನಿದ್ದೆ ಮಾಡುತ್ತಲೇ ಇರುತ್ತಾರೆ.
ಹಾಯಾಗಿದೆ, ನಿದ್ರೆ ಹೋಗು .. ಎನ್ನುವುದು ಕನಸಿನ ತೋಟ
ರಾತ್ರಿ ಕದಲಿದೆ, ನೀನು ಕದಲುವುದಿಲ್ಲವಾ... ಎನ್ನುತ್ತದೆ ಪ್ರಥಮ ಕಿರಣ
ಮಂಜಿನ ತೆರೆಯಲ್ಲಿ ಗುಲಾಬಿಯಂತೆ ಇದೆ ನನ್ನ ಹೃದಯ
ಎಂದು ನನ್ನ ಟೆಲಿ ಸೀರಿಯಲ್ಗೆ ಒಂದು ಹಾಡು ಬರೆದರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿ. ಇಷ್ಟು ಒಳ್ಳೆಯ ಹಾಡನ್ನು ಇಂತಹ ದರಿದ್ರವಾದ ಸಂದರ್ಭದಲ್ಲಿ ಬಳಸುತ್ತಿರುವುದಕ್ಕೆ ಕ್ಷಮಿಸಬೇಕು.
ಒಳ್ಳೆಯ ನಿದ್ರೆ ಒಳ್ಳೆಯ ಆರೋಗ್ಯಕ್ಕೆ ನಿದರ್ಶನ. ಒಳ್ಳೆಯ ನಿದ್ರೆ ಎಂದರೆ ಹೆಚ್ಚು ಹೊತ್ತು ನಿದ್ರಿಸುವುದಲ್ಲ. ಗಾಢವಾಗಿ ನಿದ್ರಿಸುವುದು. ಮಕ್ಕಳಿಗೆ ಎಂಟು, ದೊಡ್ಡವರಿಗೆ ಏಳು ಗಂಟೆಗಳ ಶಯನದ ಅವಶ್ಯಕತೆ ಇದೆ. ನಿಜಕ್ಕೂ ಮನುಷ್ಯನಿಗೆ ಐದು ಗಂಟೆಗಳ ನಿದ್ರೆ ಸಾಕು. ಉಳಿದಿದ್ದು ಒಂದಿಷ್ಟು ಆ ಕಡೆ ಈ ಕಡೆ ಆನಂದಿಸುವುದು. ಎರಡು ದಿನಗಳವರೆಗೆ ನಿದ್ದೆ ಇಲ್ಲದಿದ್ದರೂ ಕೆಲವು ಗಂಟೆಗಳ ಗಾಢನಿದ್ರೆಯಿಂದ ಅದನ್ನು ಬ್ಯಾಲೆನ್ಸ್ ಮಾಡಬಹುದು. ಆದರೆ ಈ ಸೂತ್ರ ಮಕ್ಕಳಿಗೆ ಅನ್ವಯಿಸುವುದಿಲ್ಲ.
ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳೆರಡು:
ಅತಿನಿದ್ರೆ (ಹೈಪರ್ಸೋಮ್ನಿಯಾ), ನಿದ್ರೆಯಿಲ್ಲದ್ದು (ಇನ್ಸೋಮ್ನಿಯಾ). ಮೊದಲನೆಯದು ಗೆಲುವಿಗೆ ಶತ್ರು. ಎರಡನೆಯದು ಸೋಮಾರಿತನಕ್ಕೆ ಮಿತ್ರ.
ಮಹಾಭಾರತದಲ್ಲಿ ವ್ಯಾಸಮಹಷರ್ಿ ಬಲವಾದ ಶತ್ರುಗಳಿರುವವರು, ಕೋರಿಕೆ ತೀರದವರು, ಶಾರೀರಿಕ ರುಗ್ಣತೆ, ಮಾನಸಿಕ ಕಷ್ಟಗಳಿರುವವರು ಕಳ್ಳರು ಎಂದು ನಾಲ್ಕು ರೀತಿಯ ವ್ಯಕ್ತಿಗಳು ನಿದ್ರೆಯಿಲ್ಲದೇ ಬಾಧೆ ಪಡುತ್ತಾ ಇರುತ್ತಾರೆಂದು ಬರೆದಿದ್ದಾರೆ. ಈ ಕಾವ್ಯವನ್ನು ಆತನೇನಾದರೂ ಮತ್ತೆ ಈಗ ಬರೆಯಬೇಕಾಗಿ ಬಂದರೆ, ವಿದ್ಯಾಥರ್ಿಗಳನ್ನೂ, ಉದ್ಯೋಗಿಗಳನ್ನೂ ಕೂಡಾ ಸೇರಿಸಿರುತ್ತಿದ್ದರು. ಇವರಿಬ್ಬರಿಗೆ ಕೂಡಾ ಪ್ರಸ್ತುತ ನಿದ್ದೆ ಇರುವುದಿಲ್ಲ.
ಈಗಿನ ವಿದ್ಯೆ ಹಿಂದಿನಷ್ಟು ಆಹ್ಲಾದಕರವಲ್ಲ. ಸ್ಕೂಲು/ಕಾಲೇಜು ಬಸ್ಸುಗಳಲ್ಲಿ ದೇಹವು ದಾರುಣ. ಓದಿನಲ್ಲಿ ಪೈಪೋಟಿ ಹೀನಾತಿಹೀನ. ಏನು ಓದುತ್ತಿರುವೆವೋ, ಏಕೆ ಓದುತ್ತಿರುವೆವೋ ತಿಳಿಯದ ಸ್ಥಿತಿ.
ಉದ್ಯೋಗಿಗಳ ಸಮಸ್ಯೆಗಳು ಬೇರೆ. ಎದೆಯ ಮೇಲಿನ ಕೆಂಡದ ಹಾಗೆ ನಿರುದ್ಯೋಗಿಗಳಾದ ಗಂಡು ಮಕ್ಕಳು, ಓದಿದ್ದು ಚ್ಯಾಟಿಂಗ್ಗೋಸ್ಕರವೇ ಎಂದು ನಂಬಿರುವ ಹೆಣ್ಣು ಮಕ್ಕಳು, ಇಂಗ್ಲೀಷ್ ಬರದೇ ಮೆಸೇಜ್ಗಳನ್ನು ಮಾತೃಭಾಷೆಯನ್ನು ಆಂಗ್ಲದಲ್ಲಿ ಟೈಪು ಮಾಡುವ ಪೋಸ್ಟ್ ಗ್ರಾಜ್ಯುಯೇಟ್ ಮಕ್ಕಳು, ಮೋಟರ್ಸೈಕಲ್ ಕೊಂಡು ಕೊಡದಿದ್ದರೆ ಊಟ ಮಾಡುವುದಿಲ್ಲವೆನ್ನುವ ಮೊಮ್ಮಕ್ಕಳು... ದಿನದಿನಕ್ಕೆ ಹೆಚ್ಚುತ್ತಿರುವ ಕರೆಂಟ್ ಖಚರ್ಿನಂತೆ ದಿನಕ್ಕೊಂದು ಸಮಸ್ಯೆ. ಪೆಟ್ರೋಲ್ ದರದಂತೆ ನಿಮಿಷಕ್ಕೊಂದು ಪ್ರಾಬ್ಲೆಮ್. ಇನ್ನು ನಿದ್ರೆ ಎಲ್ಲಿ?
ಇನ್ಸೋಮ್ನಿಯಾ ಮೂರು ರೀತಿಯಲ್ಲಿ ಇರುತ್ತದೆ..
= ಹಾಸಿಗೆಯ ತಲಪಿದೊಡನೆ ನಿದ್ರೆ ಬರದೇ, ಇದರ ಪರಿಣಾಮವಾಗಿ ಬೆಳಿಗ್ಗೆ ತಡವಾಗಿ ಏಳುವುದು
= ಅರ್ಧರಾತ್ರಿಯವರೆಗೂ ನಿದ್ರೆ ಹತ್ತದೇ, ಒಂದು ಗಂಟೆಯೊಳಗೆ ಎಚ್ಚರವಾಗಿದ್ದು, ಇದರ ಫಲಿತಾಂಶವೇನೆಂದರೆ ಆ ದಿನವೆಲ್ಲಾ ಸುಸ್ತಾಗಿರುವುದು
= ರಾತ್ರಿ ಪೂತರ್ಿ ಯಾವ ಸಮಯದಲ್ಲಿಯೂ ಗಾಢನಿದ್ರೆಗ ಜಾರಲಾಗದೇ, ಹಗಲೆಲ್ಲಾ ಆಕಳಿಸುತ್ತಾ ಇರುವುದು
ನಿದ್ರೆ ಇಲ್ಲದೇ ಮೂಡ್ ಸರಿಯಾಗಿಲ್ಲದಿರುವುದು, ಬಲಹೀನವಾದ ಪ್ರತಿಸ್ಪಂದನಗಳು, ಕಿರಿಕಿರಿ ಮುಂದಾದ ರೋಗಗಳು ಏರ್ಪಡುತ್ತವೆ. ಮದ್ಯ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆಂದು ಕೆಲವು ಮದ್ಯಪಾನ ಪ್ರಿಯರು ಅಂದುಕೊಳ್ಳುತ್ತಾರೆ. ಅದು ನಿದ್ರೆಯಲ್ಲ, ಡಿಲೀರಿಯಮ್.
ನಿದ್ರೆ ಆರು ಸ್ತರದಲ್ಲಿ ಸಾಗುತ್ತದೆ
= ಆರೋಗ್ಯಕರವಾದ ಆಲೋಚನೆಗಳೊಂದಿಗೆ (ಇಲ್ಲವೇ ಐಟಂ ಸಾಂಗ್ ರೀತಿಯ ಯೋಚನೆಗಳೊಂದಿಗೆ) ಹೊರಳಾಡುವುದು
= ಕಣ್ಣು ಪಾಪೆಯ ಅಲುಗಾಟ ನಿಲ್ಲುವ ಘಟ್ಟ
= ಸಾಧಾರಣ ನಿದ್ರೆ
= ಗಾಢ ನಿದ್ರೆ
= ಪೂತರ್ಿ ಎಚ್ಚರಕ್ಕೆ ಬರಲು ಮಾಡುವ ಸೋಮಾರಿತನದ ಯತ್ನ
= ಪೂರ್ಣ ಎಚ್ಚರ. ಗಾಢನಿದ್ರೆ ಅರ್ಧರಾತ್ರಿಯಿಂದ ಬೆಳಗಿನ ಝಾವ ದವರೆಗೆ ನಾಲ್ಕುಗಂಟೆಗಳ ಕಾಲ ಇರುತ್ತದೆ. ಆಕ್ಸಿಡೆಂಟು ಆಗುವುದು ಆ ಸಮಯದಲ್ಲಿಯೇ.
ಒಂದೇ ಸಮಯಕ್ಕೆ ಮಲಗುವುದು, ಏಳುವುದು ಕ್ರಮಶಿಕ್ಷಣದ ಮೊದಲ ಮೆಟ್ಟಿಲು. ಮೂರನೆಯ ವಯಸ್ಸಿನಲ್ಲಿಯೇ ಕ್ರಮಶಿಕ್ಷಣ ಕಲಿಸದಿದ್ದರೆ ಆ ನಂತರ ಬಹಳ ಕಷ್ಟ. ಪ್ರೇಮಕ್ಕೆ, ಮುದ್ದಿಗೆ ವ್ಯತ್ಯಾಸ ತಿಳಿಯದ ತಾಯ್ತಂದೆಯರು ತಮ್ಮ ಮಕ್ಕಳಿಗೆ ಮಾಡುವ ಮಹಾ ದ್ರೋಹವೇನೆಂದರೆ, ರಜೆ ತಾನೇ ಎಂದು ಮರುದಿನ ಬೆಳಿಗ್ಗೆ ನಿಧಾನವಾಗಿ ಎದ್ದರೂ ಪರವಾಗಿಲ್ಲವೆಂದುಕೊಂಡು ಶನಿವಾರ ಅರ್ಧರಾತ್ರಿಯವರೆಗೂ ಟಿವಿ ನೋಡಲು ಬಿಡುವುದು...! ಸೋಮವಾರ ಶಾಲೆಗೆ ಹೋಗಬೇಕಾಗಿರುವುದರಿಂದ ಭಾನುವಾರ ಬೇಗನೆ ಮಲಗಲು ಬಿಟ್ಟರೂ... ಮಲಗುವುದು ಬೇರೆ, ನಿದ್ರೆ ಮಾಡುವುದು ಬೇರೆ. ಗಾಢನಿದ್ರೆಗೆ ಹೋಗಲಾಗದ ಮಕ್ಕಳು ಮುಂದಿನ ಮೂರು ದಿನಗಳ ಕಾಲ ಮಧ್ಯಾಹ್ನ ಆಕಳಿಸುತ್ತಾ ಕಳೆಯುತ್ತಾರೆ. ಓದು ತಲೆಗೆ ಹತ್ತುವುದಿಲ್ಲ.
ಥಾಮಸ್ ಆಲ್ವಾ ಎಡಿಸನ್, ಮಹಾತ್ಮಾಗಾಂಧಿ, ಸುಭಾಷ್ಚಂದ್ರ ಬೋಸ್ರು ಬಹಳ ದಿನಗಳ ಕಾಲ ನಿದ್ರೆಯಿಲ್ಲದೇ ಇರುತ್ತಿದ್ದರೆಂದೂ, ಆದರೂ ಫ್ರೆಷ್ ಆಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರೆಂದೂ ಇತಿಹಾಸಕಾರರು ಹೇಳುತ್ತಾರೆ. ಆದರೆ ಅವರು ಹೇಳದ ಸಂಗತಿ ಏನೆಂದರೆ... ಕೆಲಸಗಳ ನಡುವೆ ಯಾವಾಗ ಸ್ವಲ್ಪ ಸಮಯ ಸಿಕ್ಕಿದರೂ ಅವರು ಚಿಕ್ಕನಿದ್ರೆ ತೆಗೆಯುತ್ತಿದ್ದರೆಂಬುದು...!
(ಮುಂದುವರಿಯುವುದು)
-ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ ಯತಿರಾಜ್ ವೀರಾಂಬುಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


