ದೊಡ್ಡ ಕ್ರಾಂತಿ ಮಾಡುವುದೇ ಸಣ್ಣ ಚಿಪ್?
ಅಮೈನೊ ಆಮ್ಲಗಳು ಹೇಗೆ ತಲೆನೋವು ತರುತ್ತವೆ ಎಂಬುದನ್ನು ತಿಳಿದೆವು. ಅತ್ಯಂತ ಸೂಕ್ಷ್ಮ ವಿಚಾರಗಳ ಕುರಿತಾಗಿಯೂ ಪಾಶ್ಚಾತ್ಯರು ಎಷ್ಟು ಗಂಭೀರವಾಗಿ ಯೋಚಿಸುತ್ತಾರೆ ಎನ್ನುವುದನ್ನು ನಿಮಗಿಲ್ಲಿ ಹೇಳಬೇಕು. ಆಹಾರ ಅಲರ್ಜಿ ಕುರಿತು ತಿಳಿಯಲು ನಮಗಿರುವ ಏಕೈಕ ಮಾರ್ಗ ಎಂದರೆ ಆಹಾರ ಸೇವಿಸಿಯೇ ಪರೀಕ್ಷಿಸುವುದು. ಒಂದರ್ಥದಲ್ಲಿ ಬಹು ಸಾಂಪ್ರದಾಯಿಕವೂ ಆಗಿರುವ ಟ್ರಯಲ್ ಅಂಡ್ ಎರರ್ ವಿಧಾನ. ಆದರೆ ಆಹಾರದಲ್ಲಿನ ಅಮೈನೊ ಆಮ್ಲಗಳೆಂಬ ವಿಷಕಾರಿ ರಾಸಾಯನಿಕಗಳನ್ನು ಪತ್ತೆ ಮಾಡುವುದು ಹೇಗೆ? ಎಲ್ಲ ಆಹಾರಗಳ ಇನ್ಗ್ರೇಡಿಯಂಟ್ಸ್ ಪಟ್ಟಿಯಲ್ಲಿ ಇವುಗಳ ವಿವರ ಇದ್ದೇಬಿಡುತ್ತದೆಂಬ ಖಾತ್ರಿ ಇಲ್ಲ. ಅದು ಸಿದ್ಧ ಆಹಾರದ ಮಾತಾಯಿತು. ಹೋಟೆಲ್, ರೆಸ್ಟೊರೆಂಟ್ಗಳಲ್ಲಿ ಸೇವಿಸುವ ಆಹಾರದ ಕಥೆ? ಅದಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಉಪಕರಣವೊಂದನ್ನು ಸಿದ್ಧಪಡಿಸಿದ್ದಾರೆ. ಅದು ಒಯ್ಯಲೂ ಸುಲಭವಂತೆ. ಮನೆ, ರೆಸ್ಟೊರೆಂಟ್ ಎಲ್ಲಿ ಬೇಕಾದರೂ ಒಯ್ಯಬಹುದು.
'ಪೋರ್ಟೆಬಲ್ ಮೈಕ್ರೊವೇವ್ ಕ್ಯಾಪಿಲರಿ ಎಲೆಕ್ಟ್ರೋಪೊರೆಸಿಸ್' ಎನ್ನುವುದು ಸದ್ಯಕ್ಕೆ ಅಮೈನೊ ಆಮ್ಲಗಳ ಪತ್ತೆ ವಿಧಾನಕ್ಕೆ ನೀಡಿರುವ ಹೆಸರು. ಇದೊಂದು ಪುಟ್ಟ ಚಿಪ್. ಅದನ್ನು ಆಹಾರದ ಮೇಲಿಟ್ಟಾಗ ವಿದ್ಯುತ್ ತರಂಗಗಳ ಮೂಲಕ ವಿಶೇಷ ಕ್ರಿಯೆ ನಡೆದು ಆಹಾರದಲ್ಲಿನ ಅಮೈನೊ ಆಮ್ಲಗಳ ಮಟ್ಟವನ್ನು ಪತ್ತೆ ಮಾಡುತ್ತದೆ. ಕೇವಲ ಐದು ನಿಮಿಷದಲ್ಲಿ ಯಾವ್ಯಾವ ಅಮೈನೊ ಆಮ್ಲಗಳು ಎಷ್ಟು ಪ್ರಮಾಣದಲ್ಲಿವೆ ಎನ್ನುವ ವಿವರ ನಿಮಗೆ ಲಭಿಸಿಬಿಡುತ್ತದೆ. ಆಗ ನೀವು ಅವುಗಳನ್ನು ಸೇವಿಸುವ ಪ್ರಶ್ನೆಯೇ ಇಲ್ಲ (ಅಲರ್ಜಿ ಇದ್ದಲ್ಲಿ! ಇಂತಹ ಪ್ರಯೋಗಕ್ಕೆ ನ್ಯಾಶನಲ್ ಏರೊನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ನಂತಹ ಸಂಸ್ಥೆಗಳು ಆರ್ಥಿಕ ನೆರವು ಕಲ್ಪಿಸಿವೆ. ವಿಜ್ಞಾನ ನಿಯತಕಾಲಿಕಗಳಲ್ಲಿಯೂ ಈ ಕುರಿತು ಬಹಳಷ್ಟು ವರದಿಗಳು ಪ್ರಕಟವಾಗಿವೆ. ನಾವೇಕೆ ಆಹಾರಕ್ಕೆ ಸಂಬಂಧಿಸಿದ ಪ್ರಯೋಗಗಳಲ್ಲಿ ತೀವ್ರ ನಿರಾಸಕ್ತಿ ಹೊಂದಿದ್ದೇವೆ ಎನ್ನುವ ಪ್ರಶ್ನೆ ಆಗಾಗ ನನ್ನನ್ನು ಕಾಡುವುದುಂಟು.
'ಈ ಉಪಕರಣವನ್ನು ತಕ್ಷಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಕಷ್ಟ. ಏಕೆಂದರೆ ಇನ್ನಷ್ಟು ಸಂಶೋಧನೆಗಳನ್ನು ನಡೆಸುವ, ಬಳಕೆಗೆ ಇನ್ನೂ ಸುಲಭವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವ ಅಗತ್ಯವಿದೆ' ಎಂದು ಅಭಿಪ್ರಾಯಪಡುತ್ತಾರೆ ಸಂಶೋಧನಾ ತಂಡದ ಮುಖ್ಯಸ್ಥ ರಿಚರ್ಡ್ ಎ. ಮ್ಯಾಥಿಸ್. ಮಾರುಕಟ್ಟೆಗೆ ಈ ಸಾಧನ ಬಂದರೆ ಬಹುದೊಡ್ಡ ಕ್ರಾಂತಿ ಆಗಲಿದೆ ಎಂಬ ಬಗ್ಗೆ ಅನುಮಾನಗಳೇ ಬೇಡ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

