ಪೆನ್ಪಾಯಿಂಟ್
ಮೊಬೈಲ್ ಬದುಕಲ್ಲ
ಗಜಗಾತ್ರದ ಮೊಬೈಲೊಂದು ಕೈಲಿದ್ದರೆ ಭೂಮಿ ನಡುಗಿದರೂ ಫೋನ್ ವೈಬ್ರೇಟ್ ಆಯಿತೇನೋ ಎಂದು ನೋಡಿಕೊಳ್ಳುವ ಮಹಾನುಭಾವರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಫೋನ್ನ ಹೊರಗೊಂದು ಜಗತ್ತಿದೆ ಸ್ವಾಮಿ... ಅಲ್ಲಿಯೂ ಬದುಕಿ ನೋಡಿ.
ಮೊಬೈಲ್ ಫೋನ್ ಹಿಡಿದು ಹುಡುಗಿ ಎದುರು ಶೋ ಆಫ್ ಮಾಡುವ ಬದಲು ಅವಳು ಇಂಪ್ರೆಸ್ ಆಗುವಂತಾ ವ್ಯಕ್ತಿತ್ವ ಬೆಳೆಸಿಕೊಳ್ಳಿ.
ಹೆಚ್ಚು ಬೆಲೆಯ ಮೊಬೈಲ್ ಫೋನ್ಗಾಗಿ ಬಾಯಿ ಬಾಯಿ ಬಿಡಬೇಡಿ. ನೀವು ಬಳಸುವ ಫೋನ್ನಲ್ಲಿ ಏನೇ ಫೀಚರ್ಸ್ ಇದ್ದರೂ ಬಳಸುವುದು 3-4 ಅಪ್ಲಿಕೇಶನ್ನನ್ನು ಮಾತ್ರ ಎಂಬುದು ನಿಮಗೂ ಗೊತ್ತು. ಕಡಿಮೆ ಬೆಲೆಯಲ್ಲಿ ಉತ್ತಮವಾದುದನ್ನು ಕೊಂಡುಕೊಂಡು ಉಳಿದ ಹಣ ಸದುಪಯೋಗ ಮಾಡಿಕೊಳ್ಳಿ.
ಫೋನ್ನಲ್ಲಿ ಗೇಮ್ ಆಡುತ್ತಾ, ಅನವಶ್ಯಕವಾಗಿ ಇನ್ನೊಬ್ಬರಿಗೆ ಕೊರೆಯುತ್ತಾ ಇಬ್ಬರ ಸಮಯವನ್ನೂ ವ್ಯರ್ಥ ಮಾಡುತ್ತಾ, ಫೇಸ್ಬುಕ್, ವಾಟ್ಸಾಪ್ಗಳಲ್ಲಿ ದಿನದ ಅರ್ಧ ಭಾಗವನ್ನು ಕಳೆದರೆ ಇರುವುದೊಂದೇ ಜೀವನವನ್ನು ನೋಡುವುದು ಯಾವಾಗ?
ಫೋನ್ನಲ್ಲಿ ಕಾಣದವರಿಗೆ ಹೇಳುವಷ್ಟು ಹಾಯ್ ಹೆಲೋ, ಸ್ಮೈಲಿಗಳನ್ನು ಮನೆಯವರೊಂದಿಗೆ, ಎದುರಿರುವವರೊಂದಿಗೆ ಹಂಚಿಕೊಂಡರೆ ಬದುಕು ಬಂಗಾರವಾಗುವುದು. ಮಕ್ಕಳ ಆಟಪಾಠ, ಸಂಗಾತಿಯ ನಗು, ಹೆತ್ತವರೊಡನೆಯ ಒಡನಾಟವನ್ನು ಮಿಸ್ ಮಾಡಿಕೊಳ್ಳಬೇಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

