ಸಖಿಯ ರೂಪದಲ್ಲಿ

ಪ್ರೇಯಸಿ- ಪ್ರಿಯಕರರ ನಡುವೆ ತಲೆದೋರುವ ಕೋಪ ತಾತ್ಕಾಲಿಕವಾದದ್ದು. ಅದು ಯಾವತ್ತೂ ಒಂದು ರಾತ್ರಿಯಿಂದಾಚೆಗೆ ವಿಸ್ತರಿಸುವುದಿಲ್ಲ. ಬೆಳಗ್ಗೆ ಕೋಪ ಮಾಡಿಕೊಂಡರೆ ಅದು ರಾತ್ರಿಯ ಹೊತ್ತಿಗೆ ಸರಿಯಾಗಲೇಬೇಕು! ಇದು ನಲ್ಲ- ನಲ್ಲೆಯರ ಕೋಪಪ್ರಕರಣ.
ಕೇಲೀಮಂದಿರಮಾಗತಸ್ಯ ಶನಕೈರಾಲೀರಪಾಸ್ಯೇಂಗಿತೈಃ
ಸುಪ್ತಾಯಾಃ ಸುರಷಃ ಸುರೋರುಹದೃಶಃ ಸಂವೀಜನಂ ಕುರ್ವತಃ
ಜಾನಂತ್ಯಾಪ್ಯನಭಿಜ್ಞಯೇವ ಕಪಟವ್ಯಾಮೀಲಿತಾಕ್ಷ್ಯಾ ಸಖಿ
ಶ್ರಾಂತಾಸೀತ್ಯಭಿಧಾಯ ವಕ್ಷಸಿ ತಯಾ ಪಾಣಿರ್ಮಮಾಸಂಜಿತಃ
ಒಬ್ಬ ನಲ್ಲ ತನ್ನ ಅನುಭವವನ್ನು ಹೇಳುತ್ತಾನೆ: ನನ್ನ ನಲ್ಲೆ ಕೋಪಿಸಿಕೊಂಡಿದ್ದಳು. ಅವಳು ಸುರತಕ್ರೀಡಾ ಮಂದಿರದಲ್ಲಿದ್ದಾಳೆಂದು ಗೊತ್ತಾಯಿತು. ನಾನು ನಿಶ್ಶಬ್ಧವಾಗಿ ಅಲ್ಲಿಗೆ ಹೋಗಿ, ಅಲ್ಲಿದ್ದ ಸಖಿಯರನ್ನೆಲ್ಲಾ ಸದ್ದಿಲ್ಲದೆ ಆಚೆ ಕಳಿಸಿದೆ. ಆಕೆ ಹುಸಿನಿದ್ರೆಯನ್ನು ನಟಿಸುತ್ತಿದ್ದಳು. ನಾನು ಬೀಸಣಿಗೆಯಿಂದ ಆಕೆಗೆ ಗಾಳಿ ಬೀಸತೊಡಗಿದೆ. ಇದು ಸಖಿಯಲ್ಲ, ತನ್ನ ನಲ್ಲನೇ ಎಂದು ಗೊತ್ತಿದ್ದರೂ ಆಕೆ, 'ಸಖೀ, ನೀನು ಗಾಳಿ ಬೀಸಿ ತುಂಬಾ ಬಳಲಿದ್ದೀಯೆ, ತುಸು ವಿರಮಿಸು' ಎಂದು ನನ್ನ ಕೈಯನ್ನು ತೆಗೆದು ತನ್ನ ಎದೆಯ ಮೇಲಿಟ್ಟುಕೊಂಡಳು! ಆಮೇಲೆ ನಮ್ಮ ಪ್ರಣಯವು ಯಾವ ವಿಘ್ನಗಳೂ ಇಲ್ಲದಂತೆ ಪೂರೈಸಿತು.
ಇಲ್ಲಿ ಬರುವ ಕೋಪವೂ ಹುಸಿ, ಸೇವೆಯೂ ಹುಸಿ, ಸಖೀಭ್ರಾಂತಿಯೂ ಹುಸಿ, ಮುಗ್ಥತೆಯೂ ಹುಸಿ. ಅದರಿಂದೊದಗಿದ ಪ್ರಣಯ ಮಾತ್ರವೇ ನಿಜ.
-ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


