ಬೈಟುಕಾಫಿ

ಸೈಬರ್ ಕ್ರೈಂ

Published On :

ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಒಂದಾದ ಕಂಪ್ಯೂಟರನ್ನು ಬಳಸಿ, ಅದರ ಮೂಲಕ ಅಪರಾಧಗಳನ್ನು ಎಸಗುವುದಕ್ಕೆ ಸೈಬರ್ ಕ್ರೈಂ ಎಂದು ಕರೆಯಬಹುದು. ಇತ್ತೀಚಿನ ದಿನಗಳಲ್ಲಿ ಇಂತಹ ಅಪರಾಧಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು 2000ನೇ ಸಾಲಿನಲ್ಲಿ ಜಾರಿಗೊಳಿಸಿದೆ.
ಸೈಬರ್ ಕ್ರೈಂನ ವಿಧಗಳು:
1.ಹ್ಯಾಕಿಂಗ್ 2.ಸ್ಪೂಫಿಂಗ್ 3.ಫಿಶ್ಶಿಂಗ್ 4.ವೈರಸ್ ಡಿಸಿಮಿನೇಶನ್ 5.ಫೋರ್ನೋಗ್ರಾಫಿ 6.ಸಲಾಮಿ ಎಟಾಕ್ 7.ಸೈಬರ್ ಥ್ರೆಟ್ನಿಂಗ್ 8.ಸೈಬರ್ ಡೆಫಮೇಶನ್ 9.ಕ್ರೆಡಿಟ್/ಡೆಬಿಟ್ ಕಾರ್ಡ್ ಫ್ರಾಡ್.
ಸೈಬರ್ ಕ್ರೈಂ ಆಗುವ ಅಪರಾಧಗಳು:
ಇತ್ತೀಚಿನ ದಿನಗಳಲ್ಲಿ ಹಣದ ಎಲ್ಲಾ ವಹಿವಾಟುಗಳು ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ.
ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಒದಗಿಸುವುದರಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ.
ಹಲವಾರು ಬಾರಿ ತುಂಬಾ ಹತ್ತಿರದವರು ತಮ್ಮ ಬ್ಯಾಂಕ್, ಕಂಪ್ಯೂಟರ್‌ಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಸ್ವಹಿತಾಸಕ್ತಿ ಸಾಧನೆಗೆ ಸೈಬರ್ ಅಪರಾಧಗಳನ್ನು ಮಾಡುತ್ತಾರೆ.
ಮೊಬೈಲ್‌ಗಳಿಗೆ ಮತ್ತು ಕಂಪ್ಯೂಟರ್‌ಗಳಿಗೆ ಬರುವ ನಕಲಿ ಎಸ್‌ಎಂಎಸ್/ಇ-ಮೇಲ್‌ಗಳನ್ನು ನಂಬಿ ಸಾರ್ವಜನಿಕರು ವೈಯಕ್ತಿಕ ಮಾಹಿತಿಗಳನ್ನು ನೀಡುವುದರಿಂದ ಸೈಬರ್ ಅಪರಾಧಗಳು ಹೆಚ್ಚೆಚ್ಚು ನಡೆಯುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.