ಬೈಟುಕಾಫಿ

ಅವರು ಶಕ್ತಿಯಾಗಿ ನಮ್ಮೊಂದಿಗೇ ಇದ್ದಾರೆ!

Published On :

'ಮಹಿಮಾವಂತ ವ್ಯಕ್ತಿಗಳು ಜನರ ಕಣ್ಣುಗಳಿಂದ ಮರೆಯಾದ ಮೇಲೆ ಅವರನ್ನು ಗ್ರಹಿಸುವ ಮಾಧ್ಯಮಗಳು ಬದಲಾಗುತ್ತವೆ. ಮಹಾವ್ಯಕ್ತಿಗಳು ಶಕ್ತಿವಂತರಾಗಿ ಬದುಕಿ ಲೌಕಿಕ ಜೀವನದಿಂದ ಕಳೆದುಹೋದ ಮೇಲೆ  ಅವರು ಬಳಸುತ್ತಿದ್ದ ವಸ್ತುಗಳು, ನೆಲೆಸಿದ ಸ್ಥಳಗಳು, ಅವರು ದರ್ಶಿಸಿದ ತಾಣಗಳು, ಓಡಾಡಿದ ಪ್ರದೇಶಗಳು ಪರಮಪವಿತ್ರ ಎನಿಸುತ್ತವೆ. ಅಂತಹ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ ಜನ ಅವರ ಶಕ್ತಿಯನ್ನು ಅರಿಯುತ್ತಾರೆ.
ಹಿಂದೊಮ್ಮೆ ಸ್ವಾಮೀಜಿ ಅಮೆರಿಕದ ಮೀಡ್ ಕುಟುಂಬದವರ ಮನೆಯಲ್ಲಿ ಅತಿಥಿಯಾಗಿ ಉಳಿದಿದ್ದರು. ಅಲ್ಲಿಂದ ಹೊರಡುವಾಗ ಸ್ವಾಮೀಜಿ, 'ಯಾವಾಗಲೂ ಹೋಗುವಾಗ ನನ್ನ ನೆನಪಿಗಾಗಿ ಒಂದು ವಸ್ತುವನ್ನು ಬಿಟ್ಟು ಹೋಗುವುದು ನನ್ನ ಕ್ರಮ. ಈ ನನ್ನ ಚುಟ್ಟಾ ಕೊಳವೆಯನ್ನು ಇಲ್ಲಿಯೇ ಬಿಟ್ಟು ಹೋಗುತ್ತೇನೆ' ಎಂದು ಅದನ್ನು ಅಲ್ಲಿಯೇ ಬಿಟ್ಟು ಹೊರಟರು. ಆ ಮನೆಯವರು ಅದನ್ನು ವಿಶೇಷ ಪ್ರೀತಿಯಿಂದ ಜೋಪಾನವಾಗಿಟ್ಟರು. ಅನೇಕ ವರ್ಷಗಳ ನಂತರ ಆ ಮನೆಯೊಡತಿಗೆ ಅನಾರೋಗ್ಯವಾಗಿ ನೆಮ್ಮದಿ, ಸಂತೋಷವಿಲ್ಲದೆ ಮಾನಸಿಕವಾಗಿ ನೊಂದು ಹೋದಳು. ಹೀಗಿರುವಾಗ ಒಂದು ದಿನ ಆಕೆ ಅಕಾರಣವಾಗಿ ಸ್ವಾಮೀಜಿ ಬಿಟ್ಟುಹೋಗಿದ್ದ ಆ ಕೊಳವೆಯನ್ನು ಕೈಗೆತ್ತಿಕೊಂಡಳು. ಏನಾಶ್ಚರ್ಯ! ತಕ್ಷಣ ಅವಳಿಗೆ ಸ್ವಾಮೀಜಿಯ ಧ್ವನಿ ಕೇಳಿಸಿದಂತಾಯಿತು, 'ಮೇಡಂ, ಈಸ್ ಇಟ್ ಸೋ ಹಾರ್ಡ್!' ಚಕಿತಳಾದ ಆಕೆ ಆ ಕೊಳವೆಯನ್ನು ಹಣೆಗೊತ್ತಿಕೊಂಡಳು. ಆಶ್ಚರ್ಯವೆಂಬಂತೆ ಆಕೆಯ ಶರೀರ ಹಾಗೂ ಮನಸ್ಸಿನಲ್ಲಿ ಅಪೂರ್ವ ಬದಲಾವಣೆಗಳಾದವು! ಆಕೆಯ ತೊಂದರೆಗಳೆಲ್ಲ ಮಾಯವಾದವು. ಇದಕ್ಕೆಲ್ಲ ಸ್ವಾಮೀಜಿಯ ಶಕ್ತಿಯೇ ಕಾರಣವೆಂದು ತಿಳಿದ ಆಕೆ 'ಸ್ವಾಮೀಜಿ ಶಕ್ತಿಯಾಗಿ ನಮ್ಮೊಂದಿಗೇ ಇದ್ದಾರೆ!' ಎಂದು ಉದ್ಗರಿಸಿದಳು.
-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.