ಸಮಯ ಪ್ರಜ್ಞೆ
ಯಾವುದೇ ದೇಶದಲ್ಲಾಗಲಿ ಶಿಕ್ಷಕರಿಗೆ ಹೆಚ್ಚು ಸಂಬಳ ಸಿಗುವುದಿಲ್ಲ. ಬೇರೆಯವರಿಗೆ ಸಲಹೆ ನೀಡುವ ಶಿಕ್ಷಕರು ಅಪರೂಪಕ್ಕೊಮ್ಮೆ ತಮ್ಮ ಬದುಕಿನಲ್ಲೇ ಸಮಯಪ್ರಜ್ಞೆ ಮೆರೆಯುತ್ತಾರೆ.
ಎಫ್.ಎಲ್. ಥಾಂಸನ್, ಸ್ಯಾನ್ಫ್ರಾನ್ಸಿಸ್ಕೊದ ಮನೋವಿಜ್ಞಾನಿ ಶಿಕ್ಷಕರು. ಒಮ್ಮೆ ತಡವಾಗಿ ಕತ್ತಲಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಇವರನ್ನು ಒಬ್ಬ ಕಳ್ಳ ಅಡ್ಡಗಟ್ಟಿ, 'ಇರುವುದನ್ನೆಲ್ಲಾ ಕಿತ್ತು ಕೊಳ್ತೀನಿ', ಅಂತ ಬೆದರಿಸಿದ.
'ಅಯ್ಯಾ ನಾನು ತೀರಾ ಬಡವ. ಟೀ ಕುಡಿಯಲು ನೀನೇ ನನಗೊಂದು ನಾಣ್ಯ ಕೊಡು' ಅಂತ ತಮ್ಮ ತಾಪತ್ರಯಗಳನ್ನೆಲ್ಲ ಮನಮುಟ್ಟುವಂತೆ ವರ್ಣಿಸಿದರು. ಥಾಂಸನ್ನ 'ಕಥೆಗೆ' ಕರಗಿ, ಅಡ್ಡಗಟ್ಟಿದ್ದವನಿಗೇ ಬೇಜಾರಾಗಿ ಒಂದು ನಾಣ್ಯವನ್ನೂ ಕೊಟ್ಟು ಹೊರಟುಹೋದ.
ಥಾಂಸನ್ ಮನೆಗೆ ಹೋದಾಗ ಅವರ ಜೇಬಿನಲ್ಲಿ ತಮ್ಮದೇ ಆದ 200 ಡಾಲರ್ ಮತ್ತು ಕಳ್ಳನಿಗೆ ಕಥೆ ಹೇಳಿ ಸಂಪಾದಿಸಿದ ಒಂದು ನಾಣ್ಯ ಇದ್ದವು.
ಈ ಘಟನೆಯಿಂದ ನಾವು ತಿಳಿದುಕೊಳ್ಳಬೇಕಾದ್ದು ಇಷ್ಟೇ ಸಮಯ ಪ್ರಜ್ಞೆ ಅಥವಾ 'ಸಮಯಕ್ಕೊಂದು ಸುಳ್ಳು' ಹಲವು ಬಾರಿ ನಮ್ಮನ್ನು ಅಪಾಯ ದಿಂದ ಪಾರು ಮಾಡುತ್ತದೆ. ಟಿ
-ಸಂಪಟೂರು ವಿಶ್ವನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

