ಬಳಸಿದ ಅಂಗ
ಬಳಸದೆ ಬಿಟ್ಟ ಅಂಗ ಕ್ಷೀಣವಾಗುತ್ತಾ ಬಂದು ಕೊನೆಗೊಂದು ತಲೆಮಾರಿನಲ್ಲಿ ಇಲ್ಲವಾಗುತ್ತದೆ ಎಂಬುದು ಡಾರ್ವಿನ್ನ ...

Published On :
ಬಳಸದೆ ಬಿಟ್ಟ ಅಂಗ ಕ್ಷೀಣವಾಗುತ್ತಾ ಬಂದು ಕೊನೆಗೊಂದು ತಲೆಮಾರಿನಲ್ಲಿ ಇಲ್ಲವಾಗುತ್ತದೆ ಎಂಬುದು ಡಾರ್ವಿನ್ನ ವಿಕಾಸವಾದದಲ್ಲಿ ಪ್ರತಿಪಾದಿಸಲಾದ ಒಂದು ಅಂಶ. ಇದಕ್ಕೆ ಉದಾಹರಣೆ ಚಿಂಪಾಂಜಿಗಳ ಬಾಲವಂತೆ. ಆಧುನಿಕತೆಯ ಆಡಂಬರದಲ್ಲಿರುವ ಮನುಷ್ಯ ತನ್ನ ಹಲವಾರು ಅಂಗಗಳನ್ನು ಹೀಗೆ ಬಳಸದೆ ಬಿಟ್ಟುಬಿಟ್ಟಿರುವುದನ್ನು ಕಾಣುತ್ತೇವೆ. ಆತನ ನೆನಪಿನ ಶಕ್ತಿ ಇದರಲ್ಲಿ ಮುಖ್ಯವಾದುದು. ಉದಾಹರಣೆಗೆ ನಾವೇ ನೋಡಿ, ಮೊದಲೆಲ್ಲ ನಮಗೆ ಎಷ್ಟೊಂದು ಫೋನ್ ನಂಬರ್ಗಳು ನೆನಪಿನಲ್ಲಿರುತ್ತಿದ್ದವು. ಇಂದು ಮೊಬೈಲ್ಗಳು ಬಂದ ಮೇಲೆ ಅವೆಲ್ಲ ಫೋನ್ ಮೆಮೊರಿಯಲ್ಲಿವೆಯೇ ಹೊರತು ನಮ್ಮಲ್ಲಿಲ್ಲ. ಇದು ಬರಿಯ ಅಂಗಾಂಗಗಳ ಮಾತಲ್ಲ. ಸಂಬಂಧಗಳಿಗೆ ಸಂಬಂಧಿಸಿದ ಮಾತು ಕೂಡ. ನಮ್ಮ ಹಿರಿಯರು ತಮ್ಮ ಬಳಗದ ಎಷ್ಟೊಂದು ಮನೆಗಳನ್ನು, ಸಂಬಂಧಗಳನ್ನು ನೆನಪಿಟ್ಟುಕೊಂಡು ಆಗಾಗ ಹೋಗಿ ಬರುತ್ತಾ ಇದ್ದರೆಂದು ನೆನಪು ಮಾಡಿಕೊಳ್ಳಿ. ನಮ್ಮ ಈಗಿನ ಸಂಬಂಧಗಳು ನಮ್ಮ ಚಿಕ್ಕಪ್ಪ ದೊಡ್ಡಪ್ಪ ಮಾವ ಭಾವರಿಂದಾಚೆಗೆ ಹೋಗುವುದಿಲ್ಲ. ಅದರಿಂದಾಚೆಗೆ ಗಾಢ ನಂಟು ಬೆಸೆಯದಂಥ ಸ್ಥಿತಿಯಿದೆ. ಇವುಗಳನ್ನು ನವೀಕರಿಸಿಕೊಳ್ಳುವುದು, ಆಗಾಗ ತಾಜಾ ಗಾಳಿ ಹರಿದಾಡುವಂತೆ ಮಾಡುವುದು ನಮ್ಮ ಕೈಯಲ್ಲೇಇದೆ. ಆಗ ನಮ್ಮ ಸಂಬಂಧಗಳೂ ಅಳಿದು ಹೋಗದ ಭದ್ರ ನಂಟು ಬೆಸೆಯುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


