ಬೈಟುಕಾಫಿ

ಭಾರತ ಪುತ್ರನ ಮುಕ್ತಾತ್ಮ ದರ್ಶನ

Published On :

'ಹೋಗು ಜಗತ್ತಿನಲ್ಲಿ ಧುಮುಕು, ನೀನು ನನ್ನ ಕೃತಿಯಾದರೆ ನಾಶವಾಗು; ಜಗನ್ಮಾತೆಯ ಕೃತಿಯಾದರೆ ಉಳಿದುಕೊ'. ವಿವೇಕಾನಂದರು ಸಿಸ್ಟರ್ ನಿವೇದಿತಾಳನ್ನು ಆಶೀರ್ವದಿಸಿ ಕಳುಹಿಸಿದ್ದು ಹೀಗೆ. ಇಲ್ಲಿ ಸ್ವಾಮೀಜಿಯ ನಿರ್ಲಿಪ್ತತೆ, ಮುಕ್ತಾತ್ಮಭಾವ ನಮ್ಮನ್ನು ಅಚ್ಚರಿಗೊಳಪಡಿಸುತ್ತದೆ. ಜೀವನದಲ್ಲಿ ಯಶಸ್ಸು ಕಂಡಿರುವ ಸ್ವಾಮೀಜಿಯ ವ್ಯಕ್ತಿತ್ವದಲ್ಲಿ ಅಹಮಿಕೆ, ಸ್ವಾರ್ಥ, ಪ್ರತಿಷ್ಠೆಯನ್ನು ಎಳ್ಳಷ್ಟೂ ಕಾಣಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಇದ್ದು ಏನೂ ಇಲ್ಲದಂತಹ ಮನಸ್ಥಿತಿಗೇರುವ ಆದರ್ಶ ನಿಜವಾಗಿ ನಾವೆಲ್ಲರೂ ಇಂದಿನ ಪ್ರಪಂಚದಲ್ಲಿ ಅಗತ್ಯವಾಗಿ ಅನುಸರಿಸಬೇಕಾದ ಮುಗಿಲೆತ್ತರದ ಉನ್ನತಾದರ್ಶವೆನಿಸಿದರೂ ಇಂದಿನ ಜಗತ್ತಿನಲ್ಲಿ ಅದು ಅಸಾಧ್ಯವೆನಿಸದಿರದು.
ನಿವೇದಿತಾ ತನ್ನ ಜವಾಬ್ದಾರಿಯನ್ನು ಮರೆತುದು ಮತ್ತು ರಾಮಕೃಷ್ಣ ಮಿಷನ್ನಿನ ಜವಾಬ್ದಾರಿಯನ್ನು ಟ್ರಸ್ಟ್‌ಗೆ ವಹಿಸಿ ಅಧ್ಯಕ್ಷಸ್ಥಾನವನ್ನು ಸ್ವಾಮಿ ಬ್ರಹ್ಮಾನಂದರಿಗೆ ವಹಿಸಿದುದರಿಂದ ಸ್ವಲ್ಪವೂ ವಿಚಲಿತರಾಗದ ಸ್ವಾಮೀಜಿ ಅವಳ ಪತ್ರಗಳಿಗೆ ಉತ್ತರಿಸುತ್ತಾ, 'ಈ ಕ್ಷಣದಿಂದ ನಾನು ಯಾರನ್ನೂ ಪ್ರತಿನಿಧಿಸುವುದಿಲ್ಲ. ನಾನು ಯಾರಿಗೂ ಹೊಣೆಗಾರನಲ್ಲ. ನಾನು ಯಾರಲ್ಲಿಯೂ ಯಾವುದೇ ಋಣವನ್ನಿಟ್ಟುಕೊಂಡಿಲ್ಲ. ನಾನು ನನ್ನ ಶಕ್ತಿಯನ್ನೆಲ್ಲ ಬಸಿದಿದ್ದೇನೆ. ಅಷ್ಟೇಕೆ, ಜೀವವನ್ನೇ ಕೊಟ್ಟಿದ್ದೇನೆ. ನಿನ್ನ ಬದಲಾವಣೆಯ ಬಗ್ಗೆ ನಾನು ಅಸೂಯೆ ತಾಳಿದ್ದೇನೆಂದು ನಿನ್ನ ಪತ್ರ ಸೂಚಿಸುತ್ತಿದೆ. ಆದರೆ, ಜನ್ಮತಃ ನಾನು ಮತ್ಸರದಿಂದ, ದ್ವೇಷದಿಂದ ಮತ್ತು ಯಜಮಾನಿಕೆಯ ಆಸೆಯಿಂದ ದೂರವಾಗಿದ್ದೇನೆ. ನಾನು ಹಿಂದೆಂದೂ ನಿನಗೆ ಹೀಗೆಯೇ ಮಾಡಬೇಕು ಎಂದು ಆದೇಶಿಸಿದವನಲ್ಲ. ಆದರೆ, ಇಷ್ಟು ಮಾತ್ರ ಹೇಳಬಲ್ಲೆ, ಎಲ್ಲಿಯವರೆಗೆ ನೀವು ಹೃತ್ಪೂರ್ವಕವಾಗಿ ಜಗನ್ಮಾತೆಯ ಸೇವೆ ಮಾಡುತ್ತಿರುತ್ತೀಯೋ ಅಲ್ಲಿಯವರೆಗೆ ಅವಳೇ ನಿನ್ನ ಮಾರ್ಗದರ್ಶಿಕಿಯಾಗಿರುತ್ತಾಳೆ.' ಸ್ವಾಮೀಜಿ     ಪತ್ರವನ್ನು ಓದಿದ ನಿವೇದಿತಾಳಿಗೆ ತನ್ನ ತಪ್ಪಿನ ಅರಿವೂ, ಗುರುವನ್ನು ಇನ್ನೂ ಅರ್ಥಮಾಡಿಕೊಳ್ಳಲಿಲ್ಲವಲ್ಲಾ ಎಂಬ ನೋವಿನಿಂದ ವಾಪಸ್ ಬಂದಳು.

-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.