ಅಜೇಯನ ಚರಿತೆಯೊಳಗೆ ಅಸಾಧ್ಯಎಂಬುದಿಲ್ಲ!
ವಿವೇಕಾನಂದರು ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿ ಏರ್ಪಡಿಸಿದ್ದ ಧರ್ಮಚರಿತ ಮೇಳದಲ್ಲಿ ಫ್ರೆಂಚ್ ಭಾಷೆಯಲ್ಲಿ ಭಾಷಣ ಮಾಡಿದ್ದಾರೆಂದರೆ ಅಚ್ಚರಿಯಾಗದಿರದು. ಏಕೆಂದರೆ ಅವರು ಹುಟ್ಟಿದ್ದು ಬಂಗಾಳದಲ್ಲಿ, ಮಾತೃಭಾಷೆ ಬಂಗಾಳಿ. ವಿದ್ಯಾಭ್ಯಾಸ ಇಂಗ್ಲಿಷ್ ಭಾಷೆಯಲ್ಲಿ. ದೇಶಸಂಚಾರ ಮಾಡುವಾಗ ಹಿಂದಿ ಕಲಿತದ್ದು. ಅಮೆರಿಕದಲ್ಲಿ ಭಾಷಣ ಮಾಡಿದ್ದು ಇಂಗ್ಲಿಷ್ನಲ್ಲಿ. ಇಷ್ಟೆಲ್ಲದರ ನಡುವೆ ಸಂಸ್ಥೆಗಳ ಸ್ಥಾಪನೆ, ಪತ್ರಿಕಾ ಬರವಣಿಗೆಗಳು, ಸೇವಾಕಾರ್ಯಗಳು ಅಗಣಿತ. ಇನ್ನೂ ಅಚ್ಚರಿಯೆಂದರೆ ಅವರು ಬದುಕಿದ್ದು ಕೇವಲ 39 ವರ್ಷ! ಇಷ್ಟರ ನಡುವೆ ಅವರು ಫ್ರೆಂಚ್ ಭಾಷೆ ಎಲ್ಲಿ ಕಲಿತರು?
ಸ್ವಾಮೀಜಿ ಫ್ರೆಂಚ್ ಕಲಿತದ್ದು ಅಮೆರಿಕದಲ್ಲಿ. ಅವರೇ ಹೇಳುವಂತೆ 'ಆಧುನಿಕ ನಾಗರಿಕತೆಯ ರಾಜಧಾನಿ, ಭೂಮಿಯ ಮೇಲಿನ ಸ್ವರ್ಗ, ಕಲೆ ವಿಜ್ಞಾನಗಳ ಕೇಂದ್ರ ಬಿಂದು ಎನಿಸಿದ ಪ್ಯಾರಿಸ್ನಲ್ಲಿ ಉತ್ಕಟ ಭಾಷಾಭಿಮಾನಿಗಳಾದ ಫ್ರೆಂಚರ ಎದುರಿಗೆ ನಾನು ಫ್ರೆಂಚ್ ಭಾಷೆಯಲ್ಲೇ ಮಾತನಾಡಬೇಕು' ತಮಗೆ ಆತಿಥ್ಯ ನೀಡಿದ್ದ ಲೆಗೆಟ್ಟರ ಮನೆಯಲ್ಲಿ ನಡೆಯುತ್ತಿದ್ದ ಒಕ್ಕೂಟಗಳಲ್ಲಿ ಬೆರೆಯುತ್ತಿದ್ದರು. ದಿನದಿನಕ್ಕೆ ಅವರ ಫ್ರೆಂಚ್ ಭಾಷಾಜ್ಞಾನ ಹೆಚ್ಚುತ್ತಾ ಬಂತು. ನಿರರ್ಗಳತೆಯನ್ನು ಗಳಿಸಿಕೊಳ್ಳುವ ಉದ್ದೇಶದಿಂದ ತಮ್ಮ ವಾಸಸ್ಥಳವನ್ನು ಜೂಲ್ಸ್ ಬ್ಯೂಸ್ ಎಂಬ ಫ್ರೆಂಚ್ ತರುಣನ ಮನೆಗೆ ಬದಲಾಯಿಸಿದರು. ಆತನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಹೀಗಾಗಿ ಫ್ರೆಂಚ್ ಭಾಷೆಯನ್ನು ಬಹಳಷ್ಟು ಸುಧಾರಿಸಿಕೊಂಡರು. ಅವರು ಮಾಡಿದ ಭಾಷಣದಿಂದ ಫ್ರೆಂಚರ ಮನಗೆದ್ದರು.
ಹೀಗೆ ಮಾನವನ ಹಿರಿಮೆಯು ಯಾವುದೇ ರೂಪದಲ್ಲಿ ವ್ಯಕ್ತವಾದರೂ ಅದನ್ನು ಗುರುತಿಸುವಲ್ಲಿ ಹಿಂದೆಬೀಳದ ಸ್ವಾಮೀಜಿ ಅತ್ಯಂತ ಸುಸಂಸ್ಕೃತ ಪ್ಯಾರಿಸ್ ನಾಗರಿಕರಿಗೆ ಸಮನಾಗಿ ಫ್ರೆಂಚ್ನಲ್ಲಿ ಸಂಭಾಷಿಸುತ್ತಿದ್ದುದು, ಚುರುಕಾದವರಿಗೂ ಚುರುಕು ಮುಟ್ಟಿಸಬಲ್ಲವರೂ, ಸರ್ವಶ್ರೇಷ್ಠರಾದ ಬುದ್ಧಿಜೀವಿಗಳನ್ನೂ ವಾದದಲ್ಲಿ ಸೋಲಿಸಬಲ್ಲವರೂ ಆಗಿ ಅಜೇಯ ಚಾತುರ್ಯವನ್ನು ಫ್ರೆಂಚ್ ಭಾಷೆಯಲ್ಲಿ ಮೆರೆದದ್ದು ನಿಜಕ್ಕೂ ಸೋಜಿಗ!ಟಿ
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

