ಬೈಟುಕಾಫಿ

ವೋಟಿಂಗ್ ಸ್ಟಾರ್

Published On :

ನಮ್ಮ  ನಾಯಕರನ್ನು ನಾವೇ ಆಯ್ಕೆ ಮಾಡಬೇಕು. ನಾಳೆ ನಮಗಿಷ್ಟ ಇಲ್ಲದ ನಾಯಕ ಗೆದ್ದರೆ ವಿರೋಧಿಸೋಕಾದ್ರೂ  ಹಕ್ಕನ್ನಾದ್ರೂ ಉಳಿಸ್ಕೊಳ್ಬೇಕಲ್ವಾ? ಅದಕ್ಕೋಸ್ಕರ ಪ್ರತಿಯೊಬ್ಬರೂ ವೋಟ್ ಮಾಡಲೇಬೇಕು. ನಮ್ಮ ಕ್ಷೇತ್ರಕ್ಕೆ ಯಾರು ಬೇಕು, ಕೇಂದ್ರದಲ್ಲಿ ಯಾರು ನಾಯಕರಾಗಬೇಕು ಅನ್ನೋದನ್ನ ತುಂಬಾ ಹೊಣೆಗಾರಿಕೆಯಿಂದ ಆಯ್ಕೆ ಮಾಡಬೇಕಿದೆ. ಶುದ್ಧಹಸ್ತರು ಯಾರೂ ಕಾಣಿಸ್ತಿಲ್ಲ ನಿಜ. ಆದರೂ ಇರೋವ್ರಲ್ಲೇ ಸಭ್ಯರನ್ನು ಸಮರ್ಥರನ್ನು ಆರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ನರೇಂದ್ರ  ಮೋದಿಯವರ ಬಗ್ಗೆ ಭರವಸೆ ಹೊಂದಿದ್ದೇನೆ. ಅವರನ್ನು ಬೆಂಬಲಿಸುತ್ತಿದ್ದೇನೆ. ಅವರು ಯಾವುದೇ ಪಕ್ಷದಲ್ಲಿದ್ದರೂ ನಾನು ಅವರನ್ನು ಬೆಂಬಲಿಸುತ್ತಿದ್ದೆ. ಯಾಕಂದ್ರೆ ಅವರು ಸಾಧಿಸಿ ತೋರಿಸಿದ್ದಾರೆ. ಆಮ್‌ಆದ್ಮಿ ಪಾರ್ಟಿಯ ಕೇಜ್ರಿವಾಲ್ ನಿಜಕ್ಕೂ ಭರವಸೆ ಮೂಡಿಸಿದ್ದರು. ಆದರೆ ಈಗ ಅವರಿಂದ ಭ್ರಮನಿರಸನವಾಗಿದೆ. ದೇಶದಲ್ಲಿ ಪ್ರತಿಯೊಬ್ಬರೂ ಬೆಲೆಯೇರಿಕೆಯಿಂದ ಬಳಲಿದ್ದಾರೆ. ಪೆಟ್ರೋಲ್ ಡೀಸೆಲ್ ಎರಡರ ಬೆಲೆ ಹೆಚ್ಚೂ ಕಮ್ಮಿ ಒಂದೇ ಆಗೋದರಲ್ಲಿದೆ. ಇದಕ್ಕೆಲ್ಲ ಕೊನೆ ಸಿಗಬೇಕಿದೆ. ಮೋದಿ ಈ ಎಲ್ಲವನ್ನೂ ಸರಿದಾರಿಗೆ ತರಬಹುದು ಎಂಬ ಭಾರೀ ನಿರೀಕ್ಷೆ ಇದೆ. ಈ ಬಾರಿ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗುವುದಂತೂ ಗ್ಯಾರಂಟಿ.  ರಾಹುಲ್ ಗಾಂಧಿಯ ಬಾಲಿಶ ಯೋಚನೆಗಳು, ರಾಜಕೀಯ ಎಳಸುತನವನ್ನು  ಎಕ್ಸ್‌ಪೋಸ್ ಮಾಡಿದ ವಾರ್ತಾಮಾಧ್ಯಮಗಳಿಗೂ ಈ ಸಂದರ್ಭದಲ್ಲಿ ಥ್ಯಾಂಕ್ಸ್‌ಹೇಳಬೇಕಿದೆ. ನಾನು ಸೋಷಿಯಲ್ ನೆಟ್‌ವರ್ಕ್‌ಗಳಲ್ಲೂ ನನ್ನ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದೇನೆ. ಬೇರೆಯವರ ಮೇಲೆ ನನ್ನ ಅಭಿಪ್ರಾಯ ಹೇರದೆ ಹೋದರೂ, ಮತದಾನದ ಹಕ್ಕನ್ನು ವ್ಯರ್ಥಗೊಳಿಸಿಕೊಳ್ಳಬೇಡಿ ಅಂತ ಮಾತ್ರ ಪುನಃ ಪುನಃ ಹೇಳುತ್ತಲೇ ಇದ್ದೇನೆ. ಪ್ಲೀಸ್ ಪ್ರತಿಯೊಬ್ಬರೂ ವೋಟ್ ಮಾಡಿ.

-ಶ್ವೇತಾ ಪಂಡಿತ್, ಚಿತ್ರನಟಿ ( ಬಿಗ್‌ಬಾಸ್ ಖ್ಯಾತಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.