ಬೈಟುಕಾಫಿ

ಹುಚ್ಚು ಪ್ರೇಮ

Published On :

ಹೊಸದಾಗಿ ಶಿಕ್ಷಣ ಮುಗಿಸಿದ್ದ ಮನೋವೈದ್ಯ ವಸ್ತು ಸ್ಥಿತಿ ತಿಳಿದುಕೊಳ್ಳಲು ದೊಡ್ಡ ಮಾನಸಿಕ ಆಸ್ಪತ್ರೆಗೆ ಹೋದ. ಆ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ಅವರನ್ನು ಒಂದು ಸಣ್ಣ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಕುರ್ಚಿಯ ಮೇಲೆ ಕುಳಿತವನೊಬ್ಬ ಹಿಂದೆ ಮುಂದೆ ತಲೆದೂಗುತ್ತಾ 'ಲೀಲೂ, ಲೀಲೂ, ಲೀಲೂ' ಎಂದು ಹಲುಬುತ್ತಿದ್ದ.
ಇವನು ಇಲ್ಲಿ ಬಂದಿದ್ದು ಯಾಕೆ ಅಂತ ಹೊಸ ಡಾಕ್ಟರ್ ಕೇಳಿದರು. 'ಇವನು 'ಲೀಲೂ' ಅನ್ನುವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಅವಳು ಕೈಕೊಟ್ಟು ಬೇರೆಯವನನ್ನು ಮದುವೆ ಮಾಡಿಕೊಂಡಳು. ಇವನು ಇಲ್ಲಿಗೆ ಬಂದ. ಪ್ರೀತಿ ಅತಿಯಾಗಿ ವಿಫಲವಾದರೆ ಹೀಗೆ ಹುಚ್ಚು ಹಿಡಿಯುತ್ತೆ'. ಅಂತ ವಿವರಿಸಿದರು ಅನುಭವಿ ಡಾಕ್ಟರ್.
ನಂತರ ಅದೇ ಆಸ್ಪತ್ರೆಯಲ್ಲಿ ಇನ್ನೊಂದು ಫ್ಲೋರ್‌ಗೆ ಕರೆದುಕೊಂಡು ಹೋದರು. ಅಲ್ಲಿ ಇನ್ನೊಬ್ಬ ರೋಗಿಯೂ ತನ್ನ ತಲೆಯನ್ನು ಗೋಡೆಗೆ ಹೊಡೆದುಕೊಳ್ಳುತ್ತಾ 'ಲೀಲೂ, ಲೀಲೂ, ಲೀಲೂ' ಅಂತಾ ಕಿರುಚಿಕೊಳ್ಳುತ್ತಿದ್ದ.
ಆಗ ಹೊಸ ಡಾಕ್ಟರ್ ಹಿರಿಯ ಡಾಕ್ಟರ್ ಕಡೆ ತಿರುಗಿ 'ಸಾರ್, ಈ 'ಲೀಲೂ' ಅನ್ನುವವಳು ತುಂಬಾ ಸುಂದರಿ ಇರಬಹುದು. ಇಲ್ಲದಿದ್ದರೆ ಹೀಗೆ ಎಲ್ಲರಿಗೂ ಅವಳ ಹುಚ್ಚು ಹೇಗೆ ಹಿಡಿಯುತ್ತದೆ.' ಎಂದರು.
ಆತ ಮಾತು ಮುಗಿಸುವ ಮೊದಲೇ ಹಿರಿಯ ಡಾಕ್ಟರ್ ಹೇಳಿದರು, 'ಇಲ್ಲ, ಇಲ್ಲ ಹಾಗೇನೂ ಇಲ್ಲ. ಇವನೇ ಆ ಲೀಲೂಳನ್ನು ಮದುವೆ ಮಾಡಿಕೊಂಡವನು'.
ಹೊಸ ಡಾಕ್ಟರ್ ಯೋಚಿಸಲು ಆರಂಬಿಸಿದ 'ಪ್ರೇಮ ಫಲಿಸದಿದ್ದರೂ ಹುಚ್ಚು ಹಿಡಿಯುತ್ತದೆ. ಪ್ರೇಮಿಸಿದವಳನ್ನು ಕೈಹಿಡಿದರೂ ಹುಚ್ಚು ಹಿಡಿಯುತ್ತದೆ. ಹಾಗಾದರೆ ಪ್ರೇಮಿಸುವುದು ತಪ್ಪೋ, ಮದುವೆಯಾಗುವುದು ತಪ್ಪೋ? ಪ್ರೇಮ ಎಂಬ ಉತ್ಕಟ ಭಾವನೆಯೇ ತಪ್ಪೇ. ಇದನ್ನು ಯಾವ ರೀತಿಯಲ್ಲಿ ವಿಶ್ಲೇಷಿಸಬಹುದು ತಿಳಿಯುತ್ತಿಲ್ಲ'. 'ಹೌದು ಇದೇ ಅನುಮಾನ ನನ್ನನ್ನು ಕಾಡುತ್ತಿದೆ.' ಎಂದರು ಹಿರಿಯ ಡಾಕ್ಟರ್.
= ವಿಶ್ವನಾಥ್ ಸಂಪಟೂರು

ಒಬ್ಬ ಜನಪ್ರಿಯ ನಟನಿಗೆ ಧೂಮಪಾನ ಹಾನಿಕರ ಎನ್ನುವ ಸಂದೇಶ ಸಾರುವ ಅರ್ಧ ನಿಮಿಷದ ಜಾಹೀರಾತಿಗೆ ಅಭಿನಯಿಸಲು ಕೇಳಿದಾಗ ಒಂದೂವರೆ ತಿಂಗಳ ನಂತರ ಬಂದು ನಟಿಸಿ ಹೋದ. ಆ ಒಂದೂವರೆ ತಿಂಗಳಿನಲ್ಲಿ ಸಿಗರೇಟ್ ಸೇವನೆಯನ್ನು ಸಂಪೂರ್ಣ ತ್ಯಜಿಸಿ ಆನಂತರ ಶೂಟಿಂಗ್‌ಗೆ ಹೋಗಿದ್ದ.
= ಎಸ್. ಸುಧಾಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.