ವೋಟಿಂಗ್ ಸ್ಟಾರ್

ಚುನಾವಣೆ ಬಗ್ಗೆ ಮಾತಾಡೋದಕ್ಕಿಂತ, ಮಾತಿಗಿಂತ ಕ್ರಿಯೆ ಲೇಸು ಎಂಬಂತೆ ಮೊದಲು ನಮ್ಮ ನಮ್ಮ ವೋಟಿನ ಹಕ್ಕನ್ನು ಚಲಾಯಿಸೋದರ ಬಗ್ಗೆ ಕಾಳಜಿ ವಹಿಸಬೇಕಿದೆ. ತುಂಬಾ ಜನ ವೋಟಿನ ಮಹತ್ವದ ಬಗ್ಗೆ ಮಾತಾಡ್ತಾರೆ. ಆದರೆ ಅವರೇ ವೋಟು ಮಾಡಲು ಅಸಡ್ಡೆ ಮಾಡಿ ಅಂದು ಮತದಾನದಿಂದ ದೂರ ಉಳಿದುಬಿಡುತ್ತಾರೆ. ಹಾಗಾಗಕೂಡದು. ನಮ್ಮ ಹಕ್ಕು ಚಲಾಯಿಸೋಕೆ ಯಾಕೆ ನಮಗೆ ನಿರಾಸಕ್ತಿ? ಈ ಸಂದರ್ಭದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸೋದರ ಜೊತೆಗೆ ಫೇಕ್ ವೋಟಿಂಗ್ ಬಗ್ಗೆಯೂ ಎಚ್ಚರಿಕೆವಹಿಸಬೇಕಿದೆ. ಫೇಕ್ ವೋಟಿಂಗ್ನಿಂದ ಆರಿಸಿ ಬರೋ ಅಭ್ಯರ್ಥಿಗಳು ಇನ್ನೆಷ್ಟು ಫೇಕ್ ಇರಬಹುದು ಎಂಬುದನ್ನು ನಾವು ಅಂದಾಜಿಸಬೇಕಿದೆ. ನಾನು ಚಿಕ್ಕವಯಸ್ಸಿನಿಂದ ರಾಜಕೀಯ ವಾತಾವರಣದಲ್ಲಿ ಬೆಳೆದುಬಂದವಳು. ಅಪ್ಪ ಈಗಲೂ ರಾಜಕೀಯದಲ್ಲಿ ಸಕ್ರಿಯರು. ಅದಕ್ಕೆ ಸರಿಯಾಗಿ ನನ್ನದು ಮಹಾಪರ್ವ ಧಾರಾವಾಹಿಯಲ್ಲಿ ಮಹಿಳಾ ಮುಖ್ಯಮಂತ್ರಿಯ ಪಾತ್ರ. ಈ ಧಾರಾವಾಹಿಯಿಂದ ರಾಜಕಾರಣದ ಹಲವು ವಿಶೇಷಗಳನ್ನು ಸೂಕ್ಷ್ಮಗಳನ್ನು ಕಲಿತಿದ್ದೇನೆ. ರಾಜಕೀಯದಲ್ಲಿ ಮಹಿಳೆಯ ಪಾತ್ರದ ಪ್ರಾಮುಖ್ಯತೆ ಹಾಗೂ ಮಹಿಳೆಯರು ರಾಜಕೀಯ ಸ್ಥಾನಮಾನದ ವಿಷಯದಲ್ಲಿ ಎಷ್ಟೊಂದು ನಿರ್ಲಕ್ಷಿತರಾಗುತ್ತಿದ್ದಾರೆ ಎಂಬುದೂ ಅರಿವಿಗೆ ಬರುತ್ತಿದೆ. ಹೆಚ್ಚು ಹೆಚ್ಚು ಮಹಿಳೆಯರು ರಾಜಕೀಯದಲ್ಲಿ ಸಕ್ರಿಯರಾಗಬೇಕಿದೆ. ಹಕ್ಕಿನ ದೃಷ್ಟಿಯಿಂದ ಹೇಳುತ್ತಿಲ್ಲ. ಆದರೆ ಇದು ಗಂಡಸರ ಹೊಣೆ ಮಾತ್ರವಲ್ಲ, ದೇಶದತ್ತ ನಮ್ಮದೂ ಜವಾಬ್ದಾರಿಯಿದೆ ಎಂಬುದನ್ನು ಮನಗಾಣಬೇಕಿದೆ. ನನಗೆ ರಾಜಕೀಯ ಆಕಾಂಕ್ಷೆ ಅಂತೇನೂ ಇಲ್ಲದಿದ್ದರೂ ಸಹಜ ಆಸಕ್ತಿ ಮತ್ತು ತಿಳುವಳಿಕೆ ಇದೆ. ಈ ಬಾರಿಯ ಚುನಾವಣೆಯ ಫಲಿತಾಂಶಗಳ ಬಗ್ಗೆ ಕುತೂಹಲಿಯಾಗಿದ್ದೇನೆ.
-ಅಶ್ವಿನಿ ಗೌಡ, ಚಿತ್ರ ನಟಿ (ಮಹಾಪರ್ವ ಧಾರಾವಾಹಿ ಖ್ಯಾತಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


