ವೋಟಿಂಗ್ ಸ್ಟಾರ್

ನಾನು ಪ್ರಸಕ್ತ ರಾಜಕೀಯ ಸ್ಥಿತಿಗತಿಯನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತ ಬರುತ್ತಿದ್ದೇನೆ. ನನ್ನ ಸಿನಿಮಾ, ಮಾಡೆಲಿಂಗ್, ಫಿಟ್ನೆಸ್ ಇವುಗಳ ಬಗ್ಗೆ ಇರುವಷ್ಟೇ ಕಾಳಜಿ ದೇಶದ ಹಿತದ ಬಗ್ಗೆಯೂ ಇದೆ. ಅದು ಅವಶ್ಯಕ ಕೂಡ. ಕಳೆದ ಹಲವು ಎಲೆಕ್ಷನ್ಗಳ ಮತದಾನದ ಅಂಕಿಅಂಶ ನೋಡಿದಾಗ ಅನಿಸಿದ್ದು, ಬೆಂಗಳೂರಿನಂಥ ಸುಶಿಕ್ಷಿತರ ತಾಣದಲ್ಲೇ ಇಷ್ಟೊಂದು ಕಡಿಮೆ ಪ್ರಮಾಣದ ಮತದಾನವಾದರೆ ಇನ್ನು ಹಳ್ಳಿಗಳ ಕತೆ ಹೇಗೆ ಅಂತ . ಸುಶಿಕ್ಷಿತರು ಜನನಾಯಕರ ಆಯ್ಕೆಪ್ರಕ್ರಿಯೆಯಿಂದ ದೂರ ನಿಲ್ಲಬಾರದು. ಅಶಿಕ್ಷಿತರಿಗೂ ನಾವು ಮಾದರಿಯಾಗಬೇಕಿದೆ. ನಾವು ಅರ್ಹ ಅಭ್ಯರ್ಥಿಗೆ ಮತ ನೀಡಿ ಆಯ್ಕೆ ಮಾಡೋ ಮೂಲಕ ಇತರರನ್ನೂ ಉತ್ತೇಜಿಸುವ ಅಗತ್ಯವಿದೆ. ನಾವು ಸೆಲೆಬ್ರಿಟಿ ಅಂತ ಸಮಾಜ ಗುರುತಿಸಿದ ಕಾರಣಕ್ಕೆ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ನನ್ನ ಫಿಟ್ನೆಸ್, ಬಾಡಿ, ಸ್ಟೈಲ್ಗಳಿಂದ ಯುವಕರು ಸ್ಫೂರ್ತಿ ಪಡೆಯೋದು ನಿಜವಾದರೆ, ನಾನು ರಾಜಕೀಯ ಹಾಗೂ ಮತದಾನದ ಪಾಸಿಟಿವ್ಗಳ ಬಗ್ಗೆ ನನಗಿಂತ ಕಿರಿಯರಿಗೆ ತಿಳಿಸಿ ಯಾಕೆ ಮಾದರಿ ಆಗಬಾರದು? ಅಭ್ಯರ್ಥಿಯ ಆಯ್ಕೆಯಲ್ಲಿ ಗೆಳೆಯರ ನಡುವೆ, ಕುಟುಂಬದವರ ನಡುವೆ, ಭಿನ್ನಾಭಿಪ್ರಾಯವಿರಲಿ. ದಟ್ಸ್ ಓಕೆ. ಆದರೆ ಮತದಾನ ಮಾಡುವ ಬಗ್ಗೆ ಮಾತ್ರ ಭಿನ್ನಾಭಿಪ್ರಾಯ ಬೇಡ. ಪ್ಲೀಸ್ ವೋಟ್ ಮಾಡಿ.
-ರಘು ರಾಮಪ್ಪ - ಚಿತ್ರನಟ, ಮಾಡೆಲ್, ಫಿಟ್ನೆಸ್ ಕೋಚ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


