ಜೀವ ರಕ್ಷಿಸಬಲ್ಲದು ಒಂದು ಚೂರು ಕ್ಯಾರೆಟ್!

ಅಚ್ಚರಿ ಆಗಬಹುದು ಅಲ್ಲವಾ? ನಿತ್ಯ ಕ್ಯಾರೆಟ್ ತಿನ್ನುವ ಅಭ್ಯಾಸ ಇದ್ದರೆ ಶ್ವಾಸಕೋಶ ಕ್ಯಾನ್ಸರ್ ನಿಮ್ಮ ಬಳಿ ಸುಳಿಯದು ಎನ್ನುತ್ತಾರೆ ತಜ್ಞರು. ಕಡೇಪಕ್ಷ ಇಡೀ ಕ್ಯಾರೆಟ್ ಅಲ್ಲದಿದ್ದರೂ ಸಣ್ಣ ಚೂರು ತಿಂದರೂ ಸಾಕು! ಏನೂ ಇಲ್ಲ ಎನ್ನುವುದಕ್ಕಿಂತ ಸ್ವಲ್ಪವಾದರೂ ಇದೆ ಎನ್ನುವುದು ಒಳ್ಳೆಯದು ಅಲ್ಲವೆ? ಅಮೆರಿಕದ ಕ್ಯಾನ್ಸರ್ ಸಂಶೋಧಕ ಮೆರಿಲಿನ್ ಮೆಂಕೇಸ್ ಹೇಳುತ್ತಾರೆ- 'ದಿನಕ್ಕೆ ಒಂದು ಕ್ಯಾರೆಟ್ ಸೇವನೆ ಜಗತ್ತಿನಲ್ಲಿ ಪ್ರತಿ ವರ್ಷ 15ರಿಂದ 20 ಸಾವಿರ ಸಾವುಗಳು ಶ್ವಾಸಕೋಶ ಕ್ಯಾನ್ಸರ್‌ನಿಂದ ಸಂಭವಿಸುವುದನ್ನು ತಪ್ಪಿಸಬಹುದು!'
ಕ್ಯಾರೆಟ್ ಸರ್ವಶ್ರೇಷ್ಠ, ಗೆಣಸು, ಸೊಪ್ಪುಗಳು, ಸೊಪ್ಪುಗಳನ್ನು ಹೊಂದಿರುವ ತರಕಾರಿಗಳು ಸಹ ಶ್ವಾಸಕೋಶ ಕ್ಯಾನ್ಸರ್ ತಡೆಯುವಲ್ಲಿ ಪಾತ್ರ ವಹಿಸಬಲ್ಲವು. ಇವುಗಳಲ್ಲೆಲ್ಲ ಇರುವ ಸಾಮಾನ್ಯ ಸಂಗತಿ ಎಂದರೆ ಕೆರೋಟಿನ್. ಶ್ವಾಸಕೋಶ ಕ್ಯಾನ್ಸರ್ ವಿರುದ್ಧ ಸೆಣಸುವ ತಾಕತ್ತು ಶರೀರಕ್ಕೆ ಲಭಿಸುವುದೇ ಕೆರೋಟಿನ್‌ನಿಂದ. ಅದರ ಪರಿಣಾಮ ಶರೀರದ ಸಾಮರ್ಥ್ಯವನ್ನು ಅವಲಂಬಿಸಿದೆ. ಶರೀರ ಎಷ್ಟರಮಟ್ಟಿಗೆ ಕೆರೋಟಿನ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆಯೋ ಅಷ್ಟು ತೀವ್ರವಾದ ಪರಿಣಾಮವನ್ನು ನಿರೀಕ್ಷಿಸಬಹುದು. ಕೆಲವರ ದೇಹ, ವಿಶೇಷವಾಗಿ ತಂಬಾಕು ಸೇವನೆ, ಧೂಮಪಾನದ ಚಟವನ್ನು ಬಹಳ ದೀರ್ಘಕಾಲದಿಂದ ಅಂಟಿಸಿಕೊಂಡವರ ಶರೀರ ಎಷ್ಟು ದುರ್ಬಲವಾಗಿರುತ್ತದೆ ಎಂದರೆ ರೋಗನಿರೋಧಕ ಶಕ್ತಿ ಸಂಪೂರ್ಣ ನಾಶವಾಗಿರುತ್ತದೆ! ಅಂಥವರಲ್ಲಿ ಯಾವುದೇ ಕಾಯಿಲೆ ಬಹಳ ತೀವ್ರವಾಗಿ ವ್ಯಾಪಿಸುತ್ತದೆ ಮತ್ತು ಗುಣಮುಖರಾಗುವ ಅವಧಿಯೂ ವಿಳಂಬವಾಗುತ್ತದೆ.
ಒಂದು ಸಣ್ಣ ಚೂರು ಕ್ಯಾರೆಟ್ ಎಂಥ ಪರಿಣಾಮ ಬೀರಬಲ್ಲದು? ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿನ ಇಂಪೀರಿಯಲ್ ಕ್ಯಾನ್ಸರ್ ರೀಸರ್ಚ್ ಫಂಡ್‌ನ ಸಂಶೋಧಕರು 193 ಜನರಲ್ಲಿ ಪ್ರಯೋಗ ಕೈಗೊಂಡರು. ದಿನಕ್ಕೊಂದು ಚೂರು ಕ್ಯಾರೆಟ್ ತಿನ್ನಿ ಎನ್ನುವುದೇ ಅವರು ನೀಡಿದ್ದ ಕೆಲಸ. ಹೀಗೆ ನಿತ್ಯ ಒಂದೊಂದು ಚೂರು ಕ್ಯಾರೆಟ್ ತಿಂದವರಲ್ಲಿ 2.7 ಮಿಲಿಗ್ರಾಂಗಿಂತ ಹೆಚ್ಚು ಕೆರೋಟಿನ್ ಸೇವಿಸಿದವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯ ತೀರಾ ಎಂದರೆ ತೀರಾ ಕಡಿಮೆ ಇತ್ತು. ಅದೇ 1.7 ಮಿಲಿಗ್ರಾಂನಷ್ಟು ಕೆರೋಟಿನ್ ಸೇವಿಸಿದವರಲ್ಲಿ ಸ್ವಲ್ಪಮಟ್ಟಿಗಿನ ರಿಸ್ಕ್ ಕಂಡುಬಂದಿತ್ತು. ಅಂದರೆ ಕೇವಲ 1 ಮಿಲಿಗ್ರಾಂ ಕೆರೋಟಿನ್‌ನಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದು ಮನದಟ್ಟಾಗುತ್ತದೆ. ಅಂದಹಾಗೆ ಸಾಧಾರಣ ಗಾತ್ರದ ಒಂದು ಕ್ಯಾರೆಟ್‌ನಲ್ಲಿ ಆರು ಮಿಲಿಗ್ರಾಂನಷ್ಟು ಕೆರೋಟಿನ್ ಇರುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


