ಬೈಟುಕಾಫಿ

ಬನ್ನಿಮಂಟಪ

Published On :

facebook  ಕವನ ಹಡಪದ ಗಾಯನ
ಇದೊಂದು ವಿಶಿಷ್ಟ ಸಂಗೀತ ಸಂಜೆ ಕಾರ್ಯಕ್ರಮ. 'ಬುಕ್ಕಲ್ಲೇ ಓದಬೇಕಿಲ್ಲ ಕವನಾನ, ಇದು ಎಫ್‌ಬಿ, ವಾಟ್ಸ್‌ಆ್ಯಪ್ ಜಮಾನ' ಘೋಷವಾಕ್ಯದೊಂದಿಗೆ ಆಹ್ವಾನಿಸುವ ಈ ಕಾರ್ಯಕ್ರಮ ಅವಿರತ ಪ್ರತಿಷ್ಠಾನದಿಂದ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ ರಂಗಗೀತೆ, ಭಾವಗೀತೆಗಳನ್ನು ಕೇಳಬಹುದಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ಕವಿ, ನಾಟಕಕಾರ ಎಚ್.ಎಸ್. ವೆಂಕಟೇಶಮೂರ್ತಿಯವರು ಉಪಸ್ಥಿತರಿರುವರು. ರಘುನಂದನ್, ಶಶಿಕಾಂತ ಯಡಹಳ್ಳಿ, ಚೇತನಾ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್, ಶೈಲಜಾ ಮೈಸೂರು, ಗಣೇಶ್ ಪ್ರಸಾದ್, ಮಮತ ಅರಸೀಕೆರೆ ಹಾಗೂ ರವಿ ಕುಲಕರ್ಣಿ ಹುಬ್ಬಳ್ಳಿ ಜತೆಯಲ್ಲಿರುವರು. ರಂಗ ವಿಮರ್ಶಕರು ಹಾಗೂ ಸಂಗೀತ ನಿರ್ದೇಶಕರಾದ ರಾಮಚಂದ್ರ ಹಡಪದ ಮತ್ತು ನಾರಾಯಣ ರಾಯಚೂರ್ ರಾಗ ಸಂಯೋಜನೆ ಮಾಡಲಿದ್ದಾರೆ. ಗಾಯನ ರಾಮಚಂದ್ರ ಹಡಪದ ಹಾಗೂ ಸ್ಪರ್ಶ ಅವರಿಂದ.
ದಿನಾಂಕ: 12 ಮೇ 2014, ಸೋಮವಾರ, ಸಮಯ: ಸಂಜೆ 7ಕ್ಕೆ., ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ,ಬೆಂಗಳೂರು. ಟಿ
=

ಶ್ರದ್ಧಾ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು

ವಸುಧೇಂದ್ರ ಅವರ ಲಲಿತ ಪ್ರಬಂಧಗಳು ತಮ್ಮದೇ ವಿಶಿಷ್ಟ ಶೈಲಿ, ವಸರೆ, ವಸ್ತುಗಳಿಂದ ಜನಪ್ರಿಯವಾಗಿವೆ. ಪ್ರಬಂಧವೊಂದನ್ನು ನಾಟಕವಾಗಿಸುವ ಹೊಸ ಪ್ರಯತ್ನ ಶ್ಲಾಘನೀಯ. ತಾಯಿ ಮಕ್ಕಳ ಮನಸ್ಸಿಗೆ ಸದಾ ಹತ್ತಿರವಾದವಳು, ಗಂಡ ಹಾಗೂ ಮಕ್ಕಳು ಇಬ್ಬರಿಗೂ ಪ್ರೀತಿ ಹಂಚಿ ಸದಾ ಭಾವಗಳ ತಾಕಲಾಟದಲ್ಲಿ ತೊಳಲುವ ತಾಯಿಗೆ ಯಕಃಶ್ಚಿತ್ ಸ್ಟೀಲ್ ಪಾತ್ರೆಗಳ ಮೇಲಿರುವ ವ್ಯಾಮೋಹವೇ ಇಲ್ಲಿ 'ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು'. ಇದೇ ರಂಗರೂಪದ ಕಥಾವಸ್ತು. ಈ ರಂಗಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ನೋಡಿದಾಗ ಮಾತ್ರ. ರಂಗದ ಮೇಲೆ ಗಣೇಶ್ ಶೆಣೈ, ಪ್ರಾಚಿ ರವಿಚಂದ್ರ, ಕೀರ್ತಿಭಾನು, ಹರೀಶ್ ಸೋಮಯಾಜಿ. ಸಂಗೀತ-ಸತೀಶ್ ಕೆ.ಎಸ್., ಬೆಳಕು- ಸುನಿಲ್‌ಕುಮಾರ್, ನಿರ್ದೇಶನ- ಕಿರಣ್ ವಟಿ.
ದಿನಾಂಕ: 11.05.2014, ಸಂಜೆ 7.30ಕ್ಕೆ.
ಸ್ಥಳ: ಕೆ.ಎಚ್. ಕಲಾಕ್ಷೇತ್ರ, ಹನುಮಂತನಗರ.ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.