ಊಟದ ಮೋಡಿ
ನಮ್ಮ ರಾಜ್ಯದ ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ, ಅವರುಣ್ಣುವ ರಾಗಿ ಮುದ್ದೆ- ಬಸ್ಸಾರು ಎಲ್ಲರ ಆಕರ್ಷಣೆಯ ವಸ್ತುವಾಗಿತ್ತು. ಈಗ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.

ನಮ್ಮ ರಾಜ್ಯದ ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ, ಅವರುಣ್ಣುವ ರಾಗಿ ಮುದ್ದೆ- ಬಸ್ಸಾರು ಎಲ್ಲರ ಆಕರ್ಷಣೆಯ ವಸ್ತುವಾಗಿತ್ತು. ಈಗ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅವರ ಎನರ್ಜಿಯ ಮೂಲ ಯಾವುದು ಎಂಬುದು ಎಲ್ಲರಿಗೆ ಗೊತ್ತಾಗಬೇಕಾದ್ದೇ. ಮೋದಿ ಇಷ್ಟಪಡುವ ಪ್ರಮುಖ ಆಹಾರಗಳಿಲ್ಲಿವೆ. ಸಾಧ್ಯವಾದರೆ ನೀವೂ ಮನೆಯಲ್ಲಿ ಇವನ್ನು ಮಾಡಿ ನೋಡಿ ಸವಿಯಬಹುದು. ಅಥವಾ ಗುಜರಾತಿ ಫ್ರೆಂಡ್ ನಿಮಗಿದ್ದರೆ, ಅವರ ಮನೆ ಹೊಕ್ಕು ಮಾಡಿಸಿ ತಿಂದು ಖುಷಿಪಡಬಹುದು. ಅಹ್ಮದಾಬಾದ್ನ ಆಧಾರ್ ರೆಸ್ಟುರೆಂಟ್ನ ನಿರು ಗುಪ್ತಾ, ಮಂಜು ಮಲ್ಹಿ, ಅದಿತ್ಯಾ ಬಾಲ್ ಮೋದಿಗಾಗಿ ತಾವು ತಯಾರಿಸುವ ವಿಶೇಷವಾದ ಉತ್ಕೃಷ್ಟ ಮಟ್ಟದ ಸವಿಯಾದ ಖಾದ್ಯವನ್ನು ಪರಿಚಯಿಸಿದ್ದಾರೆ.
ಕಿಲ್ಲಿ ಹೂಯಿ ಕಿಚಡಿ
ಸಾಮಾನ್ಯವಾಗಿ ಭಾರತದ ಆರಾಮ ಆಹಾರ ಎಂದೇ ಕರೆಯಲ್ಪಡುವ ಆಹಾರ. ಶಾಸ್ತ್ರೀಯ ಖಾದ್ಯ ಎನ್ನಲು ಅಡ್ಡಿಯಿಲ್ಲ. ಎಲ್ಲರ ಮನೆಯಲ್ಲೂ ಮಾಡುವ ಖಾದ್ಯವಿದು.
ಬೇಕಾಗುವ ಪದಾರ್ಥಗಳು
-1 ಕಪ್ ಬಾಸ್ಮತಿ ಅಕ್ಕಿ
-ಕಾಲು ಕಪ್ ಅರ್ಹಾರ್ ದಾಲ್
-ಕಾಲು ಕಪ್ ಚನ್ನಾ ದಾಲ್
-ಕಾಲು ಕಪ್ ಮೂಂಗ್ ದಾಲ್
-2 ಟೇಬಲ್ ಸ್ಪೂನ್ ಪರೀಷ್ಕೃತ ಬೆಣ್ಣೆ
-1 ಟೀ ಸ್ಪೂನ್ ಜೀರಿಗೆ
-2 ಬೇ ಎಲೆ
-1 ಟೇಬಲ್ ಸ್ಪೂನ್ ಸಿಪ್ಪೆ ತೆಗೆದ ಶುಂಠಿ
-1 ಟೇಬಲ್ ಸ್ಪೂನ್ ಉಪ್ಪು
-ಅರ್ಧ ಟೀ ಸ್ಪೂನ್ ಗರಮ್ ಮಸಾಲಾ
-ಅರ್ಧ ಟೀ ಸ್ಪೂನ್ ಮೆಣಸಿನ ಹುಡಿ
-2-3 ಸೀಳಿದ ಹಸಿರು ಮೆಣಸು
ಮಾಡುವ ವಿಧಾನ
ಅಕ್ಕಿ ಮತ್ತು ದಾಲ್ಅನ್ನು ಅರ್ಧ ಗಂಟೆಗಳ ಕಾಲ ಬೇಯಿಸಿ. ಗಂಜಿ ಬೇರ್ಪಡಿಸಿ ಬೇರೆ ಪಾತ್ರೆಯಲ್ಲಿ ಹರವಿ ಇಡಿ. ಬಣಾಲೆಯಲ್ಲಿ ಬೆಣ್ಣೆ ಹಾಕಿ ಕಾಯಿಸಿ. ಅದಕ್ಕೆ ಜೀರಿಗೆ ಮತ್ತು ಬೇ ಎಲೆ ಸೇರಿಸಿ. ಜೀರಿಗೆ ಹುಡಿಯುವಷ್ಟು ಬಿಸಿಯಾದ ಮೇಲೆ ಶುಂಠಿಯನ್ನು ಹಾಕಿ. ಶುಂಠಿ ಕಂದು ಬಣ್ಣಕ್ಕೆ ತಿರುಗುವಷ್ಟು ಬಿಸಿಯಾಗಲಿ. ಬೇಯಿಸಿದ ಅಕ್ಕಿ ಮತ್ತು ದಾಲ್ ಅನ್ನು ಬಾಣಲೆಗೆ ಹಾಕಿ ತಿರುವಿ. ಉಪ್ಪು, ಗರಂ ಮಸಾಲಾ, ಮೆಣಸಿನ ಹುಡಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಶಾಖವನ್ನು ಹೆಚ್ಚು ಮಾಡಿ. ನೀರಿನ ಅಂಶ ಆರುವಲ್ಲಿಯವರೆಗೆ ಶಾಖ ನೀಡಿ. ಸೀಳಿದ ಹಸಿರು ಮೆಣಸನ್ನು ಸೇರಿಸಿ. ಮೂರುವರೆ ಕಪ್ ನೀರು ಹಾಕಿ ಕುದಿಸಿ. ಸಣ್ಣ ಫ್ಲೇಮ್ ಶಾಖದಲ್ಲಿ 15 ನಿಮಿಷಗಳ ಕಾಲ ಮುಚ್ಚಳ ಹಾಕಿ ಇಡಿ. ಕೊತ್ತಂಬರಿ ಸೊಪ್ಪನ್ನು ಹಾಕುವ ಮೂಲಕ ಅಲಂಕರಿಸಿ.
ಧೋಕ್ಲಾ
ಗುಜರಾತ್ನ ಸಾಂಪ್ರದಾಯಿಕ ಆಹಾರಗಳಲ್ಲಿ ಪ್ರಮುಖ. ಬಹಳ ಸುಲಭವಾಗಿ ತಯಾರಿಸಲ್ಪಡುವ ಖಾದ್ಯ. ತಿನ್ನಲು ಮೃದುವಾಗಿದ್ದು, ಸ್ಪೈಸಿಯಾಗಿದೆ. ಉಪಾಹಾರ ಸಂದರ್ಭದಲ್ಲಿ ಹೆಚ್ಚಿನ ಸೇವನೆಗೆ ಒಳಪಡುತ್ತದೆ.
ಬೇಕಾಗುವ ಸಾಮಾನು
-1 ಕಪ್ ಬೀಸನ್(Besan)
-1 ಟೀ ಸ್ಪೂನ್ ಶುಂಠಿ ಪೇಸ್ಟ್
-1 ಟೀ ಸ್ಪೂನ್ ಹಸಿರು ಮೆಣಸಿನ ಪೇಸ್ಟ್
-1 ಟೀ ಸ್ಪೂನ್ ಉಪ್ಪು ಮತ್ತು ಅರಿಶಿಣ
-1 ಟೀ ಸ್ಪೂನ್ ಸಕ್ಕರೆ
-1 ಟೇಬಲ್ ಸ್ಪೂನ್ ಎಣ್ಣೆ
-1 ಕಪ್ ಕೆನೆಗಟ್ಟಿದ ಮೊಸರು
-1 ಕಪ್ ನೀರು
-1 ಟೀ ಸ್ಪೂನ್ ಫ್ರ್ಯುಟ್ ಸಾಲ್ಟ್
ತಡ್ಕಾ ತಯಾರಿಸಲು
-1 ಟೀ ಸ್ಪೂನ್ ರಾಯ್
-4-5 ಖಾದಿ ಪಟ್ಟಾ
-2-3 ಸೀಳಿದ ಹಸಿರು ಮೆಣಸು
-1 ಟೇಬಲ್ ಸ್ಪೂನ್ ಎಣ್ಣೆ
ಮಾಡುವ ವಿಧಾನ
ಬೀಸನ್, ಶುಂಠಿ ಪೇಸ್ಟ್, ಹಸಿರು ಮೆಣಸಿನ ಪೇಸ್ಟ್, ಸಕ್ಕರೆಯೊಂದಿಗೆ ಮೊಸರು ಹಾಕಿ ಕಲೆಸಿ. ಮೃದು ಆಗುವ ವರೆಗೂ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ ಮತ್ತೋಮ್ಮೆ ಚೆನ್ನಾಗಿ ಕಲೆಸಿ. ಫ್ರ್ಯುಟ್ ಸಾಲ್ಟ್ ಹಾಕಿ ಮಿಶ್ರಮಾಡಿ. ತಕ್ಷಣ ಮೈಕ್ರೋವೇವ್ ಡಿಶ್ನಲ್ಲಿ ಹಾಕಿ ಮುಚ್ಚಳವನ್ನು ಬಂಧ್ ಮಾಡಿ 6-8 ನಿಮಿಷ ಬೇಯಿಸಿ. ತಡ್ಕಾ ತಯಾರಿಸಿಕೊಳ್ಳಲು ಎಣ್ಣೆಯನ್ನು ಬಿಸಿ ಮಾಡಿ. ರಾಯ್, ಖಾದಿ ಪಟ್ಟಾ, ಹಸಿರು ಮೆಣಸನ್ನು ಅದರೊಳಗೆ ಹಾಕಿ. ಅದನ್ನು ಮೋದಲು ಬೇಯಿಸಿ ಸಿದ್ಧಪಡಿಸಿದ ಮಿಶ್ರಣದ ಮೇಲೆ ಸುರಿಯಿರಿ. ಧನಿಯಾ ಮತ್ತು ತೆಂಗಿನ ತುರಿಯಿಂದ ಅಲಂಕಾರ ಮಾಡಿ.
ಖಾಂದ್ವಿ
ಉತ್ತಮವಾದ ಮತ್ತು ಸ್ವಾದಭರಿತ ಉಪಹಾರ. ಸಾಸಿವೆ ಮತ್ತು ಕರಿ ಬೇವು ಒಳಗೊಂಡಿರುವ ರುಚಿಕರವಾದ ಖಾದ್ಯ. ನಮ್ಮ ಅತ್ಯಂತ ಸ್ವಾದಿಷ್ಟ ಆಹಾರಗಳ ಪೈಕಿ ಖಾಂದ್ವಿ ಸೇರುತ್ತದೆ.
ಬೇಕಾಗುವ ಪದಾರ್ಥಗಳು
-1 ಕಪ್ ಬೀಸನ್(Besan)
-3 ಟೇಬಲ್ ಸ್ಪೂನ್ ಮೊಸರು.
-ರುಚಿಕೆ ತಕ್ಕಷ್ಟು ಉಪ್ಪು.
-1 ಟೇಬಲ್ ಸ್ಪೂನ್ ಅರಿಶಿಣ.
-1 ಟೇಬಲ್ ಸ್ಪೂನ್ ಮೆಣಸಿನ ಹುಡಿ.
-1 ಚಿಟಿಕೆ ಹಿಂಗ್.
-3 ಕಪ್ ನೀರು.
-ಬೆಣ್ಣೆ ಅಥವಾ ಎಣ್ಣೆ.
ಮಾಡುವ ವಿಧಾನ
ದೊಡ್ಡ ಪಾತ್ರೆಯಲ್ಲಿ ಬೀಸನ್, ಮೊಸರು, ಉಪ್ಪು, ಅರಿಶಿಣ, ಇಂಗು, ನೀರು ಹಾಕಿ ಚೆನ್ನಾಗಿ ಮಿಶ್ರಮಾಡಿ. ಸಮಪ್ರಮಾಣದ ಶಾಖದಲ್ಲಿ ಬಿಸಿ ಮಾಡಿ. ಕಲೆಸಿದ ಮಿಶ್ರಣ ದಪ್ಪವಾಗಿ ಸ್ಥಿರತೆ ಹೊಂದಿರುವಷ್ಟಾದಾಗ ಸ್ಟೌವನ್ನು ನಂದಿಸಿ. ತುಂಬ ದಪ್ಪಗಾದರೆ ಖಾಂದ್ವಿಯನ್ನು ಸುರುಳಿ ಸುತ್ತಲು ಆಗುವುದಿಲ್ಲ. 10 ನಿಮಿಷ ಆರಲು ಬಿಡಿ. ನಂತರ ಚಾಕುವಿನ ಸಹಾಯದಿಂದ ಕತ್ತರಿ ಸುರುಳಿ ಸುತ್ತಿ ಅಷ್ಟೇ! ಮಣೆ ಮತ್ತು ಲಟ್ಟಣಿಗೆಯ ಸಹಾಯದಿಂದ ಲಟ್ಟಿಸಿದರೆ ಸುರುಳಿ ಸುತ್ತಲು ಸುಲಭವಾಗುತ್ತದೆ. ಮಣೆಯ ಮೇಲೆ ಎಣ್ಣೆ, ಸಾಸಿವೆ, ಎಳ್ಳು, ಮೆಣಸಿನ ಹುಡಿ ಮತ್ತು ನೀರು ಹಾಕಿ ಅದರ ಮೇಲೆ ಖಾಂದ್ವಿಯ ಚಿಕ್ಕ ತುಂಡನ್ನು ಇರಿಸಿ ಲಟ್ಟಿಸಿ. ಕೊತ್ತಂಬರಿ ಎಲೆ ಮತ್ತು ಮೆಣಸಿನ ಪುಡಿಯಿಂದ ಅಲಂಕರಿಸಬಹುದು.
ಮಾವಿನ ಚಟ್ನಿ
ಅದ್ಭುತ ತಿರುಳುಳ್ಳ ಮಾವಿನಿಂದ ತಯಾರಿಸಿದ ಚಟ್ನಿ ಸಿಹಿಯಾಗಿದ್ದು ಸ್ಪೈಸಿಯಾಗಿರುತ್ತದೆ.
ಅಗತ್ಯ ವಸ್ತುಗಳು
-3 ಟೇಬಲ್ ಸ್ಪೂನ್ ತೆಂಗಿನಕಾಯಿ ಎಣ್ಣೆ ಅಥವಾ ತರಕಾರಿ ತೈಲ
-ಒಂದು ದೊಡ್ಡ ಸಿಪ್ಪೆ ಸುಲಿದ ಮಾಗಿದ ಮಾವು. ಬೀಜದಿಂದ ಬೇರ್ಪಡಿಸಿ ಚೆನ್ನಾಗಿ ಕೊಚ್ಚಿದಂತಿರಲಿ.
-ಅರ್ಧ ಟೇಬಲ್ ಸ್ಪೂನ್ ಮೆಣಸಿನ ಹುಡಿ.
-2 ಟೇಬಲ್ ಸ್ಪೂನ್ ಸಕ್ಕರೆ.
-1 ಟೇಬಲ್ ಸ್ಪೂನ್ ಮಾಲ್ಟ್ ವಿನೇಗರ್.
-ಸಿಪ್ಪೆ ಸುಲಿದ ತಾಜಾತನದ ಶುಂಠಿಯ ಸಣ್ಣ ತುಂಡು.
ಮಾಡುವ ವಿಧಾನ
ಮೊದಲಿಗೆ ಬಣಲೆಯಲ್ಲಿ ಎಣ್ಣೆ ಹಾಕಿ ಸಣ್ಣ ಮಟ್ಟಿನ ಶಾಖದೊಂದಿಗೆ ಬಿಸಿ ಮಾಡಿ. ಮಾವು, ಮಾಲ್ಟ್ ವಿನೇಗರ್, ಶುಂಠಿ, ಮೆಣಸಿನ ಹುಡಿ, ಸಕ್ಕರೆ ಎಲ್ಲವನ್ನೂ ಹಾಕಿ. ಎಲ್ಲವನ್ನೂ ಚಮಚದ ಮೂಲಕ ಚೆನ್ನಾಗಿ ಮಿಶ್ರಮಾಡಿ. 15 ನಿಮಿಷಗಳ ಕಾಲ ಅಥವಾ ಮಾವು ಮೃದುವಾಗುವವರೆಗೂ ಮಿಶ್ರ ಮಾಡುತ್ತಿರಿ. ಮಾವಿನ ಚಟ್ನಿ ಆರಿದ ನಂತರ ಗಾಳಿಯಾಡದ ಬಾಕ್ಸ್ನಲ್ಲಿ ಇರಿಸಿ. ಬಾಕ್ಸ್ಅನ್ನು ಫ್ರಿಜ್ನಲ್ಲಿ ಎರಡು ವಾರಗಳ ಕಾಲ ಇಡಿ.
ಆಲ್ಮೋಂಡ್ ಮತ್ತು ಪಿಸ್ತಾಚಿಯೋ ಶ್ರೀಖಂಡ್
ಭಾರತದ ಸಿಹಿಯಾದ ಕಸ್ಟರ್ಡ್ ಎಂದೂ ಕರೆಯಲ್ಪಡುವ ಖಾದ್ಯ. ಬಾಯಿಯೊಳಗೆ ಬಹುಬೇಗನೆ ಸುಲಭವಾಗಿ ಕರಗುತ್ತದೆ. ಮೇಲ್ಭಾಗದಲ್ಲಿ ಇರುವ ಕುರುಕುಲಾದ ಬಾದಾಮಿ ಮತ್ತು ಪಿಸ್ತಾ ಸವಿಯನ್ನುಂಟು ಮಾಡುತ್ತದೆ.
ಅಗತ್ಯ ವಸ್ತುಗಳು
ಅರ್ಧ ಲೀಟರ್ ಹಾಲು, ಒಂದು ಚಿಟಿಕೆ ಕೇಸರಿ, 500 ಗ್ರಾಂ ಕೆನೆಗಟ್ಟಿದ ಹೆಸರು. ಒಂದುವರೆ ಸ್ಪೂನ್ ಸಕ್ಕರೆ, 25 ಗ್ರಾಂ ಪಿಸ್ತಾ ಮತ್ತು 25 ಗ್ರಾಂ ಬಾದಾಮಿ.
ಮಾಡುವ ವಿಧಾನ
ಬಾಣಲೆಯಲ್ಲಿ ಕೇಸರಿ ಮತ್ತು ಹಾಲನ್ನು ಮಿಶ್ರಮಾಡಿ ಕುದಿಸಿ. ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ ಮತ್ತು ಅರ್ಧದಷ್ಟು ಆಗಷ್ಟೇ ಬಿಸಿ ಮಾಡಿದ ಹಾಲನ್ನು ಹಾಕಿ ಸ್ಪೂನ್ ಮೂಲಕ ಚೆನ್ನಾಗಿ ಕದಡಿ. ನಂತರ ಉಳಿದ ಹಾಲನ್ನು ಹಾಕಿ. ಮೇಲಿನ ಸಿಪ್ಪೆ ತೆಗೆದ ಪಿಸ್ತಾ ಮತ್ತು ಬಾದಾಮಿಯನ್ನು ಮಿಶ್ರಣದ ಜೊತೆಗೆ ಸೇರಿಸಿ. ಫ್ರಿಜ್ನಲ್ಲಿ 4-5 ಗಂಟೆ ಇಡಿ. ನಂತರ ಬಡಿಸಿ.
-ಮಂಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


