ಕ್ಷಮೆ ಎಂಬ ಮಿಂಚು

ನಾವು ಬಾಯಿ ತಪ್ಪಿ ಆಡಿದ ಮಾತು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸುತ್ತದೆ. ನಮ್ಮ ಯಾವುದೋ ಕೃತ್ಯ ಇನ್ನೊಬ್ಬರ ಬಗೆಗಿನ ಇಮೇಜನ್ನು ಶಾಶ್ವತವಾಗಿ ಹಾಳುಗೆಡವಿ ಅವರು ಕೊರಗುವಂತೆ ಮಾಡುತ್ತದೆ. ನಾವೇ ಮಾಡಿಕೊಂಡ ಪ್ರಮಾದ ನಮ್ಮ ಬಗೆಗಿದ್ದ ಒಳ್ಳೆಯ ಭಾವನೆಗಳನ್ನೆಲ್ಲ ಗುಡಿಸಿಹಾಕುತ್ತದೆ. ಕೈತಪ್ಪಿ ಹೊಡೆದ ಒಂದು ಏಟು, ಸುಮಧುರವಾದ ಒಂದು ಸಂಬಂಧವನ್ನೇ ಶಾಶ್ವತವಾಗಿ ಹಾಳುಗೆಡವುತ್ತದೆ. ಇವೆಲ್ಲ ಒಂದು ಕ್ಷಣದ ಉದ್ರಿಕ್ತತೆ, ರೋಷ, ಪ್ರಮಾದಗಳಿಂದ ಸಂಭವಿಸಿದ ಅನಾಹುತಗಳು. ಮಿಂಚಿ ಹೋದ ಮೇಲೆ ನಮಗೆ ಪಶ್ಚಾತ್ತಾಪವಾಗುತ್ತದೆ. ಆದರೆ ಬದುಕಿನಲ್ಲಿ ಮರಳಿ ಹೋಗುವ ಆಯ್ಕೆ ಇಲ್ಲ. ಆದರೆ ಅಂಥ ಒಂದು ಸಾಧ್ಯತೆ ಇದ್ದೇ ಇದೆ. ಯಾವುದು ಗೊತ್ತೆ? ಕ್ಷಮೆ ಎಂದು ಅದಕ್ಕೆ ಹೆಸರು. ನೀವೇ ತಪ್ಪು ಮಾಡಿದವರಾಗಿದ್ದರೆ, ನೀವು ಯಾರಿಗೆ ಸಂಬಂಧಿಸಿ ತಪ್ಪು ಮಾಡಿದ್ದೀರೋ ಅವರ ಕ್ಷಮೆ ಕೇಳಿ. ಈ ಕ್ಷಮಾಯಾಚನೆ ಪ್ರಾಂಜಲವಾಗಿರಲಿ. ಅದರಲ್ಲಿ ಕೊಂಕು ಇತ್ಯಾದಿಗಳಿಲ್ಲದಿರಲಿ. ನಿಮ್ಮೆದುರಿಗಿರುವವರೂ ನಿರ್ಮಲ ಮನಸ್ಸಿನವರಾದರೆ ಸಂಬಂಧ ಮೊದಲಿನಂತಾದೀತು. ಇನ್ನು ನಿಮ್ಮ ವಿಚಾರದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ, ಆ ತಪ್ಪಿನ ಗಂಭೀರತೆಯನ್ನನುಸರಿಸಿ ಅದನ್ನು ಕ್ಷಮಿಸುವುದೋ ನಿರ್ಲಕ್ಷಿಸುವುದೋ ತೀರ್ಮಾನಿಸಿ. ಈ ಸಂಬಂಧ, ಈ ತಪ್ಪನ್ನು ಕಡೆಗಣಿಸಿಯೂ ಮುಂದುವರಿಸುವಷ್ಟು ಮೌಲ್ಯಯುತ ಎನಿಸಿದರೆ ಹಾಗೆಯೇ ಮಾಡಿ. ಕನಿಷ್ಠ ಪಕ್ಷ ಒಳ್ಳೆಯ ಸಂಬಂಧ ಉಳಿಯುತ್ತದೆ.
ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


