ಯಕ್ಷ ಮುಂಗಾರು
ಬಡಗುತಿಟ್ಟಿನ ಹೆಸರಾಂತ ದಿಗ್ಗಜರು ಹಾಗೂ ಹೊಸಪ್ರತಿಭೆಗಳೊಂದಿಗೆ, ಶ್ರೀ ಭಾರತೀತೀರ್ಥ ಕಲ್ಚರಲ್(ರಿ) ದಶಮಾನೋತ್ಸವದ ...
ಬಡಗುತಿಟ್ಟಿನ ಹೆಸರಾಂತ ದಿಗ್ಗಜರು ಹಾಗೂ ಹೊಸಪ್ರತಿಭೆಗಳೊಂದಿಗೆ, ಶ್ರೀ ಭಾರತೀತೀರ್ಥ ಕಲ್ಚರಲ್(ರಿ) ದಶಮಾನೋತ್ಸವದ ಸಹಾಯಾರ್ಥ ದಿನಾಂಕ 31-05- 2014ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 3 ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿವೆ. ಲವ-ಕುಶ, ಕಾರ್ತವೀರ್ಯಾರ್ಜುನ ಹಾಗೂ ವಿಶ್ವಾಮಿತ್ರ ಮೇನಕೆ. ಲವ-ಕುಶದ ರಾಮನಾಗಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಸುಬ್ರಹ್ಮಣ್ಯ ಚಿಟ್ಟಾಣಿ ಶತ್ರುಘ್ನ, ಕಣ್ಣಿಮನೆ ಹಾಗೂ ಕಾರ್ತಿಕ್ ಚಿಟ್ಟಾಣಿ ಲವ-ಕುಶ, ಕ್ಯಾದಗಿ ಮಹಾಬಲೇಶ್ವರ ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾಗವತಿಗೆ ವಿದ್ವಾನ್ ಗಣಪತಿ ಭಟ್ ಅವರದು. ಬನ್ನೂರು ಶಂಕರ ಭಟ್ ಗಾನಸುಧೆಯಲ್ಲಿ ಕಾರ್ತವೀರ್ಯಾರ್ಜುನ. ಗೋಡೆ ನಾರಾಯಣ ಹೆಗಡೆ ರಾವಣನ ಪಾತ್ರದಲ್ಲಿ, ಕಲಗದ್ದೆ ವಿನಾಯಕ ಕಾರ್ತವೀರ್ಯನ ಪಾತ್ರದಲ್ಲಿ, ಕ್ಯಾದಗಿ ಜೋಡಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ವಿಶ್ವಾಮಿತ್ರ ಮೇನಕೆ'ಯಲ್ಲಿ. ಮಲ್ಪೆ ವಾಸುದೇವ ಸಾಮಗ ವಿಶ್ವಾಮಿತ್ರ, ಪ್ರದೀಪ ಸಾಮಗ ಮೇನಕೆ, ಐನ್ಬೈಲ್ ರವೀಶ ಹೆಗಡೆ ಮನ್ಮಥ, ಬೇಗಾರ್ ಶಿವಕುಮಾರ್ ನಾರದ. ಹೆಬ್ರಿ ಗಣೇಶ್ ಕುಮಾರ್ ಗಾಯನ.
ಹಿಮ್ಮೇಳದಲ್ಲಿ ಶಂಕರ ಭಾಗವತ, ಕೆಸರಕೊಪ್ಪ, ಯಲ್ಲಾಪುರ, ಕಾಡೂರು ಭಾಗವಹಿಸಲಿದ್ದಾರೆ. ವಿವರಗಳಿಗೆ ರಮೇಶ್ ಬೇಗಾರ್ 9448101708 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

