ಬೆರಿಹಣ್ಣು ಮೆದುಳಿಗೆ ಬಹು ಉಪಕಾರಿ

ಮೆದುಳಿನ ಆರೋಗ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡುವಲ್ಲಿ ತರಕಾರಿ ಮತ್ತು ಹಣ್ಣುಗಳ ಪಾತ್ರ ಮಹತ್ವದ್ದು. ಸಂಶೋಧನೆಗಳೂ ಹೆಚ್ಚಿನ ತರಕಾರಿ ಮತ್ತು ಹಣ್ಣುಗಳನ್ನು ಸಮರ್ಪಕವಾಗಿ ಬಳಸಿದರೆ ಮೆದುಳು ಹೆಚ್ಚಿನ ಲವಲವಿಕೆಯಿಂದ ಕೆಲಸ ಮಾಡುತ್ತದೆ ಎಂದಿವೆ. ದಿನನಿತ್ಯವೂ ತರಕಾರಿ ಹಣ್ಣಿನ ನಿಯಮಿತ ಸೇವನೆ ರೂಢಿಸಿಕೊಂಡರೆ ಟೆನ್ಶನ್ ಪಡಬೇಕಾದ ಅಗತ್ಯವಿಲ್ಲ. ಜತೆಗೆ ಮೀನಿನ ಸೇವನೆಯೂ ಮೆದುಳಿನ ಆರೋಗ್ಯಕ್ಕೆ ಹಿತಕಾರಿ. ಮೀನಿನ ಸೇವನೆಯಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಮೆದುಳಿನ ಆರೋಗ್ಯಕ್ಕೆ ಮೀನಿನಿಂದ ಸಿಗುವ ವಿಟಮಿನ್ಸ್ ಬಹು ಉಪಯೋಗಕಾರಿ. ಸಾಲ್ಮೂನ್ ಮೀನು ಸೇವನೆ ಮೆದುಳಿಗೆ ಚೇತೋಹಾರಿ.
ಬೆರಿಹಣ್ಣು ಸೇವನೆಯಿಂದ ಆಕ್ಸಿಡೇಟಿವ್ ಒತ್ತಡ ನಿವಾರಣೆ ಆಗುತ್ತದೆ. ವಯಸ್ಸಿಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಿಸುವಲ್ಲೂ ಬೆರಿಹಣ್ಣುಗಳು ಫಲಕಾರಿ. ಆಲ್ಜೈಮರ್ಸ್ ಕಾಯಿಲೆ ಅಥವಾ ಬುದ್ಧಿಮಾಂದ್ಯತೆಯಂತಹ ತೊಡಕುಗಳು ಬಾರದಂತೆ ತಡೆಯುವಲ್ಲಿ ಬೆರಿಹಣ್ಣು ಸಹಕರಿಸುತ್ತದೆ. ಪ್ರಯೋಗಾತ್ಮಕವಾಗಿ ಬೆರಿ ಹಣ್ಣುಗಳು ಮೆದುಳಿಗೆ ಪ್ರಯೋಜನಕಾರಿ ಎಂಬುದು ತಿಳಿದುಬಂದಿದೆ. ನಿಯಮಿತವಾಗಿ ಇಲಿಗಳಿಗೆ ಬೆರಿಹಣ್ಣಿನ ಪೋಷಕಾಂಶಗಳನ್ನು ದಿನವೂ ಇಂಜೆಕ್ಟ್ ಮಾಡಲಾಗಿತ್ತು. ಸ್ವಲ್ಪ ದಿನಗಳಲ್ಲಿ ಅವು ಮೊದಲಿಗಿಂತ ಹೆಚ್ಚಿನ ಲವಲವಿಕೆಯಿಂದ ಓಡಾಡುವುದು ಕಂಡುಬಂತು. ಅವುಗಳ ಚಟುವಟಿಯಲ್ಲಿ ಅತ್ಯಂತ ಹೆಚ್ಚಿನ ಕ್ರಿಯಾಶೀಲತೆ ಕೂಡಿರುವುದು ಕಂಡುಬಂತು. ಇದರ ಆಧಾರದಲ್ಲಿ ಬೆರಿಹಣ್ಣುಗಳು ಆರೋಗ್ಯ ಕಾಪಾಡಿಕೊಳ್ಳಲು ಬಹು ಉಪಕಾರಿ ಎಂಬ ಗುಟ್ಟನ್ನು ಅರಿತುಕೊಳ್ಳಲು ಸಹಕಾರಿ ಆಯಿತು. ಧಾನ್ಯಗಳು ವಿಟಮಿನ್ 'ಇ' ಒದಗಿಸುವಲ್ಲಿ ಪರಿಣಾಮಕಾರಿ. ವಿಟಮಿನ್ 'ಇ' ಅಂಶ ವಯಸ್ಸಾಗುವುದನ್ನು ಕಡಿಮೆ ಮಾಡುತ್ತದೆ. ವಾಸ್ತವದಲ್ಲಿ ವಯಸ್ಸಾದರೂ ಚಿಕ್ಕ ವಯಸ್ಸಿನವರಂತಿರಲು ಸಹಕಾರಿ. ವಾಲ್ನಟ್, ಹಾಜಲ್ ನಟ್, ಬ್ರೆಜಿಲ್ ನಟ್, ಫಿಲ್‌ಬರ್ಟ್ಸ್, ಬಾದಾಮಿ, ಗೋಡಂಬಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ, ಎಳ್ಳಿನ ಬೀಜ, ಅಗಸೆ ಬೀಜಗಳಲ್ಲಿ ವಿಟಮಿನ್ 'ಇ' ಹೇರಳವಾಗಿರುತ್ತದೆ. ಕಡಲೇಕಾಯಿ ಬೆಣ್ಣೆ, ಬಾದಾಮಿ ಬೆಣ್ಣೆ, ತಾಹಿನಿ ಇತ್ಯಾದಿಗಳಲ್ಲಿ ಹೇರಳವಾಗಿ ವಿಟಮಿನ್ 'ಇ' ಇರುತ್ತದೆ. ಇವುಗಳ ಸೇವನೆ ದೇಹಾರೋಗ್ಯಕ್ಕೆ ಪುಷ್ಠಿ ನೀಡುತ್ತವೆ. ಓಟ್ ಮೀಲ್, ಧಾನ್ಯದ ಬ್ರೆಡ್ ಸೇವನೆಯೂ ಉತ್ತಮ. ಮೆದುಳಿಗೆ ಬೇಕಾದ ವಿಟಮಿನ್ ಒದಗಿಸುವುದರಿಂದ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಮೆದುಳಿಗೆ ಆಯಾಸವಾಗುವುದು ಕಡಿಮೆ ಆಗುತ್ತದೆ. ದಿನದಲ್ಲಿ 2 ಟೇಬಲ್ ಸ್ಪೂನ್ ಗೋಧಿ ಸೇವನೆ ಹಿತಕಾರಿ. ಧಾನ್ಯಗಳ ಸೇವನೆಯಿಂದ ರಕ್ತದ ಪರಿಚಲನೆ ಸರಾಗವಾಗುತ್ತದೆ. ಇದರಿಂದ ಮೆದುಳಿಗೆ ಬೇಕಾದ ಪೋಷಕಾಂಶಗಳು ಬಹುಬೇಗನೆ ತಲುಪುತ್ತವೆ. ದೇಹದ ಎಲ್ಲ ಅಂಗಾಂಗಗಳಲ್ಲೂ ರಕ್ತ ಪರಿಚಲನೆ ಸರಾಗವಾದಾಗ ಮೆದುಳಿನ ಸಂದೇಶಗಳು ತ್ವರಿತಗತಿಯಲ್ಲಿ ತಲುಪುತ್ತವೆ. ಸದಾ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


