ಬೈಟುಕಾಫಿ

ಸ್ವರಾಗ ಸಂಜೆ

ಸ್ವರಾಗ ಸಂಜೆ
Published On :

ಪ್ರದರ್ಶನ ಕಲಾ ಸಂಸ್ಥೆ, 'ಪ್ರಕಸಂ' ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗೂ ನಿರ್ವಹಣೆಯ ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬೆಂಗಳೂರಿನ ಸಹೃದಯಿ ನಾಗರಿಕರರಿಗೆ ಪ್ರಸ್ತುತ ಪಡಿಸಿದೆ. ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುತ್ತ ಬಂದಿದೆ. ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿದ್ದಾರೆ. ಸಂಸ್ಥೆ 2010ರಿಂದ ಇದುವರೆಗೆ ಸುಮಾರು 1000ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ಏರ್ಪಡಿಸಿದೆ.
ಸ್ವರಾಗ ಸಂಜೆ: ಪ್ರಕಸಂ ಮತ್ತೆ ಬೆಂಗಳೂರಿಗರನ್ನು ರಂಜಿಸಲು ಸಿದ್ಧವಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರದ ಸಂಜೆ, ಕೆ.ಎಚ್. ಕಲಾಸೌಧದ ಅಂಗಳದಲ್ಲಿ, ರಾಮಾಂಜನೇಯ ಗುಡ್ಡದ ಉದ್ಯಾನವನದ ಆವರಣದಲ್ಲಿ  ಸ್ವರಾಗ ಸಂಜೆ ನಡೆಯಲಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮದಲ್ಲಿ ಕನ್ನಡದ ಹೆಗ್ಗಳಿಕೆಯ, ಹೆಮ್ಮೆಯ ಕವಿಗಳು, ಸಂಗೀತಗಾರರ ಬಗೆಗಿನ ಹಲವು ವಿಚಾರಗಳನ್ನ ತಿಳಿಸಿ ಅವರ ಕವನಗಳನ್ನ, ಸಂಯೋಜನೆಗಳನ್ನ ಜನರಿಗೆ ಕೇಳಿಸುವುದೇ ಸಂಸ್ಥೆಯ ಉದ್ದೇಶ.
ರಾಷ್ಟ್ರಕವಿ ಕುವೆಂಪುರವರ ಕಾವ್ಯಗಳನ್ನು ಪ್ರಸ್ತುತಪಡಿಸುವ ಸಂಗೀತಗಾರರು- ರಂಜಿತ, ಮಾಳವಿಕ, ಅಪೂರ್ವ, ಅಲೋಕ್ ಹಾಗೂ ಅತಿಥಿ ಗಾಯಕಿ ರೋಹಿಣಿ ರಘುನಂದನ್. ವಾದ್ಯವೃಂದದಲ್ಲಿ ಅಕ್ಷಯ್ ಭೋಸ್ಲೆ - ತಬಲಾ, ಆರ್ಪಿತ್ ಭೋಸ್ಲೆ - ರಿದಮ್ ಪ್ಯಾಡ್ಸ್, ಕವನಾ ಹೆಗಡೆ - ಕೀಬೋರ್ಡ್. ಕವಿ ಕಾವ್ಯ ವಿಚಾರಗಳನ್ನು ತಿಳಿಸುವವರು ಸಂತೋಷ್ ಕರ್ಕಿ.
ದಿನಾಂಕ ಮತ್ತು ಸಮಯ  ಜೂನ್ 1 ಭಾನುವಾರ, ಸಂಜೆ 4.
ಸ್ಥಳ:  ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ, ಬೆಂಗಳೂರು.ಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.