ಹೆಂಡ್ತಿಯನ್ನು ಹೆದರಿಸಲು ಇರೋದು ಒಂದೇ ದಾರಿ, ಮುಂದಿನ ಜನ್ಮದಲ್ಲಿ ಜಿರಳೆ ಆಗಿ ಹುಟ್ಟೋದು.
ಲೇಡಿ ಡೆಂಟಿಸ್ಟ್ ಬಳಿ ಯಾಕೆ ಹೋಗ್ಬೇಕು ಅಂದ್ರೆ ಅವರೆಂದೂ 'ಬಾಯಿ ಮುಚ್ಚಿ' ಅಂತ ಹೇಳೋದೇ ಇಲ್ಲ.
ನೀವು ಸಮಸ್ಯೆಗಳಿಂದ ದೂರ ಸರಿಯುವವರೇ ಆದರೆ ಹೆಂಡತಿಯ ಬಳಿ ಒಂದು ಸೆಕೆಂಡೂ ಇರುವುದಿಲ್ಲ.
ವೈನ್ಶಾಪ್ ಅನ್ನು ಡ್ಯಾನ್ಸ್ ಕ್ಲಾಸ್ ಅಂತಲೂ ಕರೆಯಬಹುದು.
ನೀವು ಇನ್ನೊಬ್ಬರನ್ನು ಕನ್ವಿನ್ಸ್ ಮಾಡಲಾಗದಿದ್ದರೆ, ಕಡೇಪಕ್ಷ ಕನ್ಫ್ಯೂಸ್ ಆದ್ರೂ ಮಾಡಿ.
ಬಸ್ ಸ್ಟಾಪ್ ಆಗುವ ಸ್ಥಳ ಬಸ್ ಸ್ಟೇಶನ್. ಕೆಲಸ ಸ್ಟಾಪ್ ಆಗದ ಸ್ಥಳ ವರ್ಕ್ಸ್ಟೇಶನ್.
ಒಂದು ಮಗು ಹುಟ್ಟಿದರೆ ನೀವು ಪೋಷಕರು. ಎರಡು ಮಗು ಹುಟ್ಟಿದರೆ ನಿರಾಶ್ರಿತರು.
ಮಹಿಳೆ ಮೊದಲು. ಸುಂದರ ಮಹಿಳೆ ಅತಿಮೊದಲು.