ಬ್ರೋಕರ್: ಬಂಡವಾಳವಿಲ್ಲದೆ ಹಣ ಗಳಿಸುವವ.
ಅಪ್ಪು'ಗೆ': ಸಲಿಂಗಕಾಮಿಗಳು ತಬ್ಬಿಕೊಂಡಾಗ ಹುಟ್ಟಿದ ಪದ.
ಕ್ರಿಕೆಟ್: ಧಾರಾವಾಹಿಯನ್ನು ನೋಡಲು ಅಡ್ಡಿಬರುವ ಆಟ.
ಸಗಣಿ: ಯಾವ ಗಣಿಯಲ್ಲೂ ಸಿಗದ ಅಮೂಲ್ಯ ವಸ್ತು.
ಜಗಳ: ಜಗತ್ತಿಗೇ ಕೇಳಿಸುವಂತೆ ಮೈಮೇಲೆರಗಿ ಕೂಗಾಡುವುದು.
ತೀರ್ಥ: ದೇವಸ್ಥಾನದಲ್ಲಿ ಸಿಗುತ್ತದೆ. ವೈನ್ಶಾಪ್ನಲ್ಲೂ ಸಿಗುತ್ತದೆ.
ಟ್ವೀಟ್: ಒಬ್ಬರು ಟೈಪಿಸಿದ್ದನ್ನು ಸಾವಿರ ಮಂದಿ ನೋಡುವುದು.
ಕೆರೆ: ಹೂಳೆತ್ತದ, ನೀರೇ ಇಲ್ಲದ ವಿಸ್ತಾರ ಗುಂಡಿ.
ಪಕ್ಷ- ಮಾಸ: ತಿಂಗಳಿಗೊಂದು ಪಕ್ಷ ಕಟ್ಟುವುದು.
ವೋಟು: ರಾಜಕಾರಣದಲ್ಲಿ ಇದು ಬೇಕು, 'ಬಿಗ್ಬಾಸ್'ನಲ್ಲಿ ಇದು ಬೇಡ.