ಹುಡುಗಿ ಬಳಿ ಅಸಂಖ್ಯಾತ 'ಕರ್ವ್'ಗಳಿವೆ, ಹುಡುಗನಲ್ಲಿ ಬ್ರೇಕ್ ಇಲ್ಲ.
ಫೇಸ್ಬುಕ್ ಒಂಥರ ಫ್ರಿಡ್ಜ್ ರೀತಿ. ಏನಾದ್ರೂ ಒಳ್ಳೇದು ಇದ್ಯಾ ಅಂತ ಪದೇಪದೇ ಓಪನ್ ಮಾಡಿ ನೋಡ್ತಿರ್ತೀವಿ.
ನೂರಾರು ಪುಸ್ತಕಗಳು ಹೇಳುವ ಫಿಲೋಸಫಿ ಒಂದು ಬಾಟಲಿ ರಮ್ನಲ್ಲಿದೆ.
ಒಂದು ಹೆಂಡ್ತಿಯೊಂದಿಗೆ ಬದುಕೋದು ಪಾರ್ಟ್ ಆಫ್ ಲಿವಿಂಗ್, ಒಂದು ಹೆಂಡ್ತಿ- ಒಬ್ಬಳು ಗರ್ಲ್ಫ್ರೆಂಡ್ ಜತೆ ಬದುಕೋದು ಆರ್ಟ್ ಆಫ್ ಲಿವಿಂಗ್.
ನೀವು ಲೈಫಲ್ಲಿ ದಾರಿ ತಪ್ಪಿದ್ದರೆ, ಅಲ್ಲೇ ಸಮೀಪದ ಆಟೋದವರನ್ನು ಕೇಳಿ.
ಎಲ್ಲ ಕೆಲಸವನ್ನು ಶೇ.100ರಷ್ಟು ಸಂಪೂರ್ಣವಾಗಿ ಮಾಡುವುದಾದರೆ ನೀವು ರಕ್ತದಾನದಲ್ಲಿ ಪಾಲ್ಗೊಳ್ಳಬಹುದು.
ಈ ಕಥೆ- ಕಾದಂಬರಿಗಳಿಂದಾಗಿ ನಿದ್ರೆಮಾತ್ರೆ ಮಾರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.
ಗಂಡ- ಹೆಂಡ್ತಿ ಅಂದ್ರೆ ಲಿವರ್- ಕಿಡ್ನಿ ಇದ್ದಂಗೆ. ಕಿಡ್ನಿ ಹೋದ್ರೂ ಮತ್ತೊಂದು ಕಿಡ್ನಿ ಸಿಕ್ಕೇ ಸಿಗುತ್ತೆ.