ಸಾಪ್ತಾಹಿಕಪ್ರಭ

ಅದು ಪಾಪಿಸ್ತಾನ

ಅದು ಪಾಪಿಸ್ತಾನ
Published On :

ಅವರಿಗೆ ಆ ಬಗ್ಗೆ ಯಾವ ಗೊಂದಲ - ಹಿಂಜರಿಕೆ - ಅನುಮಾನಗಳೂ ಇಲ್ಲ. ಅವರು ಕದನ ವಿರಾಮವನ್ನು ಉಲ್ಲಂಘಿಸಿ ಯೋಧರ ತಲೆಕಡಿಯುತ್ತಾರೆ, ಕೊಂದು ಗಹಗಹಿಸುತ್ತಾರೆ, ಜಗತ್ತೇ ತಮ್ಮದೆನ್ನುತ್ತಾರೆ, ಕೊಲ್ಲುವುದು ಖುದಾನ ಪರವಾದ ಕೆಲಸವೆಂದು ಬೀಗುತ್ತಾರೆ. ಏಕೆಂದರೆ ತಮ್ಮೆಲ್ಲಾ ಪಾತಕಗಳನ್ನು ಅವರು ಶಬ್ದವೊಂದರ ಮೂಲಕ ಸಂಭಾವಿತಗೊಳಿಸಿಬಿಡುತ್ತಾರೆ.
'ಧರ್ಮ ಯುದ್ಧ!'
ತನ್ನ ನಂಬಿಕೆಯನ್ನು ಸಮಸ್ತರ ಮೇಲೆ ಹೇರುವುದು, ರಕ್ತಪಾತ - ಅರಾಜಕತೆಯ ಸೃಷ್ಟಿಯೇ ದೇವರನ್ನು ಸಂಪ್ರೀತಗೊಳಿಸುವ ಮಾರ್ಗವೆಂದುಕೊಳ್ಳುವುದು, ಭೂಮಿ ಮತ್ತು ಹೆಣ್ಣು ಇರುವುದೇ ಬಲವಂತದ ಭೋಗಕ್ಕೆ ಎಂದು ಸಂಭ್ರಮಿಸುವುದು... ಇವೆಲ್ಲವೂ ಅವರ 'ಧರ್ಮ ಮಾರ್ಗ'.
ಆದರೆ... ಈ ಆಕ್ರಮಣವನ್ನು ಎದುರಿಸುವ ಜಾಗದಲ್ಲಿರುವವರಿಗೆ ಮಾತ್ರ ಲಾಗಾಯ್ತಿನಿಂದಲೂ ಗೊಂದಲಗಳು ಮುಗಿದದ್ದೇ ಇಲ್ಲ. ಇವರು ಸಹಿಷ್ಣುತೆ- ನಿಯಮಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಾ ಶಸ್ತ್ರ ಎತ್ತಲೋ- ಬಿಡಲೋ ಎಂಬ ಮುಗಿಯದ ಜಿಜ್ಞಾಸೆಯಲ್ಲಿರುವವರು. ಕಬಳಿಸುವುದು ಮತ್ತು ಕೊಲ್ಲುವುದೇ ತಮ್ಮ ಧರ್ಮ ಎನ್ನುವವರನ್ನು ಎದುರಿಸುವುದೋ ಬಿಡುವುದೋ ಎಂಬ ಧರ್ಮ ಸೂಕ್ತದ ಲೆಕ್ಕಾಚಾರದಲ್ಲೇ ದಿನ ಕಳೆಯುತ್ತಾರಿವರು.
ಹೌದು, ಇದು ಭಾರತ - ಪಾಕಿಸ್ತಾನಗಳ ಕತೆ. ಅಷ್ಟೇ ಅಲ್ಲ, ಪರಂಪರೆಯ ಸ್ಮ ೃತಿಯುದ್ದಕ್ಕೂ ನಡೆದುಬಂದ ಸುರ - ಅಸುರರ ನಡುವಿನ ಸಂಘರ್ಷದ ಸಾರ. ದಾಯಾದಿಗಳ ಕಲಹದಲ್ಲಿ ಯಾರು ಸರಿ, ಎಂಬ ಪ್ರಶ್ನೆಗೆ ಸಿಕ್ಕ ವಿಸ್ತಾರದ ಉತ್ತರ, ಮತ್ತೀಗ ಬಿಚ್ಚಿಕೊಳ್ಳುತ್ತಿದೆ. ಮಹಾಭಾರತದ ಒಂದಂಶ ಅದೋ... ಪಾಕಿಸ್ತಾನದ ದಾಯಾದಿ, ದಾನವ ಶಕ್ತಿಗಳು ಹತ್ತಿರವಾಗುತ್ತಿರುವುದರ ಹೆಜ್ಜೆ ಸಪ್ಪಳ ಕಿವಿಗಳಿಗೆ ಬಡಿಯುತ್ತಿದೆ. ಅವತ್ತು ಪಾಂಡವರ ಸೈನ್ಯದ ಮುಂಚೂಣಿಯಲ್ಲಿದ್ದ ಅರ್ಜುನ ಅಮಿತ ಯುದ್ದೋತ್ಸಾಹದಿಂದ ಕುರುಕ್ಷೇತ್ರಕ್ಕೆ ಬಂದಿದ್ದೇನೋ ಖರೆ, 'ದುರ್ಬುದ್ಧಿಯ ದುರ್ಯೋಧನನಿಗೆ ನೆರವಾಗಲು ಯಾರೆಲ್ಲಾ ಬಂದಿದ್ದಾರೆ ಎಂದು ನೋಡುತ್ತೇನೆ. ಎರಡೂ ಸೈನ್ಯಗಳ ನಡುವೆ ನನ್ನ ರಥ ನಿಲ್ಲಿಸು' ಎಂದುಸಾರಥಿ ಕೃಷ್ಣನಿಗೆ ಹೇಳಿದ್ದು ಆಯಿತು. ಅಂತೆಯೇ ಕೌರವರ ಗುಂಪಿನಲ್ಲಿ ಸಂಬಂಧಿಕರು, ಸಹೋದರರು ಹಾಗೂ ಗುರುವೃಂದ ಕಾಣುತ್ತಲೇ ಯುದ್ಧದ ನಿರರ್ಥಕತೆ ಬಗ್ಗೆ ಯೋಚಿಸುತ್ತಾ ಗಾಂಡೀವ ಧನುವನ್ನು ಕೈ ಚೆಲ್ಲುವುದಕ್ಕೂ ಹೆಚ್ಚು ಹೊತ್ತು ಹಿಡಿಯಲಿಲ್ಲ. ಪರಿಣಾಮವಾಗಿ ಧರ್ಮಯುದ್ಧ ಅದ್ಯಾವ ದಿಕ್ಕು ಹಿಡಿದು ಬಿಡುತ್ತಿತ್ತೋ. ಆದರಲ್ಲಿ ನಿರ್ದೇಶನಕ್ಕೆ ಕೃಷ್ಣನೊಬ್ಬನಿದ್ದ....
ಇವತ್ತು...
ಸಾರಥಿಯೇ ದಿಕ್ಕಿಲ್ಲದ ಭಾರತ ಸೆಕ್ಯುಲರ್ ಭೂಮಿಕೆಯಲ್ಲಿ ನಿಂತು ಕುರುಕ್ಷೇತ್ರದ ಅರ್ಜುನನಿಗಿಂತ ಸಾವಿರ ಪಟ್ಟು ಅಧೀರವಾಗಿ ತಲ್ಲಣಿಸಿದೆ. ಪಾಕಿಸ್ತಾನವೆಂಬ ಪೈಶಾಚಿಕ ಶಕ್ತಿ ಮೊನ್ನೆ ನಮ್ಮ ಐವರು ಯೋಧರನ್ನು ಕೊಂದಿದ್ದು ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ಹಿಸ್ಸೆಯಾದ ಗಳಿಗೆಯಿಂದಲೂ ಆಸುರಿ ಶಕ್ತಿಯ ರೂಪಕವಾಗಿಯೇ ಇದೆ ಪಾಕಿಸ್ತಾನ.
ತಾವೆಂದೂ ಉದ್ಧಾರದ ಮಾರ್ಗ ಹಿಡಿಯದೇ ಬೇರೆಯವರ ಉನ್ನತಿ ಬಗ್ಗೆ ಮತ್ಸರ ಪಡುವುದು ಅಸುರರ ಜಾಯಮಾನ. 'ನೋಡಿ, ದೇವತೆಗಳು ಸುಖ - ಸಂಪತ್ತಿನಲ್ಲಿದ್ದಾರೆ. ನಮ್ಮನ್ನು ಮಾತ್ರ ಕತ್ತಲಲ್ಲಿಟ್ಟಿದ್ದಾರೆ. ನಾವು ಯುದ್ಧ ಮಾಡಿ ಇಂದ್ರ ಪದವಿ ಗಳಿಸೋಣ' ಎಂಬ ಧಾಟಿಯ ಮಾತುಗಳನ್ನು ರಾಕ್ಷಸರಲ್ಲಿ ಕಂಡಿದ್ದೇವೆ. ಪಾಕಿಸ್ತಾನದ ಹಕೀಕತ್ತು ನೋಡಿ. 'ಹಿಂದೂಗಳೊಂದಿಗೆ ಬದುಕಲಾಗದು' ಎಂದು ಧರ್ಮದ ಆಧಾರದಲ್ಲಿ ಪ್ರತ್ಯೇಕ ರಾಷ್ಟ್ರ ಕಟ್ಟಿಕೊಂಡವರು ಅವರು, ಹಾಗೊಂದು ದೇಶವಾದ ಮೇಲೆ ಆರ್ಥಿಕವಾಗಿ ಬಲಾಢ್ಯರಾಗುವುದಕ್ಕೆ, ತಮ್ಮ ನೆಲವನ್ನು ಸ್ವರ್ಗವಾಗಿಸಿಕೊಳ್ಳುವ ಅರ್ಹತೆಗೆ ಅವರೆಂದೂ ಶ್ರಮಿಸಲಿಲ್ಲ. ತುಲನಾತ್ಮಕವಾಗಿ ದೃಢವಾಗಿ ಬೆಳೆದಿರುವ ಭಾರತದ ಅರ್ಥವ್ಯವಸ್ಥೆ, ಜಾಗತಿಕ ಸ್ಥಾನಮಾನಗಳು ಇದೀಗ ಪಾಕಿಸ್ತಾನದ ಕಣ್ಣಿಗೆ 'ಇಂದ್ರ ಪದವಿ'ಯಂತೆ ಕಂಡರೆ ಅದು ನಮ್ಮ ತಪ್ಪೇ?
ಇವರ ಹೊಡೆದಾಟದ ನಮೂನೆಯೂ ಪಕ್ಕಾ ರಾಕ್ಷಸರದ್ದೇ. ಇಲ್ಲಿ ಯಾವ ವೀರೋಚಿತ ನಿಯಮಗಳೂ ಇಲ್ಲ. 1948 ರಲ್ಲಿ ಕಾಶ್ಮೀರವನ್ನು ಕಬಳಿಸುವ ಹುನ್ನಾರದ ನಡೆಯನ್ನೇ ನೋಡೋಣ. ಪುಂಡರ ಕೈಗೆ ಅಲ್ಲಿನ ಸೇನೆ ಶಸ್ತ್ರಾಸ್ತ್ರ ಕೊಟ್ಟು, 'ಸಿಕ್ಕಿದ್ದನ್ನೆಲ್ಲಾ ದೋಚಿಕೊಳ್ಳಿ, ಹೆಣ್ಣುಗಳನ್ನು ಅನುಭವಿಸಿ' ಎಂಬ ಆಮಿಷ ಒಡ್ಡಿ ಮುಂದೆ ನೂಕಿತು. ಭಾರತೀಯ ಸೇನೆ ರಂಗಕ್ಕಿಳಿದು ಇವರನ್ನು ಮಟ್ಟ ಹಾಕುವುದಕ್ಕೂ ಮೊದಲು ಅವರು ನಡೆಸಿದ್ದು ಯುದ್ಧವನ್ನಲ್ಲ. ಅತ್ಯಾಚಾರ- ಅನಾಚಾರಗಳ ಪೈಶಾಚಿಕ ಕೃತ್ಯವನ್ನಷ್ಟೇ. ಕಾರ್ಗಿಲ್‌ಗೂ ಕಳ್ಳರಂತೆಯೇ ಬಂದವರಲ್ಲವೇ?
ರಾಕ್ಷಸ ನೆಲದಲ್ಲಿರುವ ಅರಾಜಕತೆಯೇ ಪಾಕಿಸ್ತಾನಿಯರ ಹೆಗ್ಗುರುತು. ಅದರ ಇತಿಹಾಸದಲ್ಲಿ ಒಂದು ಆವಧಿಗೆ ಸರಿಯಾಗಿ ಆಡಳಿತ ನಡೆಸಿದ್ದೆಂದರೆ ಜುಲ್ಧಿಕರ್ ಅಲಿ ಭುಟ್ಟೋ ಮೊದಲ ಟರ್ಮ್ ಮಾತ್ರವೇ. ನಂತರ ಕಂಡಿದ್ದೆಲ್ಲಾ ಮಿಲಿಟರಿ ದಂಗೆಗಳೇ. ತಮ್ಮವರನ್ನೇ ಕೊಂದುಕೊಳ್ಳುತ್ತಾ ಸ್ವಾತಂತ್ರ್ಯದ ಅರ್ಥವನ್ನೇ ಹೊಸಕಿರುವ ಇವರು ಜಗತ್ತಿಗೆ ಧರ್ಮಸಂದೇಶ ಕೊಡಲು ಹೊರಟಿರುವುದು ಹಾಸ್ಯಾಸ್ಪದ.
ಪಾಕಿಸ್ತಾನದ ಸೇನೆ ಮತ್ತು ಆಡಳಿತ ಕೆಲಭಾಗ ಜಿಹಾದಿ ಶಕ್ತಿಗಳ ವಶವಾಗಿದೆ. ಆದರೆ ಈ ಅಸುರೀ ಶಕ್ತಿಯನ್ನು ಇಡೀ ಪಾಕಿಸ್ತಾನದ ಮೇಲೆ ಹೊರಿಸುವುದು ತಪ್ಪಾಗುತ್ತದೆ ಎಂಬುದು ಕೆಲವರ ವಾದ. ಪೂರ್ತಿ ಕೆಟ್ಟುನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾಗಿ ಸಮಯ ತೋರಿಸುವಂತೆ ಸೈತಾನರ  ಪಾಳಯದಲ್ಲೂ ಕೆಲ ನಿರ್ಲಿಪ್ತ ಅಂಶಗಳು ಕಣ್ಣಿಗೆ  ರಾಚುವುದು ಸಹಜ. ಆದರೆ ಪಾಕಿಸ್ತಾನದ ಈ ಜಿಹಾದಿ ಉನ್ಮಾದ ಸರ್ಕಾರ - ಸೇನೆಗೆ ಸೀಮಿತವಾಗಿರದೆ ಸಮಾಜದ ಧೋರಣೆಯನ್ನೇ ರೂಪಿಸಿದೆ ಎಂಬುದು ಸತ್ಯ. 2011 ರಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತ ವಿಶ್ವಸಂಸ್ಥೆ ಆಯೋಗದ ವರದಿ ಇದನ್ನು ಸ್ವಷ್ಟವಾಗಿ ತೆರೆದಿಡುತ್ತದೆ. ಪಾಕಿಸ್ತಾನದ ಪಠ್ಯಗಳನ್ನು ಪರಾಮರ್ಶಿಸಿ, ಅಧ್ಯಾಪಕರು - ವಿದ್ಯಾರ್ಥಿಗಳನ್ನು ಸಂದರ್ಶಿಸಿ ತಯಾರಾದ ವರದಿ ಅದು. ಮುಸ್ಲೀಮೇತರರನ್ನು ಶ್ರದ್ಧಾರಹಿತರು. ಪಾಪಿಷ್ಟರು ಹಾಗೂ ಕೆಳದರ್ಜೆಯವರೆಂದು ಘಂಟಾಘೋಷವಾಗಿ ಸಾರುವ ಪುಸ್ತಕಗಳು 'ಇಂಥ ಕಾಫಿರರನ್ನು ಕೊನೆಗಾಣಿಸುವುದೇ ಜಿಹಾದ್‌ನ ಉದ್ದೇಶ' ಎಂದು ಎಳೆಯ ಮನಸ್ಸುಗಳಿಗೆ ತಿದಿ ಒತ್ತುತ್ತಿವೆ. ಇಂಥ ರಕ್ಕಸ ನೆಲದಿಂದ ಅಜ್ಮಲ್ ಕಸಬ್ ಅಲ್ಲದೇ ಇನ್ಯಾವ ಮಹಾಪುರುಷ ಬಂದಾನು? ನಾಲ್ಕನೇ ತರಗತಿಯ ಪಾಠಗಳ ಕೆಲ ಶೀರ್ಷಿಕೆಗಳು ಹೀಗಿವೆ. 'ಹಿಂದು- ಮುಸ್ಲಿಂ ವ್ಯತ್ಯಾಸ ಮತ್ತು ಪಾಕಿಸ್ತಾನದ ಅಗತ್ಯ', 'ಪಾಕಿಸ್ತಾನದ ವಿರುದ್ಧ ಭಾರತದ ಗುಪಿತ ತಂತ್ರ'.
ಈ ಎಲ್ಲ ಹಿನ್ನೆಲೆಗಳಲ್ಲಿ ಪಾಕಿಸ್ತಾನ ಎಂಬುದು 'ಸಮಸ್ಯೆ'ಯ ಸಾಲಿನಲ್ಲಿ ಇಟ್ಟು ನೋಡುವ ಸಂಗತಿ ಅಲ್ಲ. ಅದೊಂದು ಅಸುರ ಪಡೆ. ಧರ್ಮ ಅರ್ಥಾತ್ ಋಜುಮಾರ್ಗ ಉಳಿಯಬೇಕೆಂದರೆ ಅದರ ದಮನ ಅನಿವಾರ್ಯ. 'ಧರ್ಮಯುದ್ಧ'ದ ಮಾತನ್ನು ವಾಸ್ತವವಾಗಿ ಆಡಬೇಕಿರುವುದು ಭಾರತ. ಆದರೆ ಇಲ್ಲಿ 'ಧರ್ಮ' ಮತ್ತು 'ಯುದ್ಧ' ಎರಡೂ ಪದಗಳನ್ನು ಅಸ್ಪೃಶ್ಯವಾಗಿ ನೋಡುವ ಮಡಿವಂತಿಕೆ. ಜತೆಗೊಂದಿಷ್ಟು ಅರ್ಜುನ ಉವಾಚಗಳು.
- ಮುಸ್ಲಿಮರು ನಮ್ಮ ಸಹೋದರರು ಎಂಬ ಭಾವನೆಯಿಂದ ನೋಡೋಣ. ಎಷ್ಟೆಂದರೂ ನೆರೆಹೊರೆ (ನಮ್ಮವರಾದ ಕೌರವರನ್ನು ನಾವು ಕೊಲ್ಲಬಾರದು. ಮಾಧವ, ನಮ್ಮವರನ್ನೇ ಕೊಂದು ಹೇಗೆ ಸುಖಿಗಳಾಗುವೆವು?)
    ಪಾಕಿಸ್ತಾನದಲ್ಲೂ ಉದಾರವಾದಿಗಳಿದ್ದಾರೆ, ಕವಿಗಳಿದ್ದಾರೆ, ಚಿಂತಕರಿದ್ದಾರೆ, ಮುಗ್ಧರಿದ್ದಾರೆ. (ಕೌರವರ ಪಾಳಯದಲ್ಲೂ ಪಾಂಡವರಿಗೆ ಪೂಜ್ಯರೆನಿಸಿದ ಭೀಷ್ಮ, ದ್ರೋಣರಿದ್ದರು. ಹಾಗೆಂದು ಕೊನೆತನಕ ಸಂಧಾನವನ್ನೇ ಮಾಡುತ್ತ ಕೂರಲಾಗದಲ್ಲ. ಕೌರವರಂದು 'ಸೂಜಿಮೊನೆಯಷ್ಟೂ ಜಾಗ ಕೊಡೆವು' ಎಂದರು. ಪಾಕಿಸ್ತಾನದ ದಾಯಾದಿಗಳ ಎದೆಯಲ್ಲೂ ಕಾಫಿರರಿಗೆ ಅದೇ ಸ್ಥಿತಿ!)
    ಪಶ್ಚಾತ್ತಾಪವಿಲ್ಲದ ಪಾತಕಿಯನ್ನು ನಿರ್ದಯವಾಗಿ ಸಂಹರಿಸು ಎಂಬುದೇ ನಮ್ಮ ಪುರಾಣ - ಪರಂಪರೆಗಳು ಸಾರುವ ಸಂದೇಶ. ಹೆಂಗಸರ ವಿಚಾರದಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದ ರಾವಣನಿಗೆ ಪಾಸಿಟಿವ್ ಮುಖವೂ ಇತ್ತು. ಆದರೆ ತನ್ನ ಕೃತ್ಯದ ಬಗ್ಗೆ ಪಶ್ಚಾತಾಪ ಪಡೆದ, ವಿಭೀಷಣನಂತವರ ಸಲಹೆಗೆ ಬೆಲೆಕೊಟ್ಟು ತನ್ನ ತಪ್ಪು ತಿದ್ದಿಕೊಳ್ಳಲು ಮುಂದಾಗದ ಆತನನ್ನು ರಾಮ ಕ್ಷಮಿಸುವ ಪ್ರಶ್ನೆಯೇ ಇರಲಿಲ್ಲ. ಪಾಕಿಸ್ತಾನದಲ್ಲಿ ಉದಾರವಾದಿಗಳ ದಂಡು ಇದ್ದಿರಬಹುದು. ಆದರೆ ಅವರ ಮಾತಿಗೆ ಅಸುರ ವ್ಯವಸ್ಥೆಯಲ್ಲಿ ಬೆಲೆ ಎಲ್ಲಿದೆ? ಅಂಥ ವ್ಯವಸ್ಥೆಯೊಂದಿಗೆ ಸಂಧಾನ - ಮಾತುಕತೆಗಳಿಗೆ ಅರ್ಥವೇನಿದೆ?
    1990ರ ದಶಕದಲ್ಲಿ ಐದು ಲಕ್ಷ ಕಾಶ್ಮೀರಿ ಪಂಡಿತರನ್ನು ನಿರಾಶ್ರಿತರನ್ನಾಗಿ ಮಾಡಿದ, ಕೊಲೆ-ಅತ್ಯಾಚಾರಗಳ ಮೂಲಕ ಕಣಿವೆಯ ಚಹರೆಯನ್ನೇ ಬದಲಿಸಿದ ಜಹಾದಿ ಅಟ್ಟಹಾಸ ನೋಡಿದ್ದಾಗಿದೆ. ಆ ನಂತರ ಭಾರತದ ಪ್ರಮುಖ ನಗರಗಳಲ್ಲಿ ಲೆಕ್ಕವಿಲ್ಲದಷ್ಟು ಬಾಂಬ್ ಸ್ಫೋಟಗಳಾಗಿವೆ. ಮುಂಬೈ ದಾಳಿಯಂಥ ಅಮಾನವೀಯ ಅಧ್ಯಾಯವೂ ತೆರೆದುಕೊಂಡಿತು. ಇವೆಲ್ಲದರ ನಂತರವೂ ಅಸುರರ ಪಡೆಯನ್ನು ಸೆಣೆಸುವುದಕ್ಕೆ ಹಿಂದೇಟು ಹಾಕುತ್ತಿರುವ, ಬೇರೆ ಸಮಸ್ಯೆಗಳತ್ತ ಬೊಟ್ಟು ಮಾಡಿ ಪಾಕ್ ಘಟನೆಯನ್ನು ಗೌಣವಾಗಿಸುತ್ತಿರುವ ನಮ್ಮವರ ನಡೆ ಮತ್ತು ಕೃಷ್ಣನ ಮಾತುಗಳನ್ನೇ ನೆನಪಿಸುತ್ತದೆ.
'ನೀನು ಯಾರಿಗಾಗಿ ಅಳಬಾರದೋ ಅವರಿಗಾಗಿ ಅಳುತ್ತಿ. ಜಾಣನಂತೆ ಮಾತುಗಳನ್ನು ಆಡುತ್ತಿದ್ದೀಯ. ತಿಳಿದವರು ಸತ್ತವರಿಗಾಗಲಿ ಸಾಯುವವರಿಗಾಗಲೀ ಅಳುವುದಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ - ಪಾಕ್ ಗಡಿಯಲ್ಲಿ ಕದನವಿರಾಮದ ಉಲ್ಲಂಘನೆ ಶೇಕಡ 80 ರಷ್ಟು ಹೆಚ್ಚಿರುವುದಾಗಿ ಸಾರುತ್ತದೆ ವರದಿ. ಭದ್ರತಾ ಪರಿಣತರೆಲ್ಲ ಅಭಿಪ್ರಾಯ ಪಡುವಂತೆ ಭವಿಷ್ಯದ ಚಿತ್ರಣ ಇನ್ನಷ್ಟು ಬಿಗಡಾಯಿಸಿಕೊಂಡಿದೆ. ಏಕೆಂದರೆ ಅತ್ತ ಆಪ್ಘಾನಿಸ್ತಾನದಲ್ಲಿ ಅಮೆರಿಕವು ಹಂತ ಹಂತವಾಗಿ ತನ್ನ ಸೇನಾ ಹಿಂತೆಗೆದ ಪ್ರಕ್ರಿಯೆ ಆರಂಭಿಸಿದೆ. ಈವರೆಗೆ ಜಿಹಾದಿ ಅಸುರ ಶಕ್ತಿಗಳ ಆಪ್ಘನ್ ನೆಲದಲ್ಲಿ ಅಮೆರಿಕವನ್ನು ಎದುರಿಸುವುದರಲ್ಲಿ ತೊಡಗಿಸಿಕೊಂಡಿದ್ದವು. ಅವೆಲ್ಲವೂ ಈಗ ಒಗ್ಗೂಡಿ ಭಾರತದ ಬಾಗಿಲಿಗೆ ಬರಲಿವೆ. ಇತ್ತೀಚೆಗೆ ಕಾಬೂಲ್‌ನಲ್ಲಿರುವ ಭಾರತೀಯ ದೂತಾವಾಸದ ಎದುರಿನ ಬಾಂಬ್‌ಸ್ಫೋಟ ಇದರ ಪ್ರಾರಂಭಿಕ ಸೂಚನೆ.
ಒಟ್ಟಿನಲ್ಲಿ ಭಾರತ-ಪಾಕ್ ಸಂಬಂಧವನ್ನು 'ಶಾಂತಿ-ಸೌಹಾರ್ದ'ಗಳ ರೋಚಕ ಪ್ಯಾಕೆಟ್‌ನಲ್ಲಿ ಸುತ್ತಿಟ್ಟು ಪ್ರದರ್ಶಿಸುವ ಶ್ರಮವನ್ನು ಯಾರೆಷ್ಟೇ ತೆಗೆದುಕೊಂಡರೂ ವಾಸ್ತವದಲ್ಲಿ ಅದು ಪಾಂಡುವ - ಕೌರವ ಚೌಕಟ್ಟಿನಲ್ಲಿ ................... ಕೊಳ್ಳದೇ ಇರದು. ಅಂಥ ಸಮರಕ್ಕೆ ಅವಧಿ ಹಿಡಿದಿಟ್ಟು ಹಾಗೂ ಯುದ್ಧದ ಸ್ವರೂಪ ಬೇರೆ ಇದ್ದೀತು. ಪೂರ್ಣ ಪ್ರಮಾಣದ ಯುದ್ಧವಲ್ಲದಿದ್ದರೂ ಅಮೆರಿಕವು ಪಾಕ್ ನೆಲದಲ್ಲಿದ್ದ ಬಿನ್ ಲಾಡೆನ್‌ನನ್ನು ಹೊಡೆದು ಬಂದಂತೆ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್‌ರಂಥ ಪಾಕ್ ನೆಲದ ರಾಕ್ಷಸರನ್ನು ಸಂಹರಿಸಬೇಕಾದ ಅಗತ್ಯ ಭಾರತಕ್ಕಿದೆ. ಇಂಥದೊಂದು ತಾಕತ್ತೂ ಭಾರತಕ್ಕಿದೆ. ಬೇಕಿರುವುದೊಂದು ರಾಜಕೀಯ ನಾಯಕತ್ವ. ಸೇನಾನಿ ಅರ್ಜುನನಿಗೆ ಶ್ರೀಕೃಷ್ಣ ಸಾರಥಿಯಾದ ಹಾಗೆ, ಈಗಿರುವ ಶೂನ್ಯವನ್ನು ಬೇಧಿಸಿ ಆತ ಬರುತ್ತಾನೆಂಬುದನ್ನು ಕಾಯೋಣ. ಹಾಗೆ ಬಂದವನು ಧರ್ಮಯುದ್ಧದ ವ್ಯಾಖ್ಯೆಯನ್ನು ಮತ್ತೆ ನೆನಪಿಸಿ ಉತ್ತೇಜಿಸಲಿ.
ಹತೋವಾ ಪ್ರಾಪ್ಸಸಿ ಸ್ವರ್ಗಂ
ಜೀತ್ವಾ ವಾ ಭೋಕ್ಷ್ಯಸೇ ಮಹೀಮ್‌
ತಸ್ಮಾದುತ್ತಿಷ್ಠ ಕೌಂತೇಯ
ಯುದ್ಧಾಯ ಕೃತನಿಶ್ಚಯಃ॥
(ಸತ್ತರೆ ಸ್ವರ್ಗವನ್ನು ಪಡೆಯುತ್ತಿ. ಗೆದ್ದರೆ ಭೂಮಿಯನ್ನು ಅನುಭವಿಸುತ್ತಿ. ಕಾದಾಡುವ ನಿರ್ಧಾರ ಮಾಡಿ ಏಳು ಅರ್ಜುನ!)
ಯದಹಂಕಾರಮಾಶ್ರಿತ್ಸ
ನ ಯೋತ್ಸ್ಯ ಇತಿ ಮನ್ಸಸೆ
ಮಿಥ್ಸೈಷ ವ್ಯವಸಾಸ್ತೇ
ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ॥
ದುರಭಿಮಾನವನ್ನು ತಳೆದು ಯುದ್ಧವನ್ನು ಮಾಡುವುದಿಲ್ಲವೆಂದು ಯೋಚಿಸುತ್ತೀಯಲ್ಲ! ನಿನ್ನ ಈ ನಿಶ್ಚಿಯವು ಸುಳ್ಳು. ನಿನ್ನ ಹುಟ್ಟುಗುಣವು ನಿನ್ನನ್ನು ಯುದ್ಧಕ್ಕೆ ನೂಕಿಯೇ ನೂಕುತ್ತದೆ.


- ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.